ಬೆಂಗಳೂರು : ಬೆಂಗಳೂರಿನಲ್ಲಿ ನಕಲಿ ಛಾಪಾ ಕಾಗದ ಹಗರಣ ಬಯಲಿಗೆ ಬಂದಿದ್ದು, ಸಿಸಿಬಿ ಪೊಲೀಸರು ನಕಲಿ ಛಾಪಾ ಕಾಗದದ ಹಗರಣದಲ್ಲಿ ಭಾಗಿಯಾಗಿದ್ದ ಗ್ಯಾಂಗ್ನ್ನು ಅರೆಸ್ಟ್ ಮಾಡಲಾಗಿದೆ. ಒಟ್ಟು ಹನ್ನೊಂದು ಅರೋಪಿಗಳನ್ನು ಅರೆಸ್ಟ್ ಮಾಡಿದ್ಧಾರೆ.
ಬಂಧಿತರಿಂದ 2664 ನಕಲಿ ಛಾಪಾ ಕಾಗದಗಳು ವಶಕ್ಕೆ ಪಡೆಯಲಾಗಿದೆ. ಮೈಸೂರು ಒಡೆಯರ ಕಾಲದಿಂದ ಇವತ್ತಿನ ವರೆಗಿನ ಛಾಪಾ ಕಾಗದಗಳು ಪತ್ತೆಯಾಗಿದೆ. ಛಾಪಾ ಕಾಗದ ಮೂಲಕ ಪ್ರಾಪರ್ಟಿಗಳ ಜಿಪಿಎ ಮಾಡುತಿದ್ದರು, ನಾಲ್ಕು ಕಡೆ ಈ ನಕಲಿ ಛಾಪಾ ಕಾಗದ ಬಳಸಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. 1990, 1995,2002,2009 ಇಸವಿಯಲ್ಲಿ ರಿಜಿಸ್ಟರ್ ನಡೆದಿರುವಂತೆ ದಾಖಲಾತಿ ಸೃಷ್ಟಿ ಮಾಡಿದ್ದು ಬಯಲಿಗೆ ಬಂದಿದೆ. ನಾಲ್ಕು ಕೇಸ್ ನಲ್ಲಿ ಕೋಟ್ಯಾಂತರ ರೂ ಬಾಳುವ ಆಸ್ತಿ ಗಳನ್ನು ಜಿಪಿಎ ಮಾಡಿದ್ದು ಬಯಲಾಗಿದೆ. ರಾಜರ ಕಾಲದ ಪೇಪರ್ ಗಳನ್ನು ಒಂದು ಪೇಪರ್ ಅನ್ನು ಐದರಿಂದ ಎಂಟು ಸಾವಿರಕ್ಕೆ ಮಾರಾಟ ಮಾಡಿದ್ದಾರೆ.
ಆರೋಪಿಗಳು ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಂದಾಯ ಭವನದ ಮಾರಾಟ ಮಾಡುತ್ತಿದ್ದರು. ಪೊಲೀಸರು ಆರೋಪಿಗಳಿಂದ ನೂರಕ್ಕು ಹೆಚ್ಚು ಸೀಲ್ ಗಳು ವಶಕ್ಕೆ ಪಡೆದಿದ್ಧಾರೆ. ನಕಲಿ ಛಾಪಾ ಕಾಗದಕ್ಕೆ ನಕಲಿ ಸೀಲ್ ಹಾಕಿ ಬಳಕಿ ಮಾಡಿದ್ದಾರೆ. ಯಾವ ಯಾವ ಇಸವಿಯ ನಕಲಿ ದಾಖಲೆ ಸೃಷ್ಟಿ ಮಾಡ್ಬೇಕಿತ್ತು ಆ ಇಸವಿಯಲ್ಲಿ ಯಾವ ರೀತಿ ಸೀಲ್ ಇರುತ್ತಿತ್ತು ಅದೇ ರೀತಿ ಸೀಲ್ ತಯಾರು ಮಾಡಲಾಗಿದೆ. ಆರೋಪಿಗಳು ಎರಡೂ ರೀತಿಯಲ್ಲಿ ವಂಚನೆ ಮಾಡುತ್ತಿದ್ದರು. ಒಂದು : ಕೇವಲ ನಕಲಿ ಛಾಪಾ ಕಾಗದ ನೀಡುವುದು. ಎರಡು : ನಕಲಿ ಛಾಪಾ ಕಾಗದ ಬಳಿಸಿ ನಕಲಿ ದಾಖಲಾತಿ ಗಳನ್ನು ತಯಾರು ಮಾಡಿ ಆಸ್ತಿ ಪತ್ರ, ಜಿಪಿಎ ಮಾಡಿರುವುದು ಬಯಲಿಗೆ ಬಂದಿದೆ. 1 ಕೋಟಿ ಮೂವತ್ತಮೂರು ಲಕ್ಷದ ಇಪತ್ತು ಸಾವಿರ ರೂ ಬಾಳುವ ನಕಲಿ ಛಾಪಾ ಕಾಗದಗಳು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ : ಕೊಡಗು ಜಿಲ್ಲೆಯಲ್ಲಿ ವರುಣನ ರೌದ್ರಾವತಾರ… ನಾಪೋಕ್ಲು-ಭಾಗಮಂಡಲ ಸಂಪರ್ಕ ಬಂದ್…