ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಏನ್ ಮಾಡ್ತೀದ್ದಾರೆ ಗೊತ್ತಾ? ಕೊರೋನಾ ಭೀತಿ ಇವರನ್ನು ಕಾಡಿದ್ಯಾ? ಹೋಂ ಕ್ವಾರಂಟೈನ್ನಲ್ಲಿದ್ದಾರಾ ಸೌರವ್ ಗಂಗೂಲಿ?
ಹೌದು, ಇಡೀ ದೇಶವನ್ನೇ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೋನಾ ಕ್ರಿಕೆಟಿಗರನ್ನು ಕಾಡಿದೆ. ಬಿಸಿಸಿಐ ಅಧ್ಯಕ್ಷ, ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಇದೀಗ ಹೋಮ್ ಕ್ವಾರಂಟೈನ್‌ನಲ್ಲಿದ್ದಾರೆ. ಕ್ರಿಕೆಟ್ ಅಸೋಸಿಯೇಶನ್ ಆಫ್ ವೆಸ್ಟ್ ಬೆಂಗಾಲ್‌ನ ಜಂಟಿ ಕಾರ್ಯದರ್ಶಿ, ತನ್ನ ಅಣ್ಣ ಸ್ನೇಹಸಿಶ್ ಗಂಗೂಲಿಗೆ ಕೊರೊನಾ ಪಾಸಿಟಿವ್ ಬಂದಿರುವುದರಿಂದ ಇದೀಗ ಕೂಡ ಗಂಗೂಲಿ ಐಸೊಲೇಶನ್‌ನಲ್ಲಿದ್ದಾರೆ.