ಬೆಂಗಳೂರು: 1.5 ಲಕ್ಷ ರೂ. ಲಂಚ ಪಡೆಯುವಾಗ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೆಂಗೇರಿ ಬೆಂಗಳೂರು ಗ್ರಾಮಾಂತರ ವೃತ್ತ ಕಚೇರಿಯಲ್ಲೇ ಅಧೀಕ್ಷಕ ಇಂಜಿನಿಯರ್ ಕೃಷ್ಣಪ್ರಸಾದ್ ಲಾಕ್ ಆಗಿದ್ದು, 1.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಗುತ್ತಿಗೆದಾರರೊಬ್ಬರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎಚ್ ವಿ ಕೃಷ್ಣಪ್ರಸಾದ್ ಲೋಕಾ ಡಿವೈಎಸ್ಪಿ ಅಂಥೋನಿ ನೇತೃತ್ವಲ್ಲಿ ಲಾಕ್ ಆಗಿದ್ದಾರೆ.
ಇದನ್ನೂ ಓದಿ:ಕೊರಟಗೆರೆಯಲ್ಲಿ ಪುಂಡರ ಹಾವಳಿ ಹೆಚ್ಚಳ… ಮಫ್ತಿಯಲ್ಲಿ ತೆರಳಿ ಪುಂಡರಿಗೆ ಬಿಸಿ ಮುಟ್ಟಿಸಿದ PSI..