ವಿಜಯಪುರ: ಸಚಿವ ಆನಂದ್ ಸಿಂಗ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ಬೆನ್ನಲ್ಲೇ ಬಿಜೆಪಿ ಎಂಎಲ್ಎ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷ ಬಿಡುವ ಶಾಸಕರ ಲಿಸ್ಟ್ ಕುರಿತು ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್ ಬಿಜೆಪಿ ಬಿಡುವವರ ಲಿಸ್ಟ್ ನನ್ನ ಬಳಿ ಇದೆ, ಕಾಂಗ್ರೆಸ್ ಬಿಡುವ ಶಾಸಕರ ಲಿಸ್ಟ್ ಕೂಡಾ ಇದೆ, ಕಾಲ ಬಂದಾಗ ಆ ಲಿಸ್ಟ್ ಹೊರ ಬಿಡುತ್ತೇನೆ ಎಂದಿದ್ದಾರೆ. 6 ತಿಂಗಳ ಕಾಲ ಸುಮ್ಮನಿರಿ.. ಜಾದೂ ಏನಾಗುತ್ತೆ ನೋಡಿ, ಆದಷ್ಟು ಬೇಗ ಸಂಪುಟ ರಚನೆ ಮಾಡಿದಿದ್ದರೆ ಕಷ್ಟ. 6 ತಿಂಗಳಲ್ಲಿ ಮಂತ್ರಿ ಆಗಿ ಏನ್ ಮಾಡುವುದಕ್ಕೆ ಆಗುತ್ತೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಥಿಯೇಟರ್ ಗಳಲ್ಲಿ ಶೇ.100ರಷ್ಟು ಸೀಟ್ ಭರ್ತಿಗೆ ಅವಕಾಶ ಕೊಡಿ… ಕೊರೋನಾ ರೂಲ್ಸ್ ಪಾಲಿಸಿ ಶೋ ನಡೆಸುತ್ತೇವೆ: ಜೈರಾಜ್ …