ಇಸ್ಲಾಮಾಬಾದ್ : ಪಾಕಿಸ್ತಾನ ಹೆದ್ದಾರಿಯನ್ನು ಅಡವಿಟ್ಟು ದುಬಾರಿ ಬಡ್ಡಿಗೆ ಸಾಲವನ್ನು ಪಡೆದುಕೊಂಡಿದೆ. ಲಾಹೋರ್ ಇಸ್ಲಾಮಾಬಾದ್ ನಡುವಿನ ಹೆದ್ದಾರಿಯ ಒಂದು ಭಾಗವನ್ನ ಅಡಮಾನ ಇರಿಸಿಕೊಂಡು 1 ಶತ ಕೋಟಿ ಅಮೆರಿಕನ್ ಡಾಲರ್ ಮೊತ್ತದ ಸಾಲ ಸಂಗ್ರಹಿಸಿದೆ.
ಸೌದಿ ಅರೇಬಿಯಾದಿಂದ ಪಡೆದಿರುವ 3 ಬಿಲಿಯನ್ ಡಾಲರ್ ಹಣದಲ್ಲಿ 35,200 ಕೋಟಿ ರೂ. ಅನ್ನು ಪಾಕ್ ಈಗಾಗಲೇ ವೆಚ್ಚ ಮಾಡಿದ್ದು, ಇದರಿಂದಾಗಿ ಜ.14ರ ವೇಳೆಗೆ ಪಾಕಿಸ್ತಾನದ ವಿದೇಶಾಂಗ ವಿನಿಮಯ ಮೀಸಲು 17 ಬಿಲಿಯನ್ ಡಾಲರ್‌ನಿಂದ ಕುಸಿತವಾಗಿದೆ. ಈ ಹಿನ್ನೆಲೆ ತನ್ನ ವಿದೇಶಾಂಗ ವಿನಿಮಯ ಸಂಗ್ರಹದಲ್ಲಿ ಇನ್ನಷ್ಟು ಕುಸಿತ ತಡೆಯಲು ಸಾಲ ಪಡೆಯಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ ಎಂದು ಮಾಧ್ಯಮ ವರದಿ ಮಾಡಿದ್ದು, ಪಾಕಿಸ್ತಾನ ಈಗ 7 ವರ್ಷ ಅವಧಿಯ ಇಸ್ಲಾಮಿಕ್ ಬಾಂಡ್(ಸುಕುಕ್) ಮೂಲಕ 1 ಶತಕೋಟಿ ಡಾಲರ್ ಸಾಲವನ್ನು ಪಡೆದುಕೊಂಡಿದೆ. ಈ ಸಾಲಕ್ಕೆ ಶೇ.7.95 ಬಡ್ಡಿದರ ಅಲ್ಲದೇ ಲಾಹೋರ್-ಇಸ್ಲಾಮಾಬಾದ್ ಹೆದ್ದಾರಿಯ ಸ್ವಲ್ಪ ಭಾಗವನ್ನು ಅಡಮಾನವಿರಿಸಿದೆ.
ಇದನ್ನೂ ಓದಿ:ಯುವತಿಯ ಬ್ಲಾಕ್ಮೇಲ್ ಭೂತಕ್ಕೆ ಸಿಲಿಕಾನ್ ಸಿಟಿಯಲ್ಲಿ ಇಂಜಿನಿಯರ್ ಬಲಿ…!