ಬೆಳಗಾವಿ: ಆಸ್ತಿ ವಿವಾದ ಹಿನ್ನೆಲೆ ಸಹೋದರರ ಮಧ್ಯೆ ಜಟಾಪಟಿ ಶುರುವಾಗಿತ್ತು. ಸಹೋದರನನ್ನು ಥಳಿಸಿ ಕಟ್ಡಡದ ಎರಡನೇ ಮಹಡಿ ಮೇಲಿಂದ ನೂಕಲು ಯತ್ನವಾಗಿ ಎಂದು ಆರೋಪ ಒಬ್ಬ ಸಹೋದರ ಶ್ರೀಧರ್ ಪೋಲಿಸರಿಗೆ ದೂರು ನೀಡಿದ್ದಾನೆ.
ಇದನ್ನೂ ಓದಿ:ಪುಟ್ಟ ಬಾಲಕಿಯ ಕೊರಳಿಗೆ ಸುತ್ತಿಕೊಂಡಿತ್ತು ವಿಷಸರ್ಪ..! 2ಗಂಟೆ ಬಳಿಕ ಬಾಲಕಿಯನ್ನು ಕಚ್ಚಿದ ನಾಗ..!
ಒಡಹುಟ್ಟಿದವರು ಆಸ್ತಿ ವಿಚಾರ ಬಂದರೆ ದಾಯಾದಿಗಳಾಗುತ್ತಾರೆ ಎಂಬ ಮಾತು ಈ ಸಹೋದರರ ಜೀವನದಲ್ಲಿ ನಿಜವಾಗಿದೆ. ಭುತೆ ಕುಟುಂಬದ ಶ್ರೀಧರ್, ಸಂದೀಪ್, ಸುನೀಲ್ ಮೂವರು ಸಹೋದರರ ಮಧ್ಯ ಆಸ್ತಿ ವಿಚಾರಕ್ಕಾಗಿ ಜಗಳ ಆರಂಭವಾಗಿದೆ. ಮನೆ ಕಟ್ಟಡದ ಎರಡನೇ ಮಹಡಿ ಮೇಲೆ ಇವರ ಜಗಳ ತಾರಕಕ್ಕೆರಿ ಕೈ ಕೈ ಮೀಲಾಯಿಸುವ ಹಂತಕ್ಕೆ ಹೋಗಿದೆ. ಇದೇ ವೇಳೆ ಇವರ ತಂದೆ ಜಗಳ ಬಿಡಿಸಲು ಹೋಗಿದ್ದಾರೆ. ಆಗ ತಂದೆ ಎಂದು ಲೆಕ್ಕಿಸದೆ ಅವರನ್ನು ಅವರ ಮೇಲೂ ಕೈಮಾಡಿದ್ದಾರೆ.
ಇದನ್ನೂ ಓದಿ: ಹಿಂದಿ ದಿವಸ್ ಆಚರಣೆಗೆ ವಿರೋಧ..! ನೆಲಮಂಗಲದಲ್ಲಿ ಕರವೆ ಪ್ರೊಟೆಸ್ಟ್.
ಆನಂತರ ಶ್ರೀಧರ್ ಮೇಲೆ ಸಹೋದರರಾದ ಸಂದೀಪ್, ಸುನೀಲ್ ಹಲ್ಲೆ ಮಾಡಿ ಎರಡನೇ ಮಹಡಿಯಿಂದ ಕೆಳಗೆ ತಳ್ಳಲು ಪ್ರಯತ್ನ ಮಾಡಿದ್ದಾರೆ ಎಂದು ಶ್ರೀಧರ್ ಆರೋಪಿಸಿ ಪೋಲಿಸರಿಗೆ ದೂರು ನೀಡಿದ್ದಾನೆ. ತಂದೆ ಸೇರಿ ನಾಲ್ವರನ್ನು ಖಡೇಬಜಾರ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಎಲ್ಲ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡಿಕೊಂಡಿದ್ದು, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡ ಖಡೇಬಜಾರ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.