ಬೀದರ್ : ವ್ಯಾಪಾರಿಯೊಬ್ಬರಿಂದ ಭಾಲ್ಕಿ ನಗರ ಪೊಲೀಸ್ ಠಾಣೆ ಸಿಪಿಐ ಯೂನಿಫಾರಂನಲ್ಲೇ ಲಂಚ ಸ್ವೀಕರಿಸಿರುವ ದೃಶ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದ್ದು, ಲಂಚದ ವಿಡಿಯೋ ವೈರಲ್ ಆಗುತ್ತಿದ್ದ ಹಿನ್ನೆಲೆ ಭಾಲ್ಕಿ ಸಿಪಿಐ ರಾಘವೇಂದ್ರ ಅವರನ್ನು ಅಮಾನತ್ತು ಮಾಡಲಾಗಿದೆ.
ಯೂನಿಫಾರಂನಲ್ಲೇ ಸಿಪಿಐ ರಾಘವೇಂದ್ರ ಹಣ ಎಣಿಸುತ್ತಿದ್ದು, ಸಿರ್ಸೆ ಪೆಟ್ರೋಲ್ ಪಂಪ್ ಎದುರಿನ ಆಟೋಮೊಬೈಲ್ ಶಾಪ್ನಲ್ಲಿ ವಸೂಲಿ ಮಾಡಿರುವ ಸಿಸಿಟಿವಿ ದೃಶ್ಯ ಭಾರೀ ವೈರಲ್ ಆಗಿತ್ತು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ್ ಅಡಿಗ ವರದಿ ಹಿನ್ನೆಲೆ ಕಲಬುರಗಿ ಐಜಿ ಯಿಂದ ಅಮಾನತ್ತು ಮಾಡುವಂತೆ ಆದೇಶ ಹೊರಡಿಸಲಾಗಿದೆ.
ಬಿಟಿವಿ ಯಲ್ಲಿ ಸುದ್ದಿ ಪ್ರಸಾರವಾದ ಬೆನ್ನಲೆ ತನಿಖೆಗೆ ವರದಿ ನೀಡುವಂತೆ ಎಸ್ಪಿ ಡಿಎಲ್ ನಾಗೇಶ್ ಅವರು ಎಡಿಷನಲ್ ಎಸ್ಪಿ ಡಾ.ಗೋಪಾಲ್ ಅಡಿಗರವರಿಗೆ ಸೂಚನೆ ನೀಡಿದ್ದರು. ಎಡಿಷನಲ್ ಎಸ್ಪಿ ಡಾ.ಗೋಪಾಲ್ ಅಡಿಗ ಅವರ ವರದಿ ಆಧರಿಸಿ ಅಮಾನತ್ತು ಮಾಡಲು ಎಸ್ಪಿ ಡಿಎಲ್ ನಾಗೇಶ್ ಐಜಿಗೆ ವರದಿ ನೀಡಲಾಗಿದ್ದು, ಎಸ್ಪಿ ವರದಿ ಹಿನ್ನಲೆ ಕಲಬುರಗಿ ಐಜಿ ಯವರಿಂದ ಅಮಾನತ್ತು ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ : ದೆಹಲಿಯಲ್ಲಿ ರಾಯಣ್ಣ ಪ್ರತಿಮೆ ಸ್ಥಾಪಿಸುತ್ತೇವೆ : ಸಿಎಂ ಬೊಮ್ಮಾಯಿ..!