ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಖಾಲಿ ಸೈಟ್ ಗಳ ಮಾಲೀಕರಿಗೆ ಪಾಲಿಕೆ ಶಾಕ್ ನೀಡಿದ್ದು, ಖಾಲಿ ನಿವೇಶನಗಳಲ್ಲಿನ ಕಸ ತೆರವು ಮಾಡದಿದ್ದರೆ ಫೈನ್ ಹಾಕಲು ನಿರ್ಧರಿಸಿದೆ.
ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ, ನಿವೇಶದ ವಿಸ್ತೀರ್ಣದ ಆಧಾರದ ಮೇಲೆ 50 ಸಾವಿರದಿಂದ 1 ಲಕ್ಷ ರೂ.ವರೆಗೂ ದಂಡ ವಿಧಿಸಬಹುದಾಗಿದೆ.
ಇನ್ನು ಖಾಲಿ ನಿವೇಶನಗಳಲ್ಲಿರುವ ಕಟ್ಟಡ ಅವಶೇಷಗಳು, ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡಬೇಕು. ಘನತ್ಯಾಜ್ಯವನ್ನು ಬೀದಿ, ತೆರೆದ ಸಾರ್ವಜನಿಕ ಸ್ಥಳಗಳಲ್ಲಿ, ಚರಂಡಿಯಲ್ಲಿ ಎಸೆಯುವುದಾಗಲಿ, ಸುಡುವುದಾಗಲಿ ಅಥವಾ ಹೂಳುವುದಾಗಲಿ ಮಾಡುವಂತಿಲ್ಲ ಎಂದು ಯಲಹಂಕ ವಲಯ ಜಂಟಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.