ಬೆಂಗಳೂರು: ಬೆಂಗಳೂರಿನಲ್ಲಿ ಆರ್. ವಿ. ಮೆಟ್ರೊಪೊಲಿಸ್ ಲ್ಯಾಬ್ ಮೇಲೆ ಐಟಿ ದಾಳಿ ನಡೆಸಿದೆ.
ಮಲ್ಲೇಶ್ವರಂ 15 ನೇ ಕ್ರಾಸ್ ನಲ್ಲಿರೋ ಲ್ಯಾಬ್ ಮೇಲೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ 7 ತಂಡಗಳಿಂದ ದಾಳಿ ನಡೆಸಲಾಗಿದೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾಗಭೂಷಣ್ ರಾವ್ ಎಂಬುವರ ಮನೆ ಹಾಗೂ ಲ್ಯಾಬ್ ಮೇಲೆ ರೇಡ್ ಮಾಡಲಾಗಿದೆ. ನಾಗಭೂಷಣ್ ಅವರ ಪುತ್ರ ರವಿಕುಮಾರ್ ಮನೆ ಮೇಲೂ ದಾಳಿ ಮಾಡಲಾಗಿದ್ದು, 7 ಇನೋವಾ ವಾಹನಗಳಲ್ಲಿ ಬಂದು ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಸಿಆರ್ ಪಿಎಫ್ ಭದ್ರತೆಯೊಂದಿಗೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇದನ್ನೂ ಓದಿ:ನ.18ರಂದು ಕೋಲಾರದಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಆರಂಭ… ಗ್ರಾಮ ವಾಸ್ತವ್ಯ ಮಾಡಲಿರುವ ಹೆಚ್ಡಿಕೆ…