ಬೆಂಗಳೂರು: ಶೀಘ್ರದಲ್ಲೇ ಬಿಬಿಎಂಪಿ ಚುನಾವಣೆ ನಡೆಯಲಿದ್ದು, ಚುನಾವಣೆ ನಡೆಸಲು ಬಿಬಿಎಂಪಿ ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ಧಾರೆ.
ಇದನ್ನೂ ಓದಿ: BBMP ಎಲೆಕ್ಷನ್ಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್… ಕೋರ್ಟ್ ಸೂಚನೆ ಬರ್ತಿದ್ದಂತೆ ಬಿಜೆಪಿ ಅಲರ್ಟ್…
ಬಿಬಿಎಂಪಿ ಚುನಾವಣೆ ಕುರಿತು ಪ್ರತಿಕ್ರಿಯೆ ನೀಡಿರುವ ತುಷಾರ್ ಗಿರಿನಾಥ್ ಅವರು ಚುನಾವಣಾ ಆಯೋಗ ಚುನಾವಣೆ ಘೋಷಿಸಿದರೆ ಎಲ್ಲಾ ರೀತಿಯ ಸಿದ್ದತೆಗಳನ್ನು ನಾವು ಮಾಡಿಕೊಳ್ಳುತ್ತೇವೆ. ಡಿ ಲಿಮಿಟೇಶನ್ ಮಾಡಲೇ ಬಾರದು ಅಂತ ನ್ಯಾಯಪೀಠ ಹೇಳಿಲ್ಲ. ಇದಕ್ಕೆ ವಾರ್ಡ್ ವಿಂಗಡಣಾ ಸಮಿತಿ ಸರ್ಕಾರ ಮತ್ತು ಆಯೋಗದ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತದೆ. ಯಾವುದೇ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗುವುದು, ಇದು ಸರ್ಕಾರಕ್ಕೆ ಬಿಟ್ಟ ವಿಚಾರ. ಒಟ್ಟಾರೆ ಚುನಾವಣೆ ಘೋಷಣೆಯಾದರೆ ಪಾಲಿಕೆ ಎಲೆಕ್ಷನ್ ನಡೆಸಲು ಎಲ್ಲಾ ರೀತಿಯಲ್ಲೂ ಸಿದ್ಧವಾಗಿದೆ ಎಂದು ತಿಳಿಸಿದ್ಧಾರೆ.