ಬೆಂಗಳೂರು : ಸರ್ಕಾರಿ ಸಂಸ್ಥೆಗಳಿಂದಲೇ ಬೆಸ್ಕಾಂಗೆ ಕೋಟಿ-ಕೋಟಿ ಬಾಕಿಯಿದ್ದು, BWSSB, BDA, BBMPಗೆ ಬೆಸ್ಕಾಂನಿಂದ ನೋಟಿಸ್ ನೀಡಿದೆ. ಸಂಸ್ಥೆಗಳು 131 ಕೋಟಿ ಕೋಟಿ ಬಾಕಿ ಉಳಿಸಿಕೊಂಡಿದೆ.
ವಾಟರ್ ಸಪ್ಲೈ, ಬೀದಿ ದೀಪ ಸ್ಥಾವರಗಳ ವಿದ್ಯುತ್ ಬಾಕಿ , ನಗರಸಭೆ, ಗ್ರಾಮ ಪಂಚಾಯ್ತಿಗಳಿಗೂ ಪ್ರತ್ಯೇಕ ನೋಟಿಸ್ ನೀಡಿದೆ. ಹೆಬ್ಬಾಳ, ಜಾಲಹಳ್ಳಿ ವಿಭಾಗಗಳ ಬೆಸ್ಕಾಂ EEಗಳಿಂದ ನೋಟಿಸ್ ನೀಡಿದ್ದು, BWSSBಯಿಂದ 65 ಕೋಟಿ ವಿದ್ಯುತ್ ಶುಲ್ಕ ಬಾಕಿಯಿದೆ. BBMP ನೀರು ಸರಬರಾಜು ವಿಭಾಗದಿಂದ 54.53 ಕೋಟಿ ಬಾಕಿಯಿದೆ. 7 ದಿನಗಳಲ್ಲಿ ವಿದ್ಯುತ್ ಬಿಲ್ ಬಾಕಿ ಪಾವತಿಗೆ ಬೆಸ್ಕಾಂ ಡೆಡ್ಲೈನ್ ನೀಡಿದೆ. ಬಾಕಿ ಬಿಲ್ ಕಟ್ಟದೇ ಇದ್ರೆ ಪವರ್ ಸಂಪರ್ಕ ಕಟ್ ಎಚ್ಚರಿಕೆ ನೀಡಿದೆ.
ಬೆಸ್ಕಾಂ ಅಧಿಕಾರಿಗಳು ನೋಟಿಸ್ನಲ್ಲಿ ವಾರ್ನಿಂಗ್ ನೀಡಿದ್ಧಾರೆ.
ಇದನ್ನೂ ಓದಿ : ಕಾಂಗ್ರೆಸ್ಗೆ ತಲೆನೋವಾದ ಹಿಂದೂ ಸಂಘಟನೆಗಳು..! ಹಿಂದೂ ಅಸ್ತ್ರ ಹಿಡಿದು ಕಾಂಗ್ರೆಸ್ಗೆ ಠಕ್ಕರ್ ಕೊಡ್ತಿರೋ ಹಿಂದೂ ಸಂಘಟನೆಗಳು…