ಕೊಪ್ಪಳ : ಕೊಪ್ಪಳ ಮೊದಲ ಎಲೆಕ್ಷನ್ನಿಂದ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು. 1983ರಲ್ಲಿ ರಾಜ್ಯದಲ್ಲಿ ಬೀಸಿದ್ದ ಜನತಾಪಕ್ಷದ ಅಲೆಯ ನಡುವೆಯೂ ಇಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದ್ರೆ, 1985ರಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನ ಭೇದಿಸಲು ಜನತಾ ಪಕ್ಷ ಯಶಸ್ವಿಯಾಗಿತ್ತು. ಬಳಿಕ ನಡೆದ ಎರಡು ಚುನಾವಣೆಗಳಲ್ಲಿ ಇಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದಿದ್ರು. 1994ರಲ್ಲಿ ಮೊದಲ ಬಾರಿಗೆ ಸಂಗಣ್ಣ ಕರಡಿ ಪಕ್ಷೇತರವಾಗಿಸ್ಪರ್ಧಿಸಿ ಗೆದ್ರೆ, 1999ರಲ್ಲಿ ಜೆಡಿಯು ಅಭ್ಯರ್ಥಿಯಾಗಿ ಗೆದ್ದಿದ್ರು. 2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಂಗಣ್ಣ ಕರಡಿ 2004ರಲ್ಲಿ ಸೋತ್ರೆ, 2008ರಲ್ಲಿ ಜೆಡಿಎಸ್ನಿಂದ ಸ್ಪರ್ಧಿಸಿ ಗೆದ್ದಿದ್ರು. 2004ರಲ್ಲಿ ಈಗಿನ ಶಾಸಕ ರಾಘವೇಂದ್ರ ಹಿಟ್ನಾಳ್ ತಂದೆ, ಬಸವರಾಜ ಹಿಟ್ನಾಳ್ ಗೆದ್ದಿದ್ರು. 2013, 2018ರಲ್ಲಿ ರಾಘವೇಂದ್ರ ಹಿಟ್ನಾಳ್ ಸತತವಾಗಿ ಗೆದ್ದಿದ್ದು, ಈ ಬಾರಿ ಹ್ಯಾಟ್ರಿಕ್ ಬಾರಿಸಲು ಹಾತೊರೆಯುತ್ತಿದ್ದಾರೆ. ಇಂತಾ ಕ್ಷೇತ್ರ 2018ರ ಚುನಾವಣೆ ಫಲಿತಾಂಶ ನೋಡೋದಾದ್ರೆ.
2018ರ ಚುನಾವಣೆ ಫಲಿತಾಂಶ
ರಾಘವೇಂದ್ರ ಹಿಟ್ನಾಳ್(ಕಾಂಗ್ರೆಸ್) – 98,783
ಅಮರೇಶ್ ಸಂಗಣ್ಣ ಕರಡಿ(ಬಿಜೆಪಿ) – 72,432
ಗೆಲುವಿನ ಅಂತರ – 26,351
ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ರಾಘವೇಂದ್ರ ಹಿಟ್ನಾಳ್ 98 ಸಾವಿರದ 783 ಮತಗಳನ್ನ ಪಡೆದಿದ್ರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಅಮರೇಶ್ ಸಂಗಣ್ಣ ಕರಡಿ 72 ಸಾವಿರದ 432 ಮತಗಳನ್ನ ಪಡೆದಿದ್ರು. ಈ ಮೂಲಕ ರಾಘವೇಂದ್ರ ಹಿಟ್ನಾಳ್ 26 ಸಾವಿರದ 351 ಮತಗಳ ಅಂತರದ ಭರ್ಜರಿ ಜಯ ದಾಖಲಿಸಿದ್ರು.
ಕೊಪ್ಪಳ ಜಾತಿ ಸಮೀಕರಣ
ಲಿಂಗಾಯತ – 56,000
ಮುಸ್ಲಿಂ – 35,000
ಕುರುಬ – 32,000
ಪರಿಶಿಷ್ಟ ಜಾತಿ – 31,000
ಪರಿಶಿಷ್ಟ ಜಾತಿ – 21,000
ಇತರ – 63,000
ಕೊಪ್ಪಳ ಕ್ಷೇತ್ರದಲ್ಲಿ ಲಿಂಗಾಯತದ ಸಮುದಾಯದ 56 ಸಾವಿರ ಮತದಾರರಿದ್ದು, ಇವರು ಬಿಜೆಪಿಯ ಪ್ರಬಲ ವೋಟ್ ಬ್ಯಾಂಕ್ ಆಗಿದ್ದಾರೆ. ಮುಸ್ಲಿಂ ಸಮುದಾಯದ 35 ಸಾವಿರ ಮತದಾರರು ಕಾಂಗ್ರೆಸ್ ಮತ ಬ್ಯಾಂಕ್ ಆಗಿದ್ದಾರೆ. ಕುರುಬ ಸಮುದಾಯದ 32 ಸಾವಿರ ಮತದಾರರಿದ್ದು, ಸಿದ್ದರಾಮಯ್ಯ ಕಾರಣಕ್ಕಾಗಿ ಇವರೆಲ್ಲಾ ಕಾಂಗ್ರೆಸ್ಗೆ ಮತ ಚಲಾಯಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯ 31 ಸಾವಿರ ಮತದಾರರಿದ್ದು ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಸಿಕೊಂಡು ಬರ್ತಿದ್ದಾರೆ. ಪರಿಶಿಷ್ಟ ಜಾತಿಯ 21 ಸಾಇರ ಮತದಾರರು ಬಿಜೆಪಿ ಪರ ಒಲವು ಹೊಂದಿದ್ದಾರೆ. ಇತರ ಸಮುದಾಯಗಳ 63 ಸಾವಿರ ಮತದಾರರು ಗೆಲ್ಲುವ ಅಭ್ಯರ್ಥಿ ಪರ ಮತ ಚಲಾಯಿಸಿಕೊಂಡು ಬಂದಿದ್ದಾರೆ ಅನ್ನೋದಕ್ಕೆ ಚುನಾವಣೆ ಫಲಿತಾಂಶಗಳು ಸಾಕ್ಷಿಯಾಗಿವೆ.
ಕೊಪ್ಪಳ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಕಳೆದ 10 ವರ್ಷಗಳಿಂದ ಶಾಸಕರಾಗಿದ್ದಾರೆ. ಇವರು ಈ ಬಾರಿ ಹ್ಯಾಟ್ರಿಕ್ ಗೆಲುವಿನ ಕನಸು ಕಾಣುತ್ತಿದ್ದು, ಕ್ಷೇತ್ರದಲ್ಲಿ ಮುಸ್ಲಿಂ ಮತ್ತು ಕುರುಬ ಸಮುದಾಯದ ಮತಗಳು ಹೆಚ್ಚಿರೋದು ಇವರಿಗೆ ವರವಾಗಿದೆ. ರಾಘವೇಂದ್ರ ಹಿಟ್ನಾಳ್ ಮಾಜಿ ಸಿಎಂ ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರೋದ್ರಿಂದ, ಕುರುಬ ಸಮುದಾಯ ಅವರ ಬೆನ್ನಿಗೆ ನಿಂತಿದೆ. ಕ್ಷೇತ್ರದಲ್ಲಿ ಕಳೆದ 10 ವರ್ಷಗಳಲ್ಲಿ ರಾಘವೇಂದ್ರ ಹಿಟ್ನಾಳ್ ಮಾಡಿರೋ ಕೆಲಸಗಳೇ ಅವರ ಕೈ ಹಿಡಿಯಲಿವೆ. ಕ್ಷೇತ್ರದಲ್ಲಿ ಎಲ್ಲೆಡೆ ರಸ್ತೆಗಳ ಡಾಂಬರೀಕರಣ, ಹಳ್ಳಿಗಳಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕಗಳ ವ್ಯವಸ್ಥೆ ಮಾಡಿದ್ದು, ಇವರಿಗೆ ನೆರವಾಗಲಿದೆ.
ಕೊಪ್ಪಳದಲ್ಲಿ ಈ ಬಾರಿ ರಾಘವೇಂದ್ರ ಹಿಟ್ನಾಳ್ ಗೆದ್ದರೆ ಹ್ಯಾಟ್ರಿಕ್ ಜಯ ಸಾಧಿಸಿದಂತಾಗುತ್ತೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರಾಘವೇಂದ್ರ ಹಿಟ್ನಾಳ್ ಈ ಬಾರಿಗೆ ಮಂತ್ರಿಗಿರಿ ಒಲಿಯೋ ಸಾಧ್ಯತೆಯೂ ಹೆಚ್ಚಾಗಿದೆ. ಹೀಗಾಗಿ ಕ್ಷೇತ್ರದ ಜನ ರಾಘವೇಂದ್ರ ಹಿಟ್ನಾಳ್ ಪರ ಒಲವು ಹೊಂದಿದ್ದಾರೆ. ರಾಘವೇಂದ್ರ ಹಿಟ್ನಾಳ್ ಹಿಂದಿನಿಂದಲೂ ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ಗುರುತಿಸಿಕೊಂಡಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಮತದಾರರು ಹೆಚ್ಚಿದ್ರೂ, ಇಲ್ಲಿ ಅಹಿಂದ ಮತದಾರರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಇದೇ ಕಾರಣಕ್ಕೆ ಇಲ್ಲಿ ಬಿಜೆಪಿ ಹಿನ್ನಡೆ ಅನುಭವಿಸುತ್ತಿದ್ದು, ಕ್ಷೇತ್ರದ ಅಹಿಂದ ಮತಗಳೇ ಹಿಟ್ನಾಳ್ಗೆ ಶ್ರೀರಕ್ಷೆಯಾಗಿವೆ.
ಇನ್ನು ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಏರ್ಪಟ್ಟಿದ್ದು, ಸಂಗಣ್ಣ ಕರಡಿ, ಅವರ ಅಮರೇಶ್ ಸಂಗಣ್ಣ ಕರಡಿ ಮತ್ತು ಸಿ.ವಿ.ಚಂದ್ರಶೇಖರ್ ನಡುವೆ ಟಿಕೆಟ್ಗಾಗಿ ಪೈಪೋಟಿ ನಡೀತಿದೆ. ಇಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಮತ್ತೊಬ್ಬರು ಬಂಡಾಯ ಏಳಲಿದ್ದಾರೆ. ಇದು ಹಿಟ್ನಾಳ್ಗೆ ವರವಾಗಲಿದ್ದು, ಸುಲಭವಾಗಿ ಗೆಲ್ಲೋ ಸಾಧ್ಯತೆಗಳು ಹೆಚ್ಚಾಗಿವೆ. ಇನ್ನು ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರ ವಿರುದ್ಧ ಮುನಿಸಿಕೊಂಡಿದ್ದಾರೆ. ಸಂಗಣ್ಣ ಕರಡಿ ಸಂಸದರಾಗಿದ್ದರೂ, ಬಿಜೆಪಿ ಕಾರ್ಯಕರ್ತರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲರಾಗಿದ್ದಾರೆ ಅನ್ನೋ ಆರೋಪ ಕೇಳಿ ಬರ್ತಿದೆ. ಇದ್ರಿಂದ ಬಿಜೆಪಿಗೆ ಹಿನ್ನಡೆಯಾಗಿದೆ.
ಬಿಜೆಪಿಯಲ್ಲಿ ಎಂಎಲ್ಸಿಯಾಗಿದ್ದ ಗಣಿ ಧಣಿ ಜನಾರ್ದನ ರೆಡ್ಡಿ ಕರ್ನಾಟಕ ರಾಜ್ಯ ಪ್ರಗತಿ ಪಕ್ಷವನ್ನ ಸ್ಥಾಪಿಸಿದ್ದಾರೆ. ರೆಡ್ಡಿ ಪಾರ್ಟಿ ಬಳ್ಳಾರಿಯಲ್ಲಿ ಸದ್ದು ಮಾಡ್ತಿರೋದಕ್ಕಿಂತಾ ಹೆಚ್ಚು ಸದ್ದನ್ನು ಕೊಪ್ಪಳದಲ್ಲಿ ಮಾಡ್ತಿದೆ. ಬಿಜೆಪಿಯಲ್ಲಿದ್ದವರೇ ಪ್ರತ್ಯೇಕ ಪಕ್ಷ ಸ್ಥಾಪಿಸಿರೋದ್ರಿಂದ, ಬಿಜೆಪಿ ಕೆಲ ಕಾರ್ಯಕರ್ತರು ಹೊಸ ಪಕ್ಷ ಸೇರುವ ಸಾಧ್ಯತೆ ಇದೆ. ಇದು ಸಹ ಬಿಜೆಪಿಗೆ ನಡುಕ ಉಂಟು ಮಾಡಿದ್ದು, ಕೊಪ್ಪಳದಲ್ಲಿ ಜನಾರ್ದನ ರೆಡ್ಡಿ ಪಕ್ಷದಿಂದ ಬಿಜೆಪಿ ಭಾರಿ ಏಟು ಬೀಳೋ ಭಯ ಕಾಡ್ತಿದೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದಕ್ಕೆ ಚುನಾವಣೆ ಫಲಿತಾಂಶ ಉತ್ತರ ನೀಡಬಹುದು.
ಕೊಪ್ಪಳದಲ್ಲಿ ಬಿಟಿವಿ ನಡೆಸಿರೋ ಮೆಗಾ ಸರ್ವೆಯ ಸದ್ಯದ ಟ್ರೆಂಡ್ ಪ್ರಕಾರ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ್ ಹ್ಯಾಟ್ರಿಕ್ ಗೆಲುವು ಸಾಧಿಸೋ ಸಾಧ್ಯತೆಗಳು ಹೆಚ್ಚಾಗಿವೆ.
ಇದನ್ನೂ ಓದಿ : ಮೈಸೂರಿನಲ್ಲಿ “ಜಸ್ಟ್ ಪಾಸ್” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ…