ಬೆಂಗಳೂರು : ಬ್ಯಾಟರಾಯನಪುರ ಪೊಲೀಸರು ಭರ್ಜರಿ ಕಾರ್ಯಚಾರಣೆ ನಡೆಸಿದ್ದು, ವಿವಿಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿದ್ದಾರೆ.
ಅನ್ಸರ್ ಪಾಷ್, ಅಜೀತ್ ಬಂಧಿತ ಆರೋಪಿಗಳಾಗಿದ್ದಾರೆ. ಅನ್ಸರ್ ಪಾಷ್ ಜೆಜೆ ನಗರ ನಿವಾಸಿಯಾಗಿದ್ದು, ಡ್ರಗ್ಸ್ ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿದ್ದ. ಅಜೀತ್ ಸಹ ಮನೆ ಕಳ್ಳತನದಲ್ಲಿ ಭಾಗಿಯಾಗಿದ್ದನು. ಈ ಬಗ್ಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ ಬ್ಯಾಟರಾಯನಪುರದ ನ್ಯೂ ಎಕ್ಸಟೆಷನ್ ನಲ್ಲಿ ಕಳ್ಳತನ ಪ್ರಕರಣ ನಡೆದಿದ್ದು, ಅಕ್ಷಯ ತೃತೀಯ ದಿನ ಚಿಕ್ಕಮ್ಮನ ಮನೆಯಲ್ಲೆ ಒಂದೂವರೆ ಕೆಜಿ ಚಿನ್ನ ಕಳ್ಳತನ ಮಾಡಿದ್ದ.ಅತೀ ಹೆಚ್ಚು ಸಾಲ ಮಾಡಿದ್ದ, ಹಾಗೂ ಜೂಜಾಟದಲ್ಲಿ ಸುಮಾರು 30 ಲಕ್ಷ ದಷ್ಟು ಹಣ ಕಳೆದುಕೊಂಡಿದ್ದ. ಸಾಲ ತೀರಿಸಲು ಚಿಕ್ಕಮ್ಮನ ಮನೆಯಲ್ಲೆ ಕಳ್ಳತನ ಮಾಡಿದ್ದನು.
ಇದನ್ನೂ ಓದಿ : ಮೈಸೂರಿನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ರಸ್ತೆ ಅಪಘಾತ..! ಸ್ಥಳದಲ್ಲೇ ಇಬ್ಬರು ಯುವಕರು ಸಾವು.. ಓರ್ವನ ಸ್ಥಿತಿ ಗಂಭೀರ..!