ಹಾವೇರಿ : ಹಾವೇರಿ ಜಿಲ್ಲೆಯಲ್ಲಿ ಭರ್ಜರಿ ಕುಕ್ಕರ್ ಪಾಲಿಟಿಕ್ಸ್ ಜೋರಾಗಿದ್ದು, ಮಾಜಿ ಸಚಿವ ಆರ್ ಶಂಕರ್ ಮತದಾರರಿಗೆ ಕುಕ್ಕರ್ ಕೊಡ್ತಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆರ್.ಶಂಕರ್ ಮತದಾರರ ಮೇಲೆ ಎಲ್ಲಿಲ್ಲದ ಪ್ರೀತಿ ತೋರುತ್ತಿದ್ದಾರೆ.
ಆರ್ ಶಂಕರ್ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ ಜನತೆಗೆ ಕುಕ್ಕರ್ ಗಿಫ್ಟ್ ಕೊಟ್ಟಿದ್ದಾರೆ. ಮನೆ ಮನೆಗೆ ಮೊದಲು ಶಂಕರ್ ಬೆಂಬಲಿಗರು ಕೂಪನ್ ನೀಡ್ತಾರೆ, ಕೂಪನ್ ತೋರಿಸಿದರೆ ಕುಕ್ಕರ್ ಸಿಗುತ್ತದೆ. ಆರ್ ಶಂಕರ್ ಸದಾ ನಿಮ್ಮ ಸೇವೆಗಾಗಿ ನಿಮ್ಮ ಮನೆ ಮಗ ಆರ್ ಶಂಕರ್ ಅಂತ ಕುಕ್ಕರ್ ಮೇಲೆ ಬರೆಸಿದ್ದಾರೆ. ಬಿಜೆಪಿ ಎಂ.ಎಲ್ ಸಿ, ಮಾಜಿ ಸಚಿವ ಆರ್ ಶಂಕರ್ ಈ ಬಾರಿ ರಾಣೆಬೆನ್ನೂರು ಕ್ಷೇತ್ರದಲ್ಲಿ ಮತ್ತೆ ಸ್ಪರ್ದೆಗೆ ಸಜ್ಜಾಗಿದ್ದಾರೆ. ಬಿಜೆಪಿಯಿಂದ ಟಿಕೇಟ್ ಸಿಕ್ಕರೆ ಬಿಜೆಪಿಯಿಂದ , ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿ ಯಾಗಿರೋ ಸ್ಪರ್ದಿಸಲು ರೆಡಿಯಾಗಿದ್ದಾರೆ.
ಇದನ್ನೂ ಓದಿ : 12 ಅಡಿ ಎತ್ತರದ ಮೆಟ್ರೊ ಪಿಲ್ಲರ್ ನಿರ್ಮಾಣ ಅವೈಜ್ಞಾನಿಕ… ಐಐಟಿ ತಜ್ಞರ ವರದಿಯಲ್ಲಿದೆ ಸ್ಫೋಟಕ ಮಾಹಿತಿ…