ಬೆಳಗಾವಿ : ದೇವಸ್ಥಾನದ ಜಾಗದ ವಿಚಾರದಲ್ಲಿ 2 ಗುಂಪುಗಳ ಘರ್ಷಣೆ ನಡೆದಿದ್ದು, ಘರ್ಷಣೆಯಲ್ಲಿ ಓರ್ವನ ಹತ್ಯೆ ಮಾಡಲಾಗಿದ್ದು, 20ಕ್ಕೂ ಅಧಿಕ ಮಂದಿ ಅರೆಸ್ಟ್ ಮಾಡಲಾಗಿದೆ. ಬಂಧನದ ಭೀತಿಯಿಂದ ಪುರುಷರು ಗ್ರಾಮ ತೊರೆದಿದ್ದಾರೆ.
ಬೆಳಗಾವಿ ತಾಲೂಕಿನ ಗೌಂಡವಾಡ ಗ್ರಾಮದಲ್ಲಿ ಗಲಾಟೆ ನಡೆದಿದೆ. 2 ಗುಂಪುಗಳ ನಡುವೆ ಜಾಗದ ವ್ಯಾಜ್ಯದ ಬಗ್ಗೆ ಘರ್ಷಣೆ ನಡೆದಿದ್ದು, 2 ಗುಂಪುಗಳ ಘರ್ಷಣೆಯಲ್ಲಿ ಸತೀಶ್ ಪಾಟೀಲ್ ಹತ್ಯೆಯಾಗಿದೆ. ಕೃತ್ಯದಲ್ಲಿ ಭಾಗಿಯಾದ 20ಕ್ಕೂ ಅಧಿಕ ಮಂದಿಯನ್ನ ಪೊಲೀಸರು ಅರೆಸ್ಟ್ ಮಾಡಲಾಗಿದೆ. ಬಾಳು ನಿಲಜಕರ್, ಲಖನ್ ನಿಲಜಕರ್, ಮಹಾಂತೇಶ್, ಅನಂತ, ಅರ್ನವ್ ಕೂಟ್ರೇ, ದಾವಲತ್ ಮುತಗೇಕರ್, ಸೂರಜ್ ಕೇಶವ್ ಪಾಟೀಲ್ ಸೇರಿ 20 ಮಂದಿಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸತೀಶ್ ಹತ್ಯೆಯಲ್ಲಿ 30ಕ್ಕೂ ಹೆಚ್ಚು ಮಂದಿ ಭಾಗಿ ಶಂಕೆ ವ್ಯಕ್ತವಾಗುತ್ತಿದೆ. ನಿಲಜಕರ್ ಕುಟುಂಬಸ್ಥರು ಕೊಲೆ ನಂತ್ರ ಊರು ಬಿಟ್ಟಿದ್ದಾರೆ. ಸತೀಶ್ ಪಾಟೀಲ್ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. 2 ಕಾರು, 1 ಲಾರಿ, ಟ್ರಾಕ್ಟರ್ ಸೇರಿ ಹಲವು ವಾಹನಗಳು ಭಸ್ಮವಾಗಿದೆ. ಸದ್ಯ ಗೌಂಡವಾಡ ಗ್ರಾಮ ಬೂದಿಮುಚ್ಚಿದ ಕೆಂಡದಂತಾಗಿದೆ.
ಇದನ್ನೂ ಓದಿ : ಪ್ರಧಾನ ಮಂತ್ರಿಗಳ ಮಿನಿಟು ಮಿನಿಟ್ ಪ್ರೋಗ್ರಾಮ್ ಲಿಸ್ಟ್ ಇಲ್ಲಿದೆ ನೋಡಿ..!