ಹಾಸನ: ಮುಸ್ಲಿಂ ಸಮುದಾಯದ ವ್ಯಾಪಾರಿಗಳಿಗೆ ಹಿಂದೂ ಜಾತ್ರೆಗಳಲ್ಲಿ ದೇವಸ್ಥಾನದ ಆವರಣಗಳಲ್ಲಿ ಮಳಿಗೆ ಹಾಕದಂತೆ ವ್ಯಾಪಾರ ಮಾಡದಂತೆ ತಡೆಯುವುದು ಮುಂದುವರಿದಿದ್ದು, ಮೊದಲು ಜಾತ್ರೆಗಳಿಂದ ಅವರಿಗೆ ನಿಷೇಧ ಹೇರಲಾಗಿತ್ತು, ಇದೀಗ ದೇವಸ್ಥಾನ ಆವರಣಗಳಲ್ಲಿ ಹಿಂದೂಯೇತರರು ವ್ಯಾಪಾರ ಮಾಡಬಾರದೆಂದು ನಿಷೇಧ ಹೇರಲಾಗುತ್ತಿದೆ. ಹಾಸನ ಜಿಲ್ಲೆಯ ಬೇಲೂರು ಚೆನ್ನಕೇಶವ ದೇವಾಲಯದಲ್ಲಿ ಹಿಂದೂಯೇತರರು ವ್ಯಾಪಾರ ಮಾಡಬಾರದೆಂದು ನೋಟಿಸ್ ನೀಡಿದೆ.
ಈ ಬಗ್ಗೆ ಹಾಸನ ಜಿಲ್ಲೆಯ ಬೇಲೂರು ಚೆನ್ನಕೇಶವ ದೇವಾಲಯದ ಆಡಳಿತ ಮಂಡಳಿ ನೋಟಿಸ್ ಹೊರಡಿಸಿದೆ. ಈಗಾಗಲೇ ದೇಗುಲ ಆವರಣದಲ್ಲಿ 40 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದ ಹಿಂದೂಯೇತರ ಅಂಗಡಿಗಳಿಗೆ ನೋಟಿಸ್ ನೀಡಲಾಗಿದ್ದು, ದೇವಸ್ಥಾನ ಆಡಳಿತ ಮಂಡಳಿಯ ನಿರ್ಧಾರ ವ್ಯಾಪಾರಿಗಳಿಗೆ ಆಘಾತವನ್ನುಂಟು ಮಾಡಿದ್ದು, ಹಿಂದೂಯೇತರ ವ್ಯಪಾರಿಗಳು, ಹಾಸನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತಮ್ಮ ನೋವನ್ನು ತೋಡಿಕೊಳ್ಳುತ್ತಾ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ:ಸಂಬಳ ಕೊಡದ ಹಿನ್ನಲೆ ಟ್ರಕ್ ಚಾಲಕ ವಿಡಿಯೋ ಮಾಡಿಟ್ಟು ನೇಣಿಗೆ ಶರಣು…!