ಕೊಪ್ಪಳ: ಪ್ರಿಯಾಂಕ್ ಬೆನ್ನಲ್ಲೇ ಮತ್ತೊಬ್ಬ ಕಾಂಗ್ರೆಸ್ ಮುಖಂಡ ಸಿಎಂ ಬೊಮ್ಮಾಯಿ ಅಧಿಕಾರ ಅವಧಿಯ ಬಗ್ಗೆ ಬಾಂಬ್ ಸಿಡಿಸಿದ್ದು,
2022ರ ಜನವರಿ ಅಂತ್ಯಕ್ಕೆ ಸಿಎಂ ಬೊಮ್ಮಾಯಿ ಅಧಿಕಾರ ಹೋಗುತ್ತೆ ಎಂಬ ಗಂಭೀರ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾಧ್ಯಮದ ಮುಂದೆ ಕೊಪ್ಪಳದಲ್ಲಿ ಮಾತನಾಡಿದ ಮಾಜಿ ಸಚಿವ ಶಿವರಾಜ್ ತಂಗಡಗಿ , ನನಗೆ ಸ್ಪಷ್ಟ ಮಾಹಿತಿ ಇದೆ. ಒಂದೂವರೆ ವರ್ಷದಲ್ಲಿ ಮತ್ತಿಬ್ಬರು ಸಿಎಂ ಆಗ್ತಾರೆ. ಬೊಮ್ಮಾಯಿ ಅವರನ್ನು ಬಿಟ್ಟು ಇನ್ನೂ ಒಬ್ಬರು ಸಿಎಂ ಆಗ್ತಾರೆ,ಆಡಳಿತ ಮಾಡೋಕೆ ಬಿಜೆಪಿಯಲ್ಲಿ ಸಮರ್ಥರಿಲ್ಲ ,ಆರೋಪ ಮಾಡೋರು ಸಾಕ್ಷಿ ಕೊಡಬೇಕು ಅಂದರೆ ಸರ್ಕಾರ ಯಾಕೆ ಬೇಕು..? ನಾವು ಅಧಿಕಾರಕ್ಕೆ ಬಂದರೆ ಸಾಕ್ಷ್ಯ ಕೊಡ್ತೀವಿ ಎಂದಿದ್ದಾರೆ.
ಇದನ್ನೂ ಓದಿ:BMTCಯಲ್ಲಿ ಕೆಟ್ಟು ನಿಂತಿವೆ 7990 ETMಗಳು…! ಇಟಿಎಂ ಖರೀದಿಗೆ ನಿಗಮ ಸಿದ್ದತೆ..!