ನೆಲಮಂಗಲ: ಕೊರೊನ ಮಹಾಮಾರಿಯ ನಡುವೆ ಈ ವರ್ಷ ಗಣೇಶನ ಹಬ್ಬವನ್ನ ಸರಳವಾಗಿ, ಹಾಗೂ ವಿನೂತನವಾಗಿ ಆಚರಿಸಲು ನೆಲಮಂಗಲದ ಯುವಕರ ತಂಡ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬಡಾವಣೆಯ ಯುವಕರ ತಂಡ, ಶುಚಿತ್ವಕ್ಕೆ ಆದ್ಯತೆ ನೀಡಿ ಪ್ರತಿಯೊಂದು ಮನೆಗೂ ನೀರಿನ ಕ್ಯಾನ್ ವಿತರಿಸುವ ಮೂಲಕ ವಿಶೇಷವಾಗಿ ಹಬ್ಬವನ್ನ ಆಚರಣೆ ಮಾಡಲಾಯಿತು.
ಇದನ್ನೂ ಓದಿ:ನೇಗಿಲು ಹಿಡಿದು ಉಳುಮೆ ಮಾಡಿದ ಬಿಜೆಪಿ ಮುಖಂಡ ಸಿ.ಟಿ. ರವಿ
ಇದನ್ನೂ ಓದಿ: #FlashNews 60ಕ್ಕೂ ಹೆಚ್ಚು ಮಹಿಳೆಯರನ್ನು ಮತಾಂತರ ಮಾಡಿದ ಆರೋಪ… ಉಡುಪಿಯಲ್ಲಿ ಅಕ್ರಮ ಮತಾಂತರ ಕೇಂದ್ರದ ಮೇಲೆ ದಾಳಿ...
ಬೆಂಗಳೂರು ಹೊರವಲಯ ನೆಲಮಂಗಲ ನಗರದ ಲೋಹಿತ್ ನಗರದಲ್ಲಿ ರವಿಕುಮಾರ್ ಹಾಗೂ ಸ್ನೇಹಿತರ ಬಳಗ ಈ ಹೊಸ ಆಲೋಚನೆ ಮಾಡಿ, ಸ್ವಚ್ಛ ಬಡಾವಣೆಯ ಮಾದರಿಗೆ ಸಾಕ್ಷಿಯಾಗಿದ್ದಾರೆ. ಕಳೆದ ಎರಡು ವರ್ಷದ ಜೀವನದಲ್ಲಿ ಜನರು ಸಾಕಷ್ಟು ಸಮಸ್ಯೆಗಳನ್ನ ಕಂಡಿದ್ದು, ಈ ಕೊರೊನಾ ಮಹಾಮಾರಿಯ ಸೋಂಕಿನ ನಡುವೆ ಸಾಕಷ್ಟು ಸಮಸ್ಯೆಯನ್ನ ಎದುರಿಸಿದ್ದಾರೆ. ಹೀಗಾಗಿ ಪ್ರತಿ ಮನೆಯಲ್ಲಿ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರನ್ನು ಸಂಗ್ರಹಿಸಲು ಲೋಹಿತ್ ನಗರದಲ್ಲಿ ಇಂದು ಎಲ್ಲಾ ಮನೆಯ ಬಡವರಿಗೆ ನೀರಿನ ಕ್ಯಾನ್ ವಿತರಣೆ ಮಾಡಿ ಗಣೇಶನ ಹಬ್ಬವನ್ನ ಸರಳವಾಗಿ ಆಚರಿಸಿದ್ದಾರೆ. ಈ ವೇಳೆ ಎನ್.ಎಂ.ರವಿಕುಮಾರ್, ಪ್ರಕಾಶ್, ಸಿದ್ಧಲಿಂಗ, ರಮೇಶ್, ಹನುಮಂತರಾಜು, ರಂಗನಾಥ್ ಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.
ವರದಿ: ಮಂಜು, ನೆಲಮಂಗಲ