ಯಲಬುರ್ಗಾ : ಕೊಪ್ಪಳ ಜಿಲ್ಲೆಯ ಮತ್ತೊಂದು ಕ್ಷೇತ್ರವಾದ ಯಲಬುರ್ಗಾದಲ್ಲೂ ಎರಡನೇ ಚುನಾವಣೆಯಲ್ಲಿಯೇ ಕ್ಷೇತ್ರದ ಜನ ಕಾಂಗ್ರೆಸ್ಗೆ ಪಾಠ ಕಲಿಸಿದ್ರು. ಕುಷ್ಟಗಿಯಂತೆ ಇಲ್ಲೂ ಲೋಕಸೇವಕ ಸಂಘದ ಅಭ್ಯರ್ಥಿ ಗೆದ್ದಿದ್ರು. 1967ರ ಬಳಿಕ ಇದು ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಇಂತಾ ಕೈ ಭದ್ರಕೋಟೆಯನ್ನ ಛಿದ್ರ ಮಾಡಿದ್ದು ಬೇರಾರು ಅಲ್ಲ.. ಈಗ ಕಾಂಗ್ರೆಸ್ನಲ್ಲಿರೋ ಬಸವರಾಜ ರಾಯರೆಡ್ಡಿ. 1985ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ರಾಯರೆಡ್ಡಿ ಗೆದ್ದಿದ್ರು. ಮೊದಲ ಬಾರಿಗೆ ಗೆದ್ದಿದ್ದು ಮಾತ್ರವೇ ಅಲ್ಲ.. ಕ್ಷೇತ್ರದಲ್ಲಿ ಹ್ಯಾಟ್ರಿಕ್ ಬಾರಿಸಿದ್ರು. ಇಂತಾ ಮುತ್ಸದ್ದಿ ರಾಜಕಾರಣಕಿ 1999ರಲ್ಲಿ ಚುನಾವಣೆಗೆ ಸ್ಪರ್ಧಿಸಿರಲಿಲ್ಲ. ಆದ್ರೆ, 2004ರಲ್ಲಿ ಕಾಂಗ್ರೆಸ್ನಿಂದ ಮತ್ತೆ ಅಖಾಡಕ್ಕೆ ಧುಮುಕಿ, ಮತ್ತೆ ಗೆದ್ದು ಬೀಗಿದ್ರು. 2008ರಲ್ಲಿ ಬಿಜೆಪಿ ಅಭ್ಯರ್ಥಿ ಈಶಣ್ಣ ಗುಳಗಣ್ಣವರ್ ವಿರುದ್ಧ ಸೋತಿದ್ದ ರಾಯರೆಡ್ಡಿ, 2013ರಲ್ಲಿ ಹಾಲಪ್ಪ ಆಚಾರ್ ವಿರುದ್ಧ ಗೆದ್ದಿದ್ರು. 2018ರಲ್ಲಿ ಇದೇ ಹಾಲಪ್ಪ ಆಚಾರ್ ರಾಯರೆಡ್ಡಿಗೆ ಮತ್ತೆ ಸೋಲಿನ ರುಚಿ ತೋರಿಸಿದ್ದ ಗೆದ್ದಿದ್ದೇ ಅಲ್ದೆ, ಸಚಿವರು ಕೂಡ ಆಗಿದ್ದಾರೆ. ಹೀಗಾಗಿ 2018ರ ಫಲಿತಾಂಶವನ್ನ ಒಮ್ಮೆ ನೋಡೋದಾದ್ರೆ.
2018ರ ಚುನಾವಣೆ ಫಲಿತಾಂಶ
ಹಾಲಪ್ಪ ಆಚಾರ್(ಬಿಜೆಪಿ) – 79,072
ಬಸವರಾಜ ರಾಯರೆಡ್ಡಿ(ಕಾಂಗ್ರೆಸ್) – 65,754
ಗೆಲುವಿನ ಅಂತರ – 13,318
ಬಿಜೆಪಿಯಿಂದ ಸ್ಪರ್ಧಿಸಿದ್ದ ಹಾಲಪ್ಪ ಆಚಾರ್ 79 ಸಾವಿರದ 72 ಮತಗಳನ್ನ ಪಡೆದಿದ್ರೆ, ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಬಸವರಾಜ ರಾಯರೆಡ್ಡಿ 65 ಸಾವಿರದ 754 ಮತಗಳನ್ನ ಪಡೆದಿದ್ರು. ಈ ಮೂಲಕ ಬಿಜೆಪಿಯ ಹಾಲಪ್ಪ ಆಚಾರ್ 13 ಸಾವಿರದ318 ಮತಗಳ ಅಂತರದಿಂದ ಗೆದ್ದು ಬೀಗಿದ್ರು.
ಯಲಬುರ್ಗಾ ಜಾತಿ ಸಮೀಕರಣ
ಲಿಂಗಾಯತ – 50,000
ಕುರುಬ – 30,000
ಪರಿಶಿಷ್ಟ ಜಾತಿ – 28,000
ಮುಸ್ಲಿಂ – 19,000
ಪರಿಶಿಷ್ಟ ಪಂಗಡ – 19,000
ಇತರ – 58,000
ಯಲಬುರ್ಗಾ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ 50 ಸಾವಿರ ಮತದಾರರಿದ್ದು ರೆಡ್ಡಿ ಲಿಂಗಾಯತರನ್ನ ಹೊರತು ಪಡಿಸಿ ಉಳಿದವರು ಬಿಜೆಪಿ ವೋಟ್ ಬ್ಯಾಂಕ್ ಆಗಿದ್ದಾರೆ. ಕುರುಬ ಸಮುದಾಯದ 30 ಸಾವಿರ ಮತದಾರರು ಸಿದ್ದರಾಮಯ್ಯ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಪರಿಶಿಷ್ಟ ಜಾತಿಯ 28 ಸಾವಿರ ಮತದಾರರು ಎರಡು ಪಕ್ಷಗಳ ನಡುವೆ ಹಂಚಿ ಹೋಗಿದ್ದಾರೆ. ಮುಸ್ಲಿಂ ಸಮುದಾಯದ 19 ಸಾವಿರ ಮತದಾರರಿದ್ದು, ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದ್ದಾರೆ. ಪರಿಶಿಷ್ಟ ಪಂಗಡದ 19 ಸಾವಿರ ಮತದಾರರಿದ್ದು, ಬಿಜೆಪಿ ಮತಬ್ಯಾಂಕ್ ಆಗಿದ್ದಾರೆ. ಇತರ ಸಮುದಾಯಗಳ 58 ಸಾವಿರ ಮತದಾರರಿದ್ದು, ಇವರೇ ನಿರ್ಣಾಯಕ ಪಾತ್ರವಹಿಸುತ್ತಾರೆ. ಇವರು ಯಾರಿಗೆ ಮತ ನೀಡ್ತಾರೋ ಅವರೇ ಇಲ್ಲಿ ಗೆಲ್ಲೋದು ಅನ್ನೋದಕ್ಕೆ ಫಲಿತಾಂಶಗಳೇ ಉತ್ತಮ ನಿದರ್ಶನಗಳಾಗಿವೆ.
ಬಿಜೆಪಿ ನಾಯಕರ ಪಕ್ಷವಲ್ಲ.. ಕಾರ್ಯಕರ್ತರ ಪಕ್ಷ ಅನ್ನೋದಕ್ಕೆ ಸ್ಪಷ್ಟ ನಿದರ್ಶನ ಒದಗಿಸಿದವರು ಮತ್ಯಾರು ಅಲ್ಲ ಯಲಬುರ್ಗಾದ ಹಾಲಿ ಶಾಸಕ, ಸಚಿವ ಹಾಲಪ್ಪ ಆಚಾರ್. ಹಾಲಪ್ಪ ಆಚಾರ್ ಕೊಪ್ಪಳ ಜಿಲ್ಲೆ, ಯಲಬುರ್ಗಾ ಕ್ಷೇತ್ರದ ಜನರಿಗೆ ಚಿರಪರಿಚಿತರಾಗಿದ್ರು. ಆದ್ರೆ, ರಾಜ್ಯ ಜನರಿಗೆ ಇಂತಾ ಒಬ್ಬ ಶಾಸಕರಿದ್ದಾರೆ ಅಂತಾ ಗೊತ್ತಾಗಿದ್ದೇ ಅವರು ಸಚಿವರಾದ ಬಳಿಕ. ಶಾಸಕರಾದ್ರೂ ಸದ್ದುಗದ್ದಲವಿಲ್ಲದೇ ಪಕ್ಷದ ಸಂಘಟನೆ, ಪಕ್ಷದ ಕಾರ್ಯಕರ್ತರ ಜೊತೆ ಸಂಪರ್ಕ, ಕ್ಷೇತ್ರದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ರು. ಇದನ್ನ ಗಮನಿಸಿದ ಬಿಜೆಪಿ ಹೈಕಮಾಂಡ್ ಹಾಲಪ್ಪ ಆಚಾರ್ಗೆ ಸಚಿವ ಸ್ಥಾನದ ಹೊಣೆ ನೀಡಿತು. ಇದನ್ನು ಸಹ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗ್ತಿದ್ದಾರೆ.
ಯಲಬುರ್ಗಾದಲ್ಲಿ ಈ ಬಾರಿಯೂ ಕ್ಷೇತ್ರದ ಜನ ಹಾಲಪ್ಪ ಆಚಾರ್ಗೆ ಮಣೆ ಹಾಕಲು ಮತದಾರರು ಸಿದ್ಧರಾಗಿದ್ದಾರೆ. ಹಾಲಪ್ಪ ಆಚಾರ್ ಸಚಿವರಾಗಿದ್ರೂ ಕ್ಷೇತ್ರದ ಮತದಾರರ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚಿನ ಆದ್ಯತೆ ನೀಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸರಳ ವ್ಯಕ್ತಿತ್ವ, ಸಜ್ಜನ ರಾಜಕಾರಣಿ ಅನ್ನೋ ಹೆಸರು ಹಾಲಪ್ಪ ಆಚಾರ್ಗಿದೆ.
ಯಲಬುರ್ಗಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆಯಲು ಹಲವರು ಲಾಬಿ ನಡೆಸುತ್ತಿದ್ದಾರೆ. ಇಲ್ಲಿ ಮತ್ತೊಮ್ಮೆ ಬಿಜೆಪಿ ಗೆಲ್ಲುವ ಸಾಧ್ಯತೆ ಕಂಡು ಬರ್ತಿರೋದ್ರಿಂದ ಕೇಸರಿ ಟಿಕೆಟ್ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಹಾಲಪ್ಪ ಆಚಾರ್ ಬದಲು ತಮಗೆ ಟಿಕೆಟ್ ನೀಡುವಂತೆ ಮಾಜಿ ಶಾಸಕ ಈಶಣ್ಣ ಗುಳಗಣ್ಣವರ್ ಪುತ್ರ ನವೀನ್ ಗುಳಗಣ್ಣವರ್ ಒತ್ತಾಯಿಸ್ತಿದ್ದಾರೆ. ಇವರು 2013ರಲ್ಲಿ ಬಿಎಸ್ಆರ್ ಕಾಂಗ್ರೆಸ್ನಿಂದ ಸ್ಪರ್ಧಿಸಿ 10 ಸಾವಿರ ಮತ ಪಡೆದಿದ್ರು. ನವೀನ್ ಜೊತೆಗೆ ಹಾಲಪ್ಪ ವಿರುದ್ಧ ಸಿಡಿದೆದ್ದು ಕೃಷಿ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿರೋ ಶರಣಪ್ಪ ಗುಂಗಾಡಿ ಕೂಡ ಟಿಕೆಟ್ಗೆ ಲಾಬಿ ನಡೆಸ್ತಿದ್ದಾರೆ. ಬಿಜೆಪಿ ಟಿಕೆಟ್ ಸಿಗದಿದ್ರೆ ಪಕ್ಷೇತರವಾಗಿ ಸ್ಪರ್ಧೆಗೆ ಸಿದ್ಧರಾಗಿದ್ದಾರೆ.
ಯಲಬುರ್ಗಾ ಕ್ಷೇತ್ರದಲ್ಲಿ ಈ ಬಾರಿ ಬಸವರಾಜ ರಾಯರೆಡ್ಡಿಗೆ ಕಾಂಗ್ರೆಸ್ ಟಿಕೆಟ್ ಸಿಗೋದು ಬಹುತೇಕ ಖಚಿತವಾಗಿದೆ. ಆದ್ರೆ, ಬಸವರಾಜ ರಾಯರೆಡ್ಡಿ ಗೆಲುವು ಅಷ್ಟು ಸುಲಭವಲ್ಲ. ಕೇವಲ ಚುನಾವಣೆ ಹೊತ್ತಿಗೆ ಮಾತ್ರ ಕ್ಷೇತ್ರಕ್ಕೆ ಬರುತ್ತಾರೆ ಅನ್ನೋ ಬಹುದೊಡ್ಡ ಆರೋಪ ರಾಯರೆಡ್ಡಿ ವಿರುದ್ಧ ಕೇಳಿ ಬರ್ತಿದೆ. ಅಲ್ದೆ, ಸೋತ ಬಳಿಕ ಪಕ್ಷ ಸಂಘಟನೆಯಿಂದ ವಿಮುಖರಾಗಿದ್ದ ರಾಯರೆಡ್ಡಿ ಈಗ ಕ್ಷೇತ್ರಕ್ಕೆ ಬಂದು ಪ್ರಚಾರದಲ್ಲಿ ತೊಡಗಿದ್ದಾರೆ ಅಂತಾ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ. ಬಿಜೆಪಿಗೆ ಹೋಲಿಸಿದ್ರೆ, ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಬಹಳ ಸೊರಗಿದೆ. ಬಿಜೆಪಿಯಷ್ಟು ಸಂಘಟನೆ ಪ್ರಬಲವಾಗಿಲ್ಲ. ಅಲ್ದೆ, ಹಾಲಪ್ಪ ಆಚಾರ್ ವೈಫಲ್ಯವನ್ನ ಎತ್ತಿ ತೋರಿಸುವಲ್ಲಿಯೂ ರಾಯರೆಡ್ಡಿ ವಿಫಲರಾಗಿದ್ದಾರೆ. ಇದರ ಜೊತೆಗೆ ಬಸವರಾಜ ರಾಯರೆಡ್ಡಿ ಜೊತೆಗೆ ಅಮರಗುಂಡಪ್ಪ ಮೇಟಿ ಅನ್ನೋರು ಸಹ ಕಾಂಗ್ರೆಸ್ ಟಿಕೆಟ್ಗೆ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
2008ರ ಬಳಿಕ ನಡೆದಿರೋ ಚುನಾವಣೆ ಫಲಿತಾಂಶಗಳನ್ನ ಅವಲೋಕಿಸಿದ್ರೆ, ಯಲಬುರ್ಗಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲ ಪಕ್ಷವಲ್ಲದೇ ಇದ್ರೂ.. ಅಭ್ಯರ್ಥಿಗಳ ಸೋಲು ಗೆಲುವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ತನ್ನ ಸ್ವಂತ ಬಲದ ಮೇಲೆ ಜೆಡಿಎಸ್ ಅಭ್ಯರ್ಥಿ ಪಡೆಯೋ ಮತಗಳು ಇತರ ಅಭ್ಯರ್ಥಿಗಳ ಸೋಲು-ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಇದೇ ಕಾರಣಕ್ಕೆ ಈ ಬಾರಿ ಇಲ್ಲಿ ಜೆಡಿಎಸ್ ಅಭ್ಯರ್ಥಿ ಯಾರಾಗ್ತಾರೆ ಅನ್ನೋ ಕುತೂಹಲ ಮೂಡಿದೆ. ಇನ್ನು ಜನಾರ್ದನ ರೆಡ್ಡಿಯ ಕರ್ನಾಟಕ ರಾಜ್ಯ ಪ್ರಗತಿ ಪಕ್ಷ ಬಿಜೆಪಿಯ ಅಸಮಾಧಾನಿತರಿಗೆ ಟಿಕೆಟ್ ನೀಡೋಕೆ ಕಾದು ಕುಳಿತಿದೆ.
ಯಲಬುರ್ಗಾ ಕ್ಷೇತ್ರದಲ್ಲಿ ಬಿಟಿವಿ ನಡೆಸಿರೋ ಮೆಗಾ ಸರ್ವೆಯ ಸದ್ಯದ ಟ್ರೆಂಡ್ ಪ್ರಕಾರ ಇಲ್ಲಿ ಹಾಲಿ ಶಾಸಕ, ಸಚಿವ ಹಾಲಪ್ಪ ಆಚಾರ್ ಮತ್ತೊಮ್ಮೆ ಗೆಲ್ಲಲಿದ್ದಾರೆ.
ಇದನ್ನೂ ಓದಿ : ಮೈಸೂರಿನಲ್ಲಿ “ಜಸ್ಟ್ ಪಾಸ್” ಚಿತ್ರಕ್ಕೆ ಬಿರುಸಿನ ಚಿತ್ರೀಕರಣ…