ಬೆಂಗಳೂರು : ಐಟಿಸಿಟಿ ಬೆಂಗಳೂರಿನಲ್ಲಿ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ಬಾವನ ಮೇಲಿನ ಸಿಟ್ಟಿಗೆ ಬಾಮೈದ KIAL ಏರ್ಪೋರ್ಟ್ಗೆ ಬಾಂಬ್ ಬೆದರಿಕೆ ಕರೆಮಾಡಿದ್ದು, ಇದೀಗ ಆರೋಪಿಯನ್ನ ಅರೆಸ್ಟ್ ಮಾಡಲಾಗಿದೆ.
ಮುಂಜಾನೆ 3:30ರ ಸಮಯದಲ್ಲಿ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ ವ್ಯಕ್ತಿಯೊಬ್ಬ, ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ, ತಕ್ಷಣ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಸಿಐಎಫ್ಸಿ ಪೊಲೀಸರು ಪರಿಶೀಲನೆ ನಡೆಸಿದ್ದರು, ಇದೀಗ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ ಬಂಧಿಸಲಾಗಿದೆ. ಬಂಧಿತ ಆರೋಪಿ ಸುಭಾಷ್ ಗುಪ್ತ ಈ ಹಿಂದೆ ಏರ್ಪೋರ್ಟ್ ನ ಕಾರ್ಗೊದಲ್ಲಿ ಕೆಲಸ ಮಾಡಿದ್ದ. ಬಾವನ ಮೇಲಿನ ಸಿಟ್ಟಿಗೆ ಹುಸಿ ಬಾಂಬ್ ಕರೆ ಮಾಡಿದ್ದಾನೆ, ಬಾವನ ಹೆಸರೇಳಿ ಸುಭಾಷ್ ಕರೆ ಮಾಡಿದ್ದ. ಸದ್ಯ ಸುಭಾಷ್ ನನ್ನು ದೇವನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.