ಇದು ಹಾಸನ ಪಾಲಿಟಿಕ್ಸ್ನ ಸ್ಫೋಟಕ ಸ್ಟೋರಿಯಾಗಿದ್ದು, ಭವಾನಿ ರೇವಣ್ಣ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಭವಾನಿ ರೇವಣ್ಣ ಸ್ವಯಂ ಟಿಕೆಟ್ ಘೋಷಿಸಿಕೊಂಡಿದ್ದು, ಕಾರ್ಯಕರ್ತರು, ಮುಖಂಡರು, ಕುಟುಂಬದಲ್ಲೇ ಅಸಮಾಧಾನ ಹೊರಹಾಕುತ್ತಿದ್ದಾರೆ.
ರಾಯಚೂರಿನ ಮುದಗಲ್ ಪಟ್ಟಣದಲ್ಲಿ ಕುಮಾರಸ್ವಾಮಿಗೆ ಭವಾನಿ ವಿರುದ್ಧ ಬಹಿರಂಗವಾಗಿಯೇ ಕಾರ್ಯಕರ್ತರ ಪ್ರಶ್ನೆ ಮಾಡಿದ್ದು, ಪ್ರಶ್ನೆಗೆ ಉತ್ತರಿಸೋ ಮೂಲಕ ಭವಾನಿಗೆ HDK ನೇರವಾಗಿ ಟಾಂಗ್? ಪ್ರೀತಮ್ ಗೌಡ ಸೋಲಿಸಲು ಸಾಮಾನ್ಯ ಕಾರ್ಯಕರ್ತ ಸಾಕು, ಕಾರ್ಯಕರ್ತರನ್ನು ಎಂದಿಗೂ ಕಡೆಗಣಿಸಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಭವಾನಿ ರೇವಣ್ಣಗೆ ಟಿಕೆಟ್ ಕೊಡಲ್ಲ ಅಂದು ಬಿಟ್ರಾ ಕುಮಾರಸ್ವಾಮಿ, ಈಗಾಗ್ಲೇ ರೇವಣ್ಣ ಕುಟುಂಬದಲ್ಲಿ MLA, MLC ಮತ್ತು MPಗಳಿದ್ದಾರೆ. ಈಗ ಭವಾನಿ ರೇವಣ್ಣಗೆ ಟಿಕೆಟ್ ಕೊಟ್ರೆ ರಾಂಗ್ ಮೆಸೇಜ್ ಹೋಗುತ್ತೆ, ರಾಜ್ಯಾದ್ಯಂತ ಜೆಡಿಎಸ್ ಪರ ವೇವ್ ಎದ್ದಿದೆ, ಭವಾನಿ ಎಂಟ್ರಿ ಬೇಡ ಎಂದಿದ್ದಾರೆ ಈ ಮೂಲಕ ಹಾಸನದಲ್ಲೂ ಭವಾನಿ ರೇವಣ್ಣ ಸ್ಪರ್ಧೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ : ಬಿಜೆಪಿಗೆ ಸಂಕಷ್ಟ ತಂದಿಟ್ಟ ಸಾಹುಕಾರ್ ಈ ವಿಡಿಯೋ… ಹಣದ ಆಮಿಷ ನೀಡಿದ್ದಕ್ಕೆ ಕಾಂಗ್ರೆಸ್ನಿಂದ ಕಂಪ್ಲೇಂಟ್…