ಬೆಂಗಳೂರು: ಇನ್ನು ಮುಂದೆ ಹಾಫ್ ಹೆಲ್ಮೆಟ್ ಹಾಕಿ ರಸ್ತೆಗಿಳಿದರೆ ನಿಮ್ಮ ಹೆಲ್ಮೆಟ್ ಪೀಸ್ ಪೀಸ್ ಮಾಡಲು ಸಂಚಾರಿ ಪೊಲೀಸರು ಸಜ್ಜಾಗಿದ್ದಾರೆ.
ಐಎಸ್ ಐ ಮಾರ್ಕ್ ಇರುವ ಫುಲ್ ಹೆಲ್ಮೆಟ್ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಸಂಚಾರಿ ಪೊಲೀಸರು ಹಾಫ್ ಹೆಲ್ಮೆಟ್ ಹಾಕಿ ರಸ್ತೆಗಿಳಿಯುತ್ತಿರುವ ವಾಹನ ಸವಾರರಿಗೆ ಶಾಕ್ ನೀಡುತ್ತಿದ್ದಾರೆ. ಇಂದು ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಸುಮಾರು 300 ಹಾಫ್ ಹೆಲ್ಮೆಟ್ ಗಳನ್ನು ಲಾರಿ ಹತ್ತಿಸಿ ಪುಡಿಪುಡಿ ಮಾಡಿದ್ದಾರೆ. ಇದೇ ವೇಳೆ ಗದ್ದಲ ಸೃಷ್ಟಿಸುವ ಸೈಲೆನ್ಸರ್ ಮತ್ತು ಹಾರ್ನ್ ಗಳನ್ನೂ ಧ್ವಂಸ ಮಾಡಿದ್ದಾರೆ.
ಇದನ್ನೂ ಓದಿ: ಪವರ್ ಸ್ಟಾರ್ ಫ್ಯಾನ್ಸ್ಗೆ ಗುಡ್ನ್ಯೂಸ್… ಅಪ್ಪು ನಟನೆಯ ಜೇಮ್ಸ್ ಸಿನಿಮಾದ ಪೋಸ್ಟರ್ ನಾಳೆ ರಿಲೀಸ್…
ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಮನೆಯಿಂದ ಹೊರಡುವ ಮುನ್ನ ಐಎಸ್ ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಿಯೇ ಹೊರಡಬೇಕು. ಅಕಸ್ಮಾತ್ ಹಾಫ್ ಹೆಲ್ಮೆಟ್ ಧರಿಸಿ ಬಂದರೆ ಪೊಲೀಸರು ನಿಮ್ಮ ಹಾಫ್ ಹೆಲ್ಮೆಟ್ ಅನ್ನು ಪುಡಿ ಮಾಡುವುದು ಗ್ಯಾರೆಂಟಿ.