ಈ ಹಿಂದಿನ ಸರ್ಕಾರಗಳ ಸಂಪುಟದಲ್ಲಿ ದಲಿತರಿಗೆ, ಮಹಿಳೆಯರಿಗೆ, ಆದಿವಾಸಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಕ್ಕಿರಲಿಲ್ಲ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಎಲ್ಲಾ ವರ್ಗದವರಿಗೆ ಅವಕಾಶ ದೊರೆತಿದೆ. ಅದರಲ್ಲೂ ಕರ್ನಾಟಕಕ್ಕೆ ಮೋದಿ ಸಂಪುಟದಲ್ಲಿ ಸಿಂಹಪಾಲು ದೊರೆತಿದೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ತಿಳಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನವರಿಗೆ ಚರ್ಚೆ ನಡೆಸಲು ಬೇರೆ ಯಾವುದೇ ವಿಷಯಗಳಿಲ್ಲ. ಎಲ್ಲಾ ವರ್ಗದವರ ಮತಗಳು ಕೈಬಿಟ್ಟು ಹೋಗಿರೋ ಆತಂಕ ಅವರನ್ನು ಕಾಡುತ್ತಿದೆ. ಜೊತೆಗೆ ಮೋದಿ ಸರ್ಕಾರದ ಎಲ್ಲರೂ ಕಾಂಗ್ರೆಸ್ ನ ಬಣ್ಣ ಬಯಲು ಮಾಡುವ ಭಯವಿದೆ. ಹೀಗಾಗಿ ಕಾಂಗ್ರೆಸ್ ನವರು ಸದನದ ಸಂಪ್ರದಾಯವನ್ನು ಹಾಳು ಮಾಡಿದ್ದು, ಪ್ರಧಾನಿಗಳು ನೂತನ ಸಚಿವರನ್ನು ಸದನಕ್ಕೆ ಪರಿಚಯಿಸುವ ವೇಳೆ ಕಾಂಗ್ರೆಸ್ ಸಂಸದರು ಅಡ್ಡಿಯುಂಟುಮಾಡಿದ್ದರು ಎಂದು ಖೂಬಾ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.
ಶಾಹಬಾದ ವಾಡಿ ಕ್ರಾಸ್ ಹತ್ತಿರ ಪಕ್ಷದ ನನ್ನ ಸಹೋದರಿಯರು ಹಾಗೂ ಸಹೋದರರು ಸ್ವಾಗತಿಸಿಕೊಂಡರು, ನಂತರ ಮಾತನಾಡಿ ನಿಮ್ಮೆಲ್ಲರ ಬೇಡಿಕೆಗಳು, ನಿಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಸದಾ ಶ್ರಮಿಸಲಿದ್ದೇನೆ ಎಂದು ಎಲ್ಲರಿಗೂ ತಿಳಿಸಿದೆ. #JanAshirwadYatra pic.twitter.com/TIlCb6jOjz
— Bhagwanth Khuba (@bhagwantkhuba) August 18, 2021
ನರೇಂದ್ರ ಮೋದಿ ಅವರು ಕಳೆದ 75 ವರ್ಷಗಳಲ್ಲಿ ತೆಗೆದುಕೊಳ್ಳದಿದ್ದ ಹಲವು ನಿರ್ಣಯಗಳನ್ನು ಈ ಏಳು ವರ್ಷಗಳಲ್ಲಿ ತೆಗೆದುಕೊಂಡಿದ್ದಾರೆ. ಅಲ್ಲದೆ ಅವರು ತಮ್ಮ ಸಂಪುಟದಲ್ಲಿ ದಲಿತರು, ಮಹಿಳೆಯರು, ಆದಿವಾಸಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದಾರೆ. ಎಲ್ಲಾ ವರ್ಗದವರಿಗೂ ಮೋದಿ ಸಂಪುಟದಲ್ಲಿ ಅವಕಾಶ ದೊರೆತಿದೆ. ಅದರಲ್ಲೂ ಕರ್ನಾಟಕಕ್ಕೆ 6 ಸಚಿವ ಸ್ಥಾನ ಸಿಗುವ ಮೂಲಕ ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ ಸಿಂಹಪಾಲು ದೊರೆತಿದೆ ಎಂದು ಖೂಬಾ ತಿಳಿಸಿದ್ದಾರೆ.