ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಘಟನೆಯಿಂದ ಬೆಂಗಳೂರು ಜನರು ಇನ್ನು ಚೇತರಿಸಿಕೊಂಡಿಲ್ಲ. ಆಗಲೇ ಐಟಿಸಿಟಿಯಲ್ಲಿ ಮತ್ತೊಂದು ಗುಂಡಿನ ಸದ್ದು ಆರ್ಭಟಸಿದೆ. ಕೆ ಆರ್ ಪುರದಲ್ಲಿ ಉದ್ಯಮಿ ಆಟೋ ಬಾಬು ಮೇಲೆ ಶೂಟೌಟ್ ನಡೆದಿದೆ.
ರಿಯಲ್‌ಎಸ್ಟೇಟ್ ವಿಷಯದಲ್ಲಿ ಆಟೋ ಬಾಬು ಮೇಲೆ ಗುಂಡು ಹಾರಾಟ ನಡೆದಿದೆ ಎನ್ನಲಾಗ್ತಿದೆ. ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಆಟೋ ಬಾಬು ಅಂಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸುಹೇಲ್ ಮತ್ತು ಬಾಬು ಮಧ್ಯೆ ಗಲಾಟೆ ಆರಂಭವಾಗಿದೆ.
ನಿನ್ನೆ ಆಟೋ ಬಾಬು ಮೇಲೆ ಸುಹೇಲ್ ಹಾಗು ಹಲವು ಪುಂಡರು ಗುಂಡಿನ ದಾಳಿ ಮಾಡಿದ್ದಾರೆ. ಆಟೋ ಬಾಬು ಕಚೇರಿಯಲ್ಲೇ ಫೈರಿಂಗ್ ಮಾಡಿದ್ದು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಿಯಲ್ ಎಸ್ಟೇಟ್ ದ್ವೇಶದ ಹಿನ್ನೆಲೆ ಬಂದೂಕಿನಿಂದ ದಾಳಿ ಮಾಡಿದ ಸುಹೇಲ್ ತಲೆ ಮರೆಸಿಕೊಂಡಿದ್ದಾನೆ.
ಇದನ್ನೂ ಓದಿ : ಬೆಂಗಳೂರಿನ ಸರ್ಜಾಪುರ ಬಳಿ ಬೆಕ್ಕಿನ ಮೇಲೆ ಫೈರಿಂಗ್!! ಇದೆಂತಾ ವಿಕೃತಿ?
ಸುಹೇಲ್ ಗೆ ಬಂದೂಕು ಹೇಗೆ ಬಂತು, ಯಾವ ಪಿಸ್ತೂಲ್ ಬಳಸಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಗಾಯಾಳು ಆಟೋ ಬಾಬುನನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಬಾಬು, ಸಚಿವ ಬೈರತಿ ಬಸವರಾಜ್ ಆತ್ಮೀಯ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ನಟ ಸುಶಾಂತ್ ಶವವಿದ್ದ “ಆ” ಕೋಣೆಗೆ ಏಕಾಂಗಿಯಾಗಿ ಹೋಗಿದ್ದಳಾ ಪ್ರೇಯಸಿ ? ಆ ಕೋಣೆಯಲ್ಲಿ ನಟಿ ರಿಯಾ ಮಾಡಿದ್ದು ಏನು ?
ಘಟನಾ ಸ್ಥಳಕ್ಕೆ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಗೆ ಸಂಬಂಧ ಪಟ್ಟ ಕೆಲವರನ್ನು ವಶಕ್ಕೆ ಪಡೆದು ಕೆ ಆರ್ ಪುರ ಪೊಲೀಸರು ವಿಚಾರಣೆ ಮಾಡ್ತಿದ್ದಾರೆ. ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.