ದಾವಣಗೆರೆ: ವಿಧಾನ ಪರಿಷತ್ ಚುನಾವಣೆಗೆ ಜೆಡಿಎಸ್ ಬೆಂಬಲ ಬಿಜೆಪಿಗೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದು, ಸಿದ್ದರಾಮಯ್ಯರ ಬಿಜೆಪಿಗೆ ಜೆಡಿಎಸ್ ಬಿಟೀಂ ಎಂಬ ಹೇಳಿಕೆಗೆ ಬಿಎಸ್ವೈ ಟಾಂಗ್ ನೀಡಿದ್ದಾರೆ.
ಈ ಬಗ್ಗೆ ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಚಾರದ ವೇಳೆ ಯಡಿಯೂರಪ್ಪ ಮಾತನಾಡಿದ್ದು, ಬಿಜೆಪಿಗೆ ಜೆಡಿಎಸ್ ಸಹಕಾರ ನೀಡುವ ಬಗ್ಗೆ ಕುಮಾರಸ್ವಾಮಿ ಜೊತೆ ಮಾತಾಡಿದ್ದೇನೆ, ಜೆಡಿಎಸ್ನವರು ಬಿಜೆಪಿಗೆ ನೂರಕ್ಕೆ ನೂರರಷ್ಟು ಸಹಕಾರ ನೀಡುತ್ತಾರೆ. ಸಿದ್ದರಾಮಯ್ಯ ಜೆಡಿಎಸ್ಗೆ ಬಿಟೀಂ ಅಂತ ಹೇಳುತ್ತಾರೆ. ಸಿದ್ದು ಧಿಮಾಕಿನ ಮಾತಿಗೆ ಈ ಫಲಿತಾಂಶ ಉತ್ತರಕೊಡುತ್ತೆ, ಪಕ್ಷದ ನಾಯಕ ಅನ್ನೋದನ್ನ ಮರೆತು ಬೇಕಾಬಿಟ್ಟಿ ಮಾತಾಡುತ್ತಿದ್ದಾರೆ. ಮೈಸೂರನಲ್ಲಿಯೇ ಸೋತ ಸಿದ್ದರಾಮಯ್ಯ ಹೀಗೆ ಮಾತಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ:ಕಾಫಿನಾಡಿನಲ್ಲಿ ಕೊರೋನಾ ಸ್ಫೋಟ…! ಚಿಕ್ಕಮಗಳೂರಿನಲ್ಲಿ 40 ಮಂದಿಗೆ ಕೊರೋನಾ…!