ಮದುವೆ ಫಿಕ್ಸ್ ಆದ ತಕ್ಷಣ ಪ್ರಿಯಕರನ ಜೊತೆ ಓಡಿ ಹೋಗುವ ಅದೆಷ್ಟೋ ಪ್ರಕರಣಗಳನ್ನ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಯುವತಿ ಮದುವೆಯಾದ ಕೆಲವೇ ದಿನಗಳಲ್ಲಿ ತನ್ನ ಪತಿಗೆ ಕೈಕೊಟ್ಟು ಓಡಿ ಹೋಗಿದ್ದಾಳೆ.
ಅಂದಹಾಗೆ ಇಂತದ್ದೊಂದು ಘಟನೆ ನಡೆದಿರುವುದು ಮಧ್ಯಪ್ರದೇಶದ ಛತ್ತರ್ ಪುರದಲ್ಲಿ. ಕಳೆದ ಡಿಸೆಂಬರ್ ನಲ್ಲಿ ಮೂರ್ತಿ ರೆಕ್ವಾರ್ ಹಾಗೂ ರಾಹುಲ್ ಗೆ ಮದುವೆಯಾಗಿತ್ತು. ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಜರುಗಿತ್ತು. ಆದ್ರೆ ಯುವತಿ ಲವ್ ಮಾಡ್ತಿರೋ ವಿಷಯವನ್ನ ತನ್ನ ಕುಟುಂಬದವರಿಗೆ ತಿಳಿಸಿರ್ಲಿಲ್ವೋ, ಇಲ್ಲ ಅದು ಗೊತ್ತಿದ್ರು ಒತ್ತಾಯ ಪೂರ್ವಕವಾಗಿ ಮದ್ವೆ ಮಾಎಇದ್ರೋ ಗೊತ್ತಿಲ್ಲ. ಯಾಕಂದ್ರೆ ಮದ್ವೆ ಆಗಿ ಗಂಡನ ಮನೆಯಲ್ಲಿ ಸುಖ ಸಂಸಾರ ನಡೆಸಬೇಕಿದ್ದವಳು, ಗಂಡನನ್ನೆ ಯಾಮಾರಿಸಿ ಪ್ರಿಯಕರನ ಜೊತೆ ಕಾಲ್ಕಿತ್ತಿದ್ದಾಳೆ.
ಹುಡುಗ ಹಾಗೂ ಹುಡುಗಿ ಮನೆಯವರ ಶಾಸ್ತ್ರದ ಪ್ರಕಾರ ಮದುವೆಯಾದ ೧೮ ನೇ ದಿನಕ್ಕೆ ಗಂಡನ ಮನೆಯಿಂದ ಹುಡುಗಿಯನ್ನು ಆಕೆಯ ತವರು ಮನೆಗೆ ಕಳುಹಿಸಬೇಕು. ಈ ಹಿನ್ನೆಲೆ ತವರು ಮನೆಗೆ ಹೊರಟ ಯುವತಿ ಶಾಸ್ತ್ರ ಮುಗಿಸಿ ಅಲ್ಲಿಂದ ಗಂಡನ್ ಮನೆಗೆಂದು ಹೊರಟಿದ್ದಾಳೆ ಆದ್ರೆ ಗಂಡನ ಮನೆಗೆ ಬಂದಿಲ್ಲ. ಬದಲಾಗಿ ಹುಟ್ಟೂರಿನ ನಿವಾಸಿ ಭಜ್ಜು ಅಂದ್ರೆ ತನ್ನ ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ. ಇನ್ನೂ ಹೋಗುವಾಗ ಬರಿಗೈಯಲ್ಲಿ ತೆರಳಿಲ್ಲ, ೫ ಲಕ್ಷ ಮೌಲ್ಯದ ಒಡವೆ ಹಾಗೂ ೨೦ ಸಾವಿರ ಹಣದೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಪತ್ನಿಗಾಗಿ ಕಾದು ಕೂತಿದ್ದ ಪತಿ, ಆಕೆ ಬರದಿದ್ದಕ್ಕೆ ಗಾಬರಿಯಾಗಿ ತವರಿಗೆ ಹೋಗಿ ಪರಿಶೀಲನೆ ನಡೆಸಿದ ಬಳಿಕ ಆಕೆ ಪ್ರಿಯಕರನ ಜೊತೆ ಓಡಿ ಹೋಗಿರುವ ವಿಷಯ ಬಯಲಾಗಿದೆ. ಸದ್ಯ ಯುವತಿ ಪರಾರಿಯಾಗಿರುವ ಬಗ್ಗೆ ಈಗಾಗಲೇ ಪೋಲಿಸ್ ಠಾಣೆಯಲ್ಲಿ ದೂರದಾಖಲಾಗಿದ್ದು, ಪೋಲೀಸರು ತನಿಖೆ ನಡೆಸುತಿದ್ದಾರೆ.