ರಾಯಚೂರು: ನಾರಾಯಣಪುರ ಬಲದಂಡೆ ಕಾಲುವೆ ಕಾಮಗಾರಿಯ ಪರಿಶೀಲನೆಗಾಗಿ ಅಂದಾಜು ಸಮಿತಿ ಆಗಮಿಸಿದ್ದ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಮಡಿದ್ದಾರೆ.
ಮೇ 4 ರಂದು ರಾಯಚೂರಿನ ನಾರಾಯಣಪುರ ಬಲದಂಡೆ ಕಾಮಗಾರಿ ಪರಿಶೀಲನೆಗೆ ಅಂದಾಜು ಸಮಿತಿ ಆಗಮಿಸಿತ್ತು. ಅಂದಾಜು ಸಮಿತಿಯ ಅಧ್ಯಕ್ಷ ಅಭಯ್ ಪಾಟೀಲ್ ಅವರ ನೇತೃತ್ವದಲ್ಲಿ ಪರಿಶೀಳನೆ ನಡೆಯುತ್ತಿದ್ದಾಗ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಕಿತ್ತಾಡಿಕೊಮಡಿದ್ದು ಪರಿಸ್ಪರ ಕೈ ಮಿಲಾಯಿಸಿಕೊಂಡಿದ್ಧಾರೆ.
ಇದನ್ನೂ ಓದಿ: ಇದೊಂಥರಾ ಪಾಳೆಗಾರಿಕೆ ಆಗಿದೆ… ಪಾಳೆಗಾರಿಕೆಗೆ ಬೊಮ್ಮಾಯಿ ಸರ್ಕಾರ ಮೌನವಾಗಿ ಕೂರಬಾರದು: ವಾಟಾಳ್ ನಾಗರಾಜ್…
ಸ್ಥಳೀಯ ಕಾಂಗ್ರೆಸ್ ಶಾಸಕ ಡಿ.ಎಸ್.ಹುಲಿಗೇರಿ ನೇತೃತ್ವದಲ್ಲಿ ಗಲಾಟೆ ನಡೆದಿದ್ದು, ಕಾಮಗಾರಿ ಸರಿಯಾಗಿ ನಡೆದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ. ಕಾಮಗಾರಿ ಚೆನ್ನಾಗಿ ನಡೆದಿದೆ ಎಂದು ಬಿಜೆಪಿ ಕಾರ್ಯಕರ್ತರು ವಾದಿಸಿದ್ದಾರೆ. ಎರಡೂ ಪಕ್ಷಗಳ ಕಾರ್ಯಕರ್ತರ ಗಲಾಟೆ ನೋಡಿ ಅಂದಾಜು ಸಮಿತಿ ತಬ್ಬಿಬ್ಬಾಗಿದೆ. ಆ ಬಳಿಕ ಸೂಕ್ತ ಭದ್ರತೆ ಇಲ್ಲದ ಕಾರಣ ಅಂದಾಜು ಸಮಿತಿ ವಾಪಸ್ಸಾಗಿದೆ.