ಬೆಂಗಳೂರು: ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ADGP ಅಮೃತ್ ಪೌಲ್ ಅವರ ಬಂಧನದಿಂದ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿಲ್ಲ, ಎಷ್ಟೇ ದೊಡ್ಡವರಿದ್ದರೂ ನಾವು ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: ACB ಪೊಲೀಸರಿಂದ ರಣಬೇಟೆ… ಬೆಂಗಳೂರು ನಗರ ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್ …
ಅಮೃತ್ ಪೌಲ್ ಬಂಧನದ ಕುರಿತು ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ ಅವರು ಎಷ್ಟೇ ದೊಡ್ಡವರಿದ್ರೂ, ನಾವು ಕ್ರಮ ತಗೊಳ್ತೀವಿ, ಸಿಐಡಿಗೆ ಮುಕ್ತ ತನಿಖೆಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಅಮೃತ್ ಪೌಲ್ ಬಂಧನದಿಂದ ಸರ್ಕಾರಕ್ಕೆ ಮುಖಭಂಗ ಆಗಿಲ್ಲ. ತನಿಖೆಗೆ ಮಾಡಿದವರು ನಾವು.. ಬೇರೆ ಸರ್ಕಾರ ಇದ್ದಿದ್ರೆ ಆಗ್ತಿರ್ಲಿಲ್ಲ. ಹಿಂದಿನ ಸರ್ಕಾರ ಇದ್ದಾಗ ಪೊಲೀಸ್ ಅಕ್ರಮ ಮುಚ್ಚಿ ಹಾಕಿದ್ರು. ನಾವು ಇದ್ದಿದ್ದಕ್ಕೆ ನಿಷ್ಪಕ್ಷಪಾತ ತನಿಖೆ ಮಾಡಿದ್ದೀವಿ ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ಧಾರೆ.