ಯಾದಗಿರಿ: ಇನ್ನು ಎರಡು ಮೂರು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ನನ್ನ ತೇಜೋವಧೆ ಮಾಡಲು ಈ ರೀತಿಯ ಷಡ್ಯಂತ್ರ ನಡೆಸಲಾಗಿದೆ ಎಂದು ಶಾಸಕ ರಾಜುಗೌಡ ತಿಳಿಸಿದ್ದಾರೆ.
ಪಿಎಸ್ ಐ ನೇಮಕಾತಿ ಅಕ್ರಮದಲ್ಲಿ ತಮ್ಮ ಹೆಸರು ಪ್ರಸ್ತಾಪವಾದ ಕುರಿತು ರಾಜುಗೌಡ ಪ್ರತಿಕ್ರಿಯೆ ನೀಡಿದ್ದು, ‘ರೇಖಾ ಎಂಬ ಮಹಿಳೆ ನನಗೆ ಪರಿಚಯವಿಲ್ಲ, ಆಕೆ ಯಾರು ಎಂಬುದೇ ಗೊತ್ತಿಲ್ಲ, ಆಕೆಯೊಂದಿಗೆ ನಾನು ಫೋನ್ ನಲ್ಲಿ ಮಾತನಾಡಿಲ್ಲ. ಆದರೂ ನನ್ನ ಹೆಸರನ್ನು ಬಳಕೆ ಮಾಡಲಾಗಿದೆ. ಇದರ ಹಿಂದೆ ಯಾವ ಮಹಾನಾಯಕನ ಕೈವಾಡವಿದ್ದರೂ ನಾನು ಬಯಲಿಗೆ ತರುತ್ತೇನೆ.
ಇದನ್ನೂ ಓದಿ: ಸುರಪುರ MLA ರಾಜೂಗೌಡ ಹೆಸರು ಬಳಸಿ ಅಪಪ್ರಚಾರ… ವಂಚಕಿ ರೇಖಾ ವಿರುದ್ಧ 420 ಕೇಸ್ ದಾಖಲು…
ನಾನು ಹುಟ್ಟು ಹೋರಾಟಗಾರ, ನಾನು ಸ್ವಚ್ಛವಾಗಿದ್ದೇನೆ. ಯಾರಿಂದಲೂ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆಯಿಲ್ಲ. ಕ್ಷುಲ್ಲಕ ಕಾರಣವನ್ನಿಟ್ಟುಕೊಂಡು ಈ ರೀತಿ ಮಾಡುವುದು ಸರಿಯಲ್ಲ. ತಾಕತ್ತಿದ್ದರೆ ಫೇಸ್ ಟು ಫೇಸ್ ಬಂದು ಫೈಟ್ ಮಾಡಲಿ. ಅದನ್ನು ಬಿಟ್ಟು ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಬೇಡಿ. ಎದುರಿನಿಂದ ಫೈಟ್ ಮಾಡಲಾರದೆ , ಹಿಂದಿನಿಂದ ಫೈಟ್ ಮಾಡ್ತಾ ಇದ್ದಾರೆ. ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ, ನಾನು ತಕ್ಕ ಉತ್ತರ ನೀಡತ್ತೇನೆ ಎಂದು ತಿಳಿಸಿದ್ಧಾರೆ.
ನನ್ನ ಮೇಲೆ ಮೊದಲಿನಿಂದಲೂ ಷಡ್ಯಂತ್ರ ನಡೆದಿದೆ, ನಾನು ಯಾವಾಗ ಸಚಿವನಾಗ್ತೀನಿ ಅಂತ ಗೊತ್ತಾಯ್ತೋ ಆಗ ಹೈಕಮಾಂಡ್ ಮೇಲೆ ಪ್ರೆಶರ್ ಹಾಕುತ್ತಿದ್ದಾರೆ. ಒಳಗಿನ ಶತ್ರುಗಳಿಂದಲೇ ಷಡ್ಯಂತ್ರ ನಡೆದಿದೆ. ಸತ್ಯಾಂಶ ಹೊರಗಡೆ ಬರಬೇಕು. ಇದರಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದರಲ್ಲಿ ನನ್ನದು ಒಂದು ಪರ್ಸೆಂಟ್ ಕೈವಾಡವಿದ್ದರೂ, ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಕಳಂಕ ಹೊತ್ತಿಕೊಂಡು ರಾಜಕಅರಣ ಮಾಡುವ ಅವಶ್ಯಕತೆ ಇಲ್ಲ ಎಂದು ರಾಜುಗೌಡ ತಿಳಿಸಿದ್ದಾರೆ.