ಬೆಂಗಳೂರು: ಕರ್ನಾಟಕದ ಪ್ರಗತಿಯ ಇತಿಹಾಸದಲ್ಲಿ ಇಂದು ಸವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ, ಇಂದು 33 ಸಾವಿರ ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ಸಿಕ್ಕಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಿಳಿಸಿದ್ದಾರೆ.
ಕೊಮ್ಮಘಟ್ಟದಲ್ಲಿ ನಡೆಯುತ್ತಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ ಅವರು ಇಂದು 33 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ಸಿಕ್ಕಿದೆ. ಸಬ್ ಅರ್ಬನ್ ರೈಲು (Suburban Railway) ಬೆಂಗಳೂರಿಗೆ ಹೊಸ ದಿಕ್ಕು, ಇದು 4 ದಿಕ್ಕಿನಲ್ಲೂ ಬೆಂಗಳೂರನ್ನು ಜೋಡಿಸುತ್ತದೆ. ಜೋಡಿ ರೈಲು ಮಾರ್ಗಗಳು ಜನಸಂಪರ್ಕವನ್ನು ಹೆಚ್ಚಿಸಲಿವೆ.
ತುಮಕೂರು-ನೆಲಮಂಗಲ ಮಧ್ಯೆ ಹೆದ್ದಾರಿ ಅಭಿವೃದ್ಧಿ, ಬೆಂಗಳೂರು ಸ್ಯಾಟಲೈಟ್ ಟೌನ್ಗೆ ಚಾಲನೆ ಸಿಕ್ಕಿದೆ. ದಾಬಸ್ಪೇಟೆಯಿಂದ 4 ಉಪನಗರಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ರಾಜಕಾರಣಿ ಕಣ್ಣು ಮುಂದಿನ ಚುನಾವಣೆ ಮೇಲಿರುತ್ತದೆ, ಮುತ್ಸದ್ಧಿ ಕಣ್ಣು ಮುಂದಿನ ಜನಾಂಗದ ಮೇಲಿರುತ್ತೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಯವರು ದೇಶದ ಮಹಾನ್ ಮುತ್ಸದ್ಧಿ. 2047ಕ್ಕೆ ಭಾರತ ಸಮಗ್ರ ಏಳಿಗೆಯ ರಾಷ್ಟ್ರವಾಗಲಿದೆ ಎಂದು ಬೊಮ್ಮಾಯಿ ಅವರು ತಿಳಿಸಿದ್ಧಾರೆ.
ಕರ್ನಾಟಕಕ್ಕೆ ಕಿಸಾನ್ ಸಮ್ಮಾನ್ನಲ್ಲಿ 53.83 ಲಕ್ಷ ರೈತರಿಗೆ ಲಾಭವಾಗಿದೆ. 34 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಸಿಕ್ಕಿದ್ದರೆ, 48 ಲಕ್ಷ ಮನೆಗಳಿಗೆ ಕುಡಿಯುವ ನೀರು ಸಂಪರ್ಕ ಸಿಕ್ಕಿದೆ. ಇನ್ನು ಪ್ರತಿ ಮನೆಗೂ ನಲ್ಲಿ ನೀರು ಕೊಡುವ ಗುರಿ ಇದೆ. ಭಾರತಕ್ಕೆ ಮೋದಿ ಹೊಸ ದಿಕ್ಕು ತೋರಿದ್ದಾರೆ. 594 ಹೊಸ ಮೆಡಿಕಲ್ ಕಾಲೇಜಿಗೆ ಒಪ್ಪಿಗೆ ನೀಡಿದ್ದಾರೆ ಎಂದು ಬೊಮ್ಮಾಯಿ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕೊಮ್ಮಘಟ್ಟದಲ್ಲಿ ನಮೋ ಸಾರ್ವಜನಿಕ ಸಮಾವೇಶ… ವಿವಿಧ ಸರ್ಕಾರಿ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ ಮೋದಿ…