ಕಲಬುರಗಿ: ಶಾಂತಗೌಡನ ಮನೆ ಜಾಲಾಡಿದ ನಂತರ ಬ್ಯಾಂಕ್ ಮೇಲೆ ಎಸಿಬಿ ಕಣ್ಣು ಬಿದ್ದಿದ್ದು, ಇಂದು ಬ್ಯಾಂಕ್ ಲಾಕರ್ ಮತ್ತು ಬ್ಯಾಂಕ್ ಅಕೌಂಟ್‌ಗಳ ಪರಿಶೀಲನೆ ಮಾಡಲಿದ್ದಾರೆ. ಶಾಂತಗೌಡ ಜೈಲಿಗೆ ಹೋಗಿದ್ದರು ಸಹ ಎಸಿಬಿ ಶೋಧ ಇನ್ನೂ ನಿಂತಿಲ್ಲ.
ಕಲಬುರಗಿ ನಗರದ ಗುಬ್ಬಿ ಕಾಲೋನಿಯಲ್ಲಿರುವ PWD JE ಶಾಂತಗೌಡ ಬಿರಾದರ್ ನಿವಾಸದ ಡ್ರೈನೇಜ್ ಪೈಪಿನೊಳಗೆ 13.5 ಲಕ್ಷ ಸೇರಿದಂತೆ 54 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣ, ಆಸ್ತಿ ಪಾಸ್ತಿಯನ್ನ ಎಸಿಬಿ ವಶಪಡಿಸಿಕೊಂಡಿದ್ದು, 14 ದಿನಗಳ ಕಾಲ ಶಾಂತಗೌಡ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಶಾಂತಗೌಡ ಬಿರಾದಾರ ಹೆಸರಿನ ಹಾಗೂ ಕುಟುಂಬದವರ ಹೆಸರಿನ ಬ್ಯಾಂಕ್ ಅಕೌಂಟ್, ಎಫ್.ಡಿಗಳು, ಲಾಕರಗಳನ್ನ ಇಂದು ಪರಿಶೀಲನೆ ಮಾಡಲಾಗುತ್ತದೆ. ಎಸಿಬಿಗೆ ಸಹಕಾರ ನೀಡದ ಕಾರಣ ಶಾಂತಗೌಡ ಬಿರಾದಾರ ಬಂಧಿಸಿ ನ್ಯಾಯಾದೀಶರ ಮುಂದೆ ಎಸಿಬಿ ಹಾಜರುಪಡಿಸಿದ್ದಾರೆ. 54 ಲಕ್ಷ ರೂ ನಗದು ಸೇರಿ ಅಪಾರ ಅಕ್ರಮ ಆಸ್ತಿ ಪತ್ತೆಯಾಗಿದೆ.
ಇದನ್ನೂ ಓದಿ: ಕಲಬುರಗಿಯ ಶಾಂತಗೌಡ ಮನೆಯ ಮೂಲೆ-ಮೂಲೆಯಲ್ಲೂ ಹಣ… ಬಾತ್ ರೂಂ ಪೈಪ್ನಲ್ಲಿ ಕಂತೆ-ಕಂತೆ ಹಣ ಪತ್ತೆ…