ಕೋಲಾರ ಖೆಡ್ಡಾದಲ್ಲಿ ಸಿದ್ದರಾಮಯ್ಯರನ್ನ ಕೆಡವಲು ಬಿಜೆಪಿ ರೆಡಿಯಾಗಿದೆ. ಸಿದ್ದು ವಿರುದ್ಧ ಹೈಕಮಾಂಡ್ನಿಂದ ಬಲಿಷ್ಟ ಕ್ಯಾಂಡಿಡೇಟ್ ಸಿದ್ದರಾಗಿದ್ದು, ಯಾರವರು ? ಮೆಗಾ ಸ್ಫೋಟದ ಸ್ಟೋರಿ ಇದಾಗಿದೆ…
ಕೋಲಾರದಲ್ಲಿ ಸಿದ್ದುಗೆ ಬಿಜೆಪಿ ಅಡ್ಡಡ್ಡ ಖೆಡ್ಡಾ ತೋಡಿದ್ದು, ಸಿದ್ದರಾಮಯ್ಯ ವಿರುದ್ಧ ಸೆಣಸಿಗೆ ಮದಗಜ ರೆಡಿಯಾಗಿದೆ. ಕೋಲಾರ ಉಸ್ತುವಾರಿ ಸಚಿವರಾಗಿರೋ ಮುನಿರತ್ನ ಕೋಲಾರದಿಂದ ಕಣಕ್ಕಿಳಿಯುತ್ತಾರೆ. ಮುನಿರತ್ನ ಸ್ಪರ್ಧೆಗೆ ಡೈರೆಕ್ಟ್ ಹೈಕಮಾಂಡ್ ಸೂಚನೆ ನೀಡಿದ್ದಾರೆ. BJP ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ಜೀ ಕೋಲಾರಕ್ಕೆ ಖುದ್ದು ಬಂದಿದ್ದು, ಸಂತೋಷ್ಜೀ ನೇತೃತ್ವದಲ್ಲೇ ಕೋಲಾರ ಸ್ಟ್ರಾಟಜಿ ರೆಡಿಯಾಗಿದೆ. ಕೋಲಾರ ಉಸ್ತುವಾರಿ ಸಚಿವರಾಗಿರೋ ಮುನಿರತ್ನ ಸ್ಪರ್ಧೆ ಖಚಿತವಾಗಿದೆ.
ಕೋಲಾರದ ನಾಯಕರೊಂದಿಗೆ ಸಂತೋಷ್ಜೀ ಮೀಟಿಂಗ್ ನಡೆಸಿದ್ದಾರೆ. ಕೋಲಾರದಲ್ಲಿ ವಿಜಯಸಂಕಲ್ಪ ಅಭಿಯಾನದ ಪೂರ್ವಭಾವಿ ಸಭೆ ನಡೆಸಲಾಗಲಿದ್ದು, ಸಂಸದ ಮುನಿಸ್ವಾಮಿ, MLC ಛಲವಾದಿ ನಾರಾಯಣ ಸ್ವಾಮಿ ಭಾಗಿಯಾಗಲಿದ್ದಾರೆ.
ಸಿದ್ದು ಸೋಲಿಸುವಂತೆ ಅವರದ್ದೇ ಹಳೇ ಶಿಷ್ಯರಿಗೆ ಸಂತೋಷ್ಜೀ ರಣತಂತ್ರ ಹೂಡಿದ್ದಾರೆ. ಕೇಸರಿಪಡೆ ಸಿದ್ದು ಕೆಡವಲು ಜಾತಿ ವ್ಯೂಹ ರಚನೆ ಮಾಡಿದ್ದಾರೆ. ಮುನಿರತ್ನ ಸೂಕ್ತ ಅಭ್ಯರ್ಥಿ ಬಲಿಷ್ಟ ನಾಯಕರಾಗಿ ಹೊರಹೊಮ್ಮಿದ್ದಾರೆ. ಮುನಿರತ್ನ ಪರ ಕುರುಬ ಮತ ಒಗ್ಗೂಡಿಸಲು ಈಶ್ವರಪ್ಪ, ಬೈರತಿ, ವರ್ತೂರು, SC ಮತ ಸೆಳೆಯಲು ಮುನಿಸ್ವಾಮಿ, ಛಲವಾದಿ ನಾರಾಯಣಸ್ವಾಮಿ ಮತ್ತಿತರರು ಇರಲಿದ್ದಾರೆ. ಸಿದ್ದು ವಿರುದ್ಧ ಮುನಿರತ್ನ ಗೆಲ್ಲಿಸಲು ಬಿಜೆಪಿ ಚಕ್ರವ್ಯೂಹ ರೆಡಿಯಾಗಿದೆ.
ಇದನ್ನೂ ಓದಿ : ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದ ಕಾಂತಾರ ತಂಡ..! ಹರಕೆ ತೀರಿಸಿದ ಅದ್ಬುತ ಕ್ಷಣ ಇಲ್ಲಿದೆ..