ಬೆಂಗಳೂರಿನಲ್ಲಿ ಕಿಲ್ಲರ್ ಕೊರೋನಾ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. ಡೆಡ್ಲಿ ವೈರಸ್ ಓಟಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ, ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಒಂದು ವಾರದ ಲಾಕ್ ಡೌನ್ ಘೋಷಿಸಿದೆ. ಇಂದಿನಿಂದ ಜುಲೈ 22 ರ ಬೆಳಗ್ಗೆ 5 ಗಂಟೆಯ ವರೆವಿಗೂ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆ ಕಂಟ್ರೋಲ್ ರೂಂ ನಿಂದ ಕಮಿಷನರ್ ಭಾಷ್ಕರ್ ರಾವ್ ಬೆಂಗಳೂರಿನ ಸಪ್ತ ಸೂತ್ರಗಳ ಮೂಲಕ ಸಿಬ್ಬಂದಿಗಳಿಗೆ ಸಲಹೆ ಸೂಚನೆ ನೀಡಿದ್ದಾರೆ.
ಬೆಂಗಳೂರು ಪೊಲೀಸರಿಗೆ ಕಮಿಷನರ್ ಸಪ್ತ ಸೂತ್ರ :
1. ಲಾಕ್ ಡೌನ್ ವೇಳೆ ಸಾರ್ವಜನಿಕರ ಜೊತೆ ಮೃದುವಾಗಿ ವರ್ತನೆ ಮಾಡಿ.
2. ಮೆಡಿಕಲ್ ಸೇರಿದಂತೆ ಕೆಲವು ವ್ಯಾಪಾರ, ವಹಿವಾಟು ಇರುತ್ತೆ
3. ತಪಾಸಣೆ ವೇಳೆ ಐಡಿ ಕಾರ್ಡ್ ಪರಿಶೀಲನೆ ಮಾಡಿ
4. ಯಾರೊಂದಿಗೂ ಜಗಳ ಮಾಡಬೇಡಿ, ಅವಾಚ್ಯ ಶಬ್ಧ ಬಳಸಬೇಡಿ. ಜನರ ಜೊತೆ ಜವಾಬ್ದಾರಿಯುತವಾಗಿ ವರ್ತನೆ ಮಾಡಿ.
5. ಬ್ಯಾರಿಕೇಡ್ ಬಳಿ ಕೆಲಸ ಮಾಡೋ ಪಿಸಿ, ಹೆಚ್ಸಿ, ಮತ್ತು ASIಗಳೇ ಇವತ್ತಿನಿಂದ ಕಮಿಷನರ್
6. ಹೋಂ ಗಾರ್ಡ್ ಪೊಲೀಸರು, ವಾಲೇಂಟಿಯರ್ಸ್ ಗೆ ಒಂದು ಜಾಕೆಟ್ ಮತ್ತು ಕ್ಯಾಪ್ ಕೊಡಲಾಗುವುದು. ಬ್ಯಾರಿಕೇಡ್ ಬಳಿ, ಕಂಪ್ಯೂಟರ್ ಆಪರೇಟಿಂಗ್, ಬಂದೋಬಸ್ತ್ ಗೆ ವಾಲೇಂಟಿಯರ್ಸ್ ಬಳಸಿಕೊಳ್ಳಬಹುದು. ಅದ್ರೆ ವೇಪನ್ ಕೊಡಬೇಡಿ ಹಾಗೂ ಕಂಟೈನ್ಮೆಂಟ್ ಜೋನ್ ಗೆ ಕರೆದುಕೊಂಡು ಹೋಗಬಾರದು.
7.ಎಲೆಕ್ಟ್ರಾನಿಕ್ ಮೀಡಿಯಾ. ಪ್ರಿಂಟ್ ಮೀಡಿಯಾಗೆ ಪಾಸ್ ಬೇಕಿಲ್ಲ, ಐಡಿ ಕಾರ್ಡ್ ಇದ್ರೆ ಮುಕ್ತ ಅವಕಾಶಮಾಡಿಕೊಡಿ ಎಂದು ಸೂಚಿಸಿದ್ದಾರೆ.
ಬೆಂಗಳೂರು ಪೊಲೀಸ್ ಕಮಿಷನರ್ ಬಾಸ್ಕರರಾವ್ ಖುದ್ದು ಬೆಳ್ಳಂಬೆಳಗ್ಗೆಯೇ ರಸ್ತೆಗಿಳಿದು ಲಾಕ್ಡೌನ್ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದ್ದಾರೆ. ಬೆಂಗಳೂರಿನ ಪ್ರಮುಖ ಸರ್ಕಲ್ಗಳಲ್ಲಿ ಕಮಿಷನರ್ ಸಂಚಾರ ಮಾಡಿ, ಕೆ.ಆರ್.ಸರ್ಕಲ್, ಕಾರ್ಪೊರೇಷನ್, ಕಬ್ಬನ್ಪಾರ್ಕ್, ವಿಧಾನಸೌಧ, ರಾಜಭವನ, ವಿವಿ ಟವರ್ ಬಳಿ ವಾಕಿಂಗ್ ಮಾಡಿದ ಕಮಿಷನರ್ ಲಾಕ್ಡೌನ್ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದ್ದಾರೆ. ಡಿಸಿಪಿಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳಿಂದ ರಾತ್ರಿಯಿಂದ ಕೈಗೊಂಡಿರೋ ಕ್ರಮಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.