ಮೈಸೂರು: BBMP ಎಲೆಕ್ಷನ್..ಪ್ರಮಾಣ ಪತ್ರ ಸಲ್ಲಿಸಲು ಸರ್ಕಾರ ರೆಡಿಯಾಗಿದ್ದು, ಜುಲೈ 22ರಂದು ಸುಪ್ರೀಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಕೆಯಾಗಲಿದೆ.
ಈ ಪ್ರಮಾಣ ಪತ್ರ ಸಲ್ಲಿಕೆ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ವಾರ್ಡ್ ಮರುವಿಂಗಡಣೆ, ಮೀಸಲು ನಿಗದಿ ಪ್ರಮಾಣ ಪತ್ರ ಸಲ್ಲಿಸ್ತೇವೆ, ಕೋರ್ಟ್ ಸೂಚನೆಯನ್ನು ಆಧರಿಸಿ ಚುನಾವಣಾ ಪಕ್ರಿಯೆ ನಡೆಯಲಿವೆ. ತಾಲೂಕು, ಜಿಲ್ಲಾ ಪಂಚಾಯ್ತಿ, ಬಿಬಿಎಂಪಿ ಎಲೆಕ್ಷನ್ಗೆ ಕ್ರಮ ಕೈಗೊಳ್ತೇವೆ ಎಂದು ಹೇಳಿದ್ದಾರೆ.