ಬೆಂಗಳೂರು : BBMP ಎಲೆಕ್ಷನ್ ಅನೌನ್ಸ್ ಆಗ್ತಿದ್ದಂತೇ ಸಿಎಂ ಬಸವರಾಜ ಬೊಮ್ಮಾಯಿ ಫುಲ್ ಅಲರ್ಟ್ ಆಗಿದ್ದು, ಬೆಂಗಳೂರಿಗೆ ಇಂದು ರಾತ್ರಿಯೇ ಅಷ್ಟ ದಿಕ್ಪಾಲಕರ ನೇಮಕ ಮಾಡುತ್ತಿದ್ದಾರೆ. ಸಿಎಂ ಬೆಂಗಳೂರು ಅಭಿವೃದ್ಧಿಗೆ ಚುರುಕು ಮುಟ್ಟಿಸಲು ಮುಂದಾಗಿದ್ದು, ಬೆಂಗಳೂರು ಅಭಿವೃದ್ಧಿಗಾಗಿ ಅಷ್ಟ ದಿಕ್ಪಾಲಕರ ನೇಮಕ ಮಾಡುತ್ತಿದ್ದಾರೆ.
ಈ ಬಗ್ಗೆ ಸಿಎಂ ಬೊಮ್ಮಾಯಿ ಡಿಸಿ, ಸಿಇಒಗಳ ಸಭೆ ಬಳಿಕ ಮಾತನಾಡಿ ಬೃಹತ್ ಬ್ಯಾಟಲ್ ಗೆಲುವಿಗೆ ಅಷ್ಟ ದಿಕ್ಪಾಲಕರ ನೇಮಕವಾಗುತ್ತಿದೆ. ಬೆಂಗಳೂರಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡೋ ಜವಾಬ್ದಾರಿ ಇವರದ್ದೇ ಹಾಗೂ ರಾಜಕಾಲುವೆ, ರಸ್ತೆಗುಂಡಿಗಳು ಎಲ್ಲದಕ್ಕೂ ಅಷ್ಟ ದಿಕ್ಪಾಲಕರೇ ಜವಾಬ್ದಾರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತ್ತೆ ಕಿಡಿಗೇಡಿಗಳ ಉದ್ಧಟತನ..! ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಕಿಡಿಗೇಡಿಗಳಿಂದ ಕಲ್ಲು ತೂರಾಟ..!