ಬೆಂಗಳೂರು: BBMPಯ FDC ಮಾಯಣ್ಣ ಮನೆ ಮೇಲೆ ACB ದಾಳಿ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಯಣ್ಣ ಪ್ರತಿಕ್ರಿಯಿಸಿದ್ದು, ACB ಕಾನೂನು ಪ್ರಕಾರ ಏನ್ ಮಾಡಬೇಕು ಮಾಡಿದ್ದಾರೆ, ನಾನು ಕಾನೂನು ಬದ್ಧವಾಗಿ ಇದ್ದೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಎಸಿಬಿ ದಾಳಿ ಬಳಿಕ BBMPಯ FDC ಮಾಯಣ್ಣ, ನಾನು ಕಾನೂನು ಚೌಕಟ್ಟು ಬಿಟ್ಟು ಹೋಗಿಲ್ಲ, ಯಾವುದೋ ಪಹಣಿ ಸಿಕ್ಕ ಮಾತ್ರಕ್ಕೆ ಬೇನಾಮಿ ಆಸ್ತಿ ಅಲ್ಲ. ತನಿಖೆಯಲ್ಲಿ ಬೇನಾಮಿ ಆಸ್ತಿನಾ.. ಅಲ್ವಾ ಅಂತಾ ತಿಳಿಯುತ್ತೆ, 556 ಗ್ರಾಂ ಚಿನ್ನ, ಒಂದೂವರೆ ಕೆಜಿ ಬೆಳ್ಳಿ, 59,000 ನಗದು ಸಿಕ್ಕಿದೆ. ಎಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಒಂದು ವಾರ ಬಿಟ್ಟು ವಿಚಾರಣೆಗೆ ಬರುವಂತೆ ತಿಳಿಸಿದ್ದಾರೆ ಎಂದು ಎಸಿಬಿ ದಾಳಿ ಬಳಿಕ BBMPಯ FDC ಮಾಯಣ್ಣ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಮಂಡ್ಯದಿಂದಲೇ ಮತ್ತೆ ಕಾಂಗ್ರೆಸ್ ಶಕೆ ಆರಂಭ… ಹೊಸ ಮನ್ವಂತರಕ್ಕೆ MLC ಚುನಾವಣೆಯೇ ಸಾಕ್ಷಿಯಾಗಲಿದೆ… ಚೆಲುವರಾಯಸ್ವಾಮಿ…