ಬೆಂಗಳೂರು : BDA ಗ್ರೂಪ್ ಸಿ ಸಿಬ್ಬಂದಿ ಶಿವಲಿಂಗಯ್ಯ ಭಾರೀ ಕುಳ ಹೊಂದಿದ್ದಾರೆ, ಬೆಂಗಳೂರು ಸೇರಿ ಹಲವು ಕಡೆ ಮನೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಉತ್ತರಹಳ್ಳಿ, ಚನ್ನಪಟ್ಟಣ ಸೇರಿ ಹಲವೆಡೆ ರೇಡ್ ನಡೆಸಲಾಗುತ್ತಿದೆ.
ಶಿವಲಿಂಗಯ್ಯ ಬೆಂಗಳೂರಿನಲ್ಲೇ 5 ಸೈಟ್ ಹೊಂದಿದ್ದಾರೆ. ಚನ್ನಪಟ್ಟಣದ ಬಳಿ 5 ಎಕರೆ ಭೂಮಿ, ಮೈಸೂರು-ಬೆಂಗಳೂರು ಕಾರಿಡಾರ್ ಪಕ್ಕದಲ್ಲೇ ಇರುವ ವಾಣಿಜ್ಯ ಭೂಮಿ ಹಾಗೂ ಕೋಟಿ ಗಟ್ಟಲೆ ಬೆಲೆ ಬಾಳುವ 1 ಎಕರೆ 10 ಗುಂಟೆ ಭೂಮಿ ಹೊಂದಿದ್ದಾರೆ. ಇನ್ನೂ ಹಲವು ಕಡೆ ಭೂಮಿ ಹೊಂದಿರುವ ದಾಖಲೆಗಳು ಪತ್ತೆಯಾಗಿದೆ.
ಯಾವ IAS, IPSಗೂ ಕಡಿಮೆಯಿಲ್ಲ ಈತನ ಲೈಫ್ ಸ್ಟೈಲ್. ಹೆಸರಿಗೆ ಗಾರ್ಡನರ್ ಕೆಲಸ..ಮಾಡಿರೋ ಆಸ್ತಿ ಕೋಟಿಕೋಟಿಯದ್ದು. ಪತ್ನಿ ಹೆಸರಿನಲ್ಲಿ ಕೋಟ್ಯಂತರ ಬೆಲೆ ಬಾಳೋ ಜಮೀನು, ಮಗನ ಹೆಸರಿನಲ್ಲಿ ಬಾರ್..ಹೈವೆ ಪಕ್ಕ ಕಮರ್ಷಿಯಲ್ ಲ್ಯಾಂಡ್ ಮಾಡಿದ್ದಾನೆ. ಸುಮಾರು ಹತ್ತಾರು ಕೋಟಿ ಬೆಲೆ ಬಾಳೋ ಕಮರ್ಷಿಯಲ್ ಲ್ಯಾಂಡ್, ಈತನ ಮನೆಯಲ್ಲಿ ACB ಟೀಂಗೆ ಸಿಕ್ಕವು ಮೂಟೆಗಟ್ಟಲೆ ದಾಖಲೆ ಸಿಕ್ಕಿವೆ. ಇವನು BDA ಪಾರ್ಕ್ ಅಷ್ಟೇ..ಈತ ನೋಡದ ದೇಶವೇ ಇಲ್ಲ.ಶಿವಲಿಂಗಯ್ಯ- ವರ್ಷಕ್ಕೊಂದರಂತೆ ಫಾರಿನ್ ಟೂರ್ ಹೋಗುತ್ತಿದ್ದನು. ಮೊನ್ನೆ-ಮೊನ್ನೆ ರಷ್ಯಾಗೂ ಹೋಗಿಬಂದಿದ್ದಾರೆ.
ಇದನ್ನೂ ಓದಿ : ಬಾಗಲಕೋಟೆಯ RTO ಅಧಿಕಾರಿ ಮನೆಯಲ್ಲಿ ಕಂತೆ-ಕಂತೆ ಹಣ..! ಯಲ್ಲಪ್ಪ ಪಡಸಾಲಿ ಮನೆಯಲ್ಲಿ 17 ಲಕ್ಷ ಹಣ ಪತ್ತೆ..!