ಪಠಾಣ್ ಸಿನಿಮಾ ಭರ್ಜರಿ ಎಂಟ್ರಿ ಕೊಟ್ಟಿದ್ದು, ಎಲ್ಲಾ ಥಿಯೇಟರ್ಗಳೂ ಹೌಸ್ಫುಲ್.. ನೋ ಟಿಕೆಟ್. ತೆರೆ ಮೇಲೆ ಕಿಂಗ್ ಖಾನ್ ಶಾರುಖ್ ಖಾನ್ ಮಿಂಚಿಂಗ್ , ದೀಪಿಕಾ ಪಡುಕೋಣೆ ನಟನೆಯ ಪಠಾಣ್ ದರ್ಬಾರ್ ನಡೆಸುತ್ತಿದೆ.
ಬೆಂಗಳೂರಿನ ಬಹುತೇಕ ಥಿಯೇಟರ್ ಪಠಾಣ್ಗೆ ಮೀಸಲು ಇಡಲಾಗಿದೆ. ಪಠಾಣ್ಗಾಗಿ ಕನ್ನಡದಲ್ಲಿ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ, ಇನ್ನೊಂದು ತಿಂಗಳು ಪಠಾಣ್ ಸಿನಿಮಾದ್ದೇ ಹವಾ ಇದೆ. ಬೆಳಗ್ಗೆ 6 ಗಂಟೆಯಿಂದಲೇ ಪಠಾಣ್ ಗ್ರ್ಯಾಂಡ್ ಓಪನಿಂಗ್ ದೊರಕಿದ್ದು, 2018ರ ನಂತ್ರ ಬಿಗ್ ಸ್ಕ್ರೀನ್ ಮೇಲೆ ಶಾರುಖ್ ಎಂಟ್ರಿ ಕೊಟ್ಟಿದ್ದಾರೆ. ನಾಲ್ಕನೇ ಸಿನಿಮಾದಲ್ಲಿ ಹ್ಯಾಟ್ರಿಕ್ ಹಿಟ್ ಜೋಡಿ ಮಿಂಚಿಂಗ್ .
ದೇಶದಾದ್ಯಂತ 5000 ಸಾವಿರಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ರಿಲೀಸ್ ಆಗಲಿದೆ. ಶಾರುಖ್-ದೀಪಿಕಾ ಕಟೌಟ್ ಥಿಯೇಟರ್ ಮುಂದೆ ರಾರಾಜಿಸುತ್ತಿವೆ. ಖಾನ್ -ಡಿಪ್ಪಿ ಫ್ಯಾನ್ಸ್ ಥಿಯೇಟರ್ ಮುಂದೆ ಕುಣಿದು ಕುಪ್ಪಳಿಸುತ್ತಿದ್ದಾರೆ. ಪಠಾಣ್ ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ರಿಲೀಸ್ ಆಗಿದೆ.
ಮೊದಲ ದಿನವೇ ಆಲ್ ಮೋಸ್ಟ್ ಎಲ್ಲಾ ಶೋಗಳು ಫುಲ್ ಆಗಲಿದೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಥಿಯೇಟರ್, ಮಲ್ಟಿಪ್ಲೆಕ್ಸ್ಗಳಲ್ಲಿ ರಿಲೀಸ್ ಆಗಲಿದ್ದು, ಬೆಂಗಳೂರಿನಲ್ಲಿ ಪಠಾಣ್ ಸಿನಿಮಾಗೆ ಅದ್ದೂರಿ ವೆಲ್ ಕಮ್ ಮಾಡಲಾಗಿದೆ.
ಪಠಾಣ್ಗಾಗಿ ಕನ್ನಡದಲ್ಲಿ ಈ ವಾರ ಯಾವ ಸಿನಿಮಾ ರಿಲೀಸ್ ಆಗ್ತಿಲ್ಲ, ಕನ್ನಡ ಪ್ರೇಕ್ಷಕರು ಶಾರುಖ್-ದೀಪಿಕಾ ಪಠಾಣ್ ನೋಡಿ ಫುಲ್ ಥ್ರಿಲ್ ಆಗಲಿದೆ. ಮೊದಲ ದಿನವೇ 50 ರಿಂದ 80 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆಗಳಿದೆ.
ಪ್ರಧಾನಿ ಮೋದಿ ಮೆಚ್ಚುಗೆಯಿಂದ ಸಿನಿಮಾಗೆ ಮತ್ತಷ್ಟು ಕ್ರೇಸ್ ಬಂದಿದೆ. ರಿಪಬ್ಲಿಕ್ ಡೇ, ಶನಿವಾರ, ಭಾನುವಾರ ಸಿಕ್ಕಿರೋದ್ರಿಂದ ಹೌಸ್ಫುಲ್ ಆಗಲಿದೆ.
ಇದನ್ನೂ ಓದಿ : ಫ್ಯಾನ್ಸ್ ಗೆ ಗುಡ್ ನ್ಯೂಸ್… 2 ತಿಂಗಳ ಗರ್ಭಿಣಿ ಎಂದು ಬಹಿರಂಗ ಪಡಿಸಿದ ನಿವಿ…