ಬೆಂಗಳೂರು: ಇಂದು ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ನಡೆಯಲಿದ್ದು, ಸಿಎಂ, ಮಾಜಿ ಸಿಎಂಗಳ ಜೊತೆ ಅರುಣ್ ಸಿಂಗ್ ಚರ್ಚಿಸಲಿದ್ದಾರೆ. ಇದೀಗ ಇಂದೇ ಸಂಪುಟ ಸರ್ಜರಿಗೆ ಆಗುತ್ತಾ ಡಿಸೈಡ್ ಎಂಬ ಕುತೂಹಲ ಶುರುವಾಗಿದೆ.
ಇಂದು ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ನಡೆಯಲಿದ್ದು, ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್
ಮಾಜಿ ಸಿಎಂ ಬಿಎಸ್ವೈ ಸೇರಿ ಹಲವು ನಾಯಕರ ಮೀಟಿಂಗ್ ನಡೆಸಲಿದ್ದಾರೆ. ಈ ಸಭೆಯಲ್ಲೇ ಸಂಪುಟ ಸರ್ಜರಿ ವಿಚಾರ ಚರ್ಚೆ ಆಗುತ್ತಾ..? ವರಿಷ್ಠರ ಸಂದೇಶದಂತೆಯೇ ಸಂಪುಟ ಸರ್ಜರಿ ಡೇಟ್ ಫಿಕ್ಸ್ ಆಗುತ್ತಾ..? ಎಂಬ ಕುತೂಹಲ ಹೆಚ್ಚಾಗಿದೆ.
ಸಾಲು-ಸಾಲು ಎಲೆಕ್ಷನ್ ಹೊತ್ತಲ್ಲಿ ಮಹತ್ವದ ಕೋರ್ ಕಮಿಟಿ ಸಭೆ ಹಮ್ಮಿಕೊಳ್ಳಲಾಗಿದ್ದು, ದೆಹಲಿಯಿಂದ ಅರುಣ್ ಸಿಂಗ್ ತಂದಿರುವ ಸಂದೇಶ ಏನು.? ಯಾರಿಗೆ ಸಿಗುತ್ತೆ ಚಾನ್ಸ್..? ಯಾರಿಗೆ ಕೊಕ್..? ಎಂಬ ತೀವ್ರ ಕುತೂಹಲ ಕೆರಳಿಸುತ್ತಿದೆ.