ಬೆಂಗಳೂರು: ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ್ದ ಭಯಾನಕ ಸತ್ಯ ಬಯಲಾಗಿದೆ. ವಿಶ್ವನಾಥ್ ಹತ್ಯೆಯ ಬಗ್ಗೆ ಮಾತನಾಡಿದ್ದಾರೆಂಬ ಕಾರಣಕ್ಕೆ ರೌಡಿಶೀಟರ್ ಸೇರಿ ಕಾಂಗ್ರೆಸ್ ಮುಖಂಡನನ್ನೂ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಾಂಗ್ರೆಸ್ ಮುಖಂಡ ಎಂ.ಎನ್. ಗೋಪಾಲಕೃಷ್ಣರ ಸ್ಟಿಂಗ್ ವಿಡಿಯೋವನ್ನ ಕುಳ್ಳ ದೇವರಾಜ್ ಎಂಬ ರೌಡಿ ಶೀಟರ್ ಮಾಡಿದ್ದ, ಈ ಹಿನ್ನಲೆ ನಿನ್ನೆ ತಡರಾತ್ರಿ ಕುಳ್ಳ ದೇವರಾಜ ಮತ್ತು ಗೋಪಾಲಕೃಷ್ಣರನ್ನ ಸಿಸಿಬಿ ಅಧಿಕಾರಿಗಳು ಕರೆ ತಂದು ವಿಚಾರಣೆ ಮಾಡಿದ್ದಾರೆ. ಸ್ಟಿಂಗ್ ನಲ್ಲಿ ವಿಶ್ವನಾಥ್ ಬಗ್ಗೆ ಗೋಪಾಲಕೃಷ್ಣ ಸಹಜವಾಗಿ ವಿರುದ್ಧವೇ ಮಾತನಾಡಿದ್ದ, ಇದನ್ನೇ ಲಾಭ ಮಾಡಿಕೊಂಡ ಕುಳ್ಳ ದೇವರಾಜ ಬೇಕೆಂದೇ ವಿಶ್ವನಾಥ್ ವಿರುದ್ಧ ಗೋಪಾಲಕೃಷ್ಣ ಬಳಿ ಎತ್ತಿ ಕಟ್ಟಿದ್ದ. ವಿಡಿಯೋ ಪರಿಶೀಲನೆ ನಡೆಸಿದಾಗ ಪ್ರಚೋದನೆ ಮಾಡಿರೋದು ಬೆಳಕಿಗೆ ಬಂದಿದೆ.

ಈ ಹಿನ್ನಲೆ ನಿನ್ನೆ ಗೋಪಾಲಕೃಷ್ಣರನ್ನ ವಿಚಾರಣೆ ನಡೆಸಿದ್ದಾರೆ. ಸ್ಟಿಂಗ್ ಮಾಡಿದ್ದ ವಿಡಿಯೋವನ್ನ ಕುಳ್ಳ ದೇವರಾಜ್ ಬಳಸಿ ಶಾಸಕ ವಿಶ್ವನಾಥ್ ಗೆ ಆಪ್ತನಾಗಲು ಬಯಸಿದ್ದ. ಕುಳ್ಳ ದೇವರಾಜ್ ತಾನು ವಿಶ್ವನಾಥ್ ಬೆಂಬಲಿಗ ಎಂದು ಹೇಳಿಕೊಂಡು ಓಡಾಡುತ್ತಿದ್ದ. ವಿಡಿಯೋ ವಿಚಾರ ಹೊರ ಬೀಳುತ್ತಿದ್ದಂತೆ ಸಿಸಿಬಿ ಅಧಿಕಾರಿಗಳು ವಿಶ್ವನಾಥ್ ರನ್ನ ಸಂಪರ್ಕಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ವಿಶ್ವನಾಥ್ ಹೇಳಿದ್ದರು,. ಈ ಹಿನ್ನಲೆ ನಿನ್ನೆ ಗೋಪಾಲಕೃಷ್ಣ ಮತ್ತು ಕುಳ್ಳ ದೇವರಾಜನನ್ನ ಸಿಸಿಬಿ ಕರೆತಂದು, ವಿಚಾರಣೆ ಮಾಡಿ ನಿನ್ನೆಯೇ ಬಿಟ್ಟು ಕಳುಹಿಸಿದ್ದಾರೆ. ಆದರೆ ಕುಳ್ಳ ದೇವರಾಜನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಹತ್ಯೆಗೆ ಪ್ರಚೋದನೆ ನೀಡಿರುವ ಕಾರಣದ ಬಗ್ಗೆ ವಿಚಾರಣೆ ಮುಂದುವರೆಸಿದ್ದಾರೆ.

ಯಲಹಂಕ MLA ಮರ್ಡರ್ಗೆ ಭಯಾನಕ ಸ್ಕೆಚ್ ಹಾಕಲಾಗಿದ್ದು, ಕಾಂಗ್ರೆಸ್ನ ಗೋಪಾಲಕೃಷ್ಣ ವಿರುದ್ಧ ಆರೋಪ ಬಂದಿದ್ಯಾಕೆ ಎಂಬ ಅನುಮಾನಗಳು ಮೂಡಿದ್ದು, 2018ರ ಅಸೆಂಬ್ಲಿ ಎಲೆಕ್ಷನ್ನಲ್ಲಿ ವಿಶ್ವನಾಥ್ ವಿರುದ್ಧ ಕಾಂಗ್ರೆಸ್ನಿಂದ ಸ್ಪರ್ಧೆ ಮಾಡಿದ್ದ ಗೋಪಾಲಕೃಷ್ಣ, ಎಲೆಕ್ಷನ್ ಸೋಲಿನ ಸೇಡಿನಿಂದ ವಿಶ್ವನಾಥ್ ಕೊಲೆಗೆ ಸಂಚು ಮಾಡಿರಬಹುದು ಎಂಬ ಆರೋಪ ಕೇಳಿಬರುತ್ತಿದೆ.
ಇದನ್ನೂ ಓದಿ:ಅಕ್ರಮ ಚಟುವಟಿಕೆಗಳಿಗೆ ಕುಡಚಿ PSI ಸಾಥ್…! ವರ್ಗಾವಣೆ ಮಾಡುವಂತೆ ಸಾರ್ವಜನಿಕರ ಒತ್ತಾಯ.