ಬೆಂಗಳೂರು: ಟಾರೇ ಕಾಣದ ಬೆಂಗಳೂರಿನ (Bengaluru) ರಸ್ತೆಗಳಿಗೆ ದಿಢೀರ್ ಟಾರ್ ಭಾಗ್ಯ ದೊರಕಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಆಗಮನ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ರಸ್ತೆಗಳಿಗೆ ಹೊಸ ಟಾರ್ ಹಾಕಲಾಗಿದೆ.
BBMP ವಾಹನ ಸವಾರರಿಗೆ ಕಿರಿಕಿರಿ ಆಗ್ತಿದ್ರೂ ಗುಂಡಿ ಮುಚ್ಚಿರಲಿಲ್ಲ, ಮೋದಿ ಬರುತ್ತಾರೆ ಎಂದಾಕ್ಷಣ ಎಲ್ಲಾ ಗುಂಡಿಗಳನ್ನ ಮುಚ್ಚಿದ್ದಾರೆ. ಮೋದಿ ಆಗಮಿಸಲಿರುವ ಬೆಂಗಳೂರು ರಸ್ತೆಗಳಿಗೆ ಹೊಸ ಟಾರ್ ಹಾಕಲಾಗಿದೆ. ಏರ್ಪೋರ್ಟ್ನಿಂದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವರೆಗೂ ರಸ್ತೆ ಕ್ಲೀನ್ ಮಾಡಲಾಗಿದೆ. ಸರ್ಕಾರ ಮೋದಿ ಬರಲಿರುವ ರೋಡ್ ಗಳಿಗೆ ಹೊಸ ಟಾರ್ ಹಾಕಿದ್ದಾರೆ. ರಸ್ತೆಗಳು ಗುಂಡಿ ಮುಕ್ತವಾಗಿ ಫ್ರೆಶ್ ಟಾರ್ನಿಂದ ಝಗಮಗಿಸುತ್ತಿದೆ.
ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡ್ತಿದ್ದ ಗುಂಡಿಗೆ ದಿಢೀರ್ ಮುಕ್ತಿ ಸಿಕ್ಕಿದೆ. ಪ್ರಧಾನಿ ಮೋದಿ ಆಗಮನಕ್ಕಾಗಿ ರಸ್ತೆ ಗುಂಡಿಗಳಿಗೆ ರಾತ್ರೋ ರಾತ್ರಿ ಮುಕ್ತಿ ದೊರಕಿದ್ದು, ಜನಸಾಮಾನ್ಯರ ಗೋಳು ಕೇಳದ ಜನ ಪ್ರತಿನಿಧಿಗಳು ಸ್ವಾಮಿ ನಿಷ್ಠೆ ಮೆರೆದಿದ್ದಾರೆ. ಪ್ರಧಾನಿ ಮೋದಿಗೋಸ್ಕರ ಅಧಿಕಾರಿಗಳು ಮೇಖ್ರಿ ರಸ್ತೆಯನ್ನೇ ಲಕ ಲಕ ಮಾಡಿದ್ದಾರೆ.
ಇದನ್ನೂ ಓದಿ : ಉಡುಪಿಯಲ್ಲಿ ಬೈಕ್ ರ್‍ಯಾಲಿ… ಬುಲೆಟ್ ರೈಡ್ ಮಾಡಿದ ಶಾಸಕ ರಘುಪತಿ ಭಟ್, ಮಾಜಿ ಶಾಸಕ ಪ್ರಮೋದ್ ಮಧ್ವರಾಜ್…