ವೀಕೆಂಡ್ಗೆ ಚರ್ಚ್ಸ್ಟ್ರೀಟ್ಗೆ ಹೋಗ್ತೀರಾ…? ಹಾಗಿದ್ರೆ ಬೆಂಗಳೂರು ಜನರೇ ಈ ಸುದ್ದಿ ನೋಡಿ.. ಇನ್ಮೇಲೆ ವೀಕೆಂಡ್ನಲ್ಲಿ ಚರ್ಚ್ಸ್ಟ್ರೀಟ್ಗೆ ಹೋಗ್ಬೇಡಿ. ಚರ್ಚ್ಸ್ಟ್ರೀಟ್ಗೆ ಬಂದಿದೆ ಪ್ರತ್ಯೇಕ ರೂಲ್ಸ್ & ರೆಗ್ಯೂಲೇಷನ್ ಬಂದಿದೆ. ಶನಿವಾರ, ಭಾನುವಾರ ಬೆಳ್ಳಗ್ಗೆ 10ರಿಂದ ಮಧ್ಯರಾತ್ರಿ 12ವರೆಗೆ ನಿಷೇಧಿಸಲಾಗಿದೆ. ನವೆಂಬರ್ 7ರಿಂದ 2021ರ ಫೆಬ್ರವರಿ ಅಂತ್ಯದವರೆಗೆ ವೀಕೆಂಡ್ನಲ್ಲಿ ಸಂಚಾರ ನಿಷೇಧಿಸಿ ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್ ಆದೇಶಿಸಿದ್ದಾರೆ. ಚರ್ಚ್ ಸ್ಟ್ರೀಟ್ನಲ್ಲಿ ಈ ಪ್ಲಾನ್ ಯಶಸ್ವಿ ಆದ್ರೆ
ಮುಂದಿನ ದಿನಗಳಲ್ಲಿ ಇತರೆ ಭಾಗದಲ್ಲಿ ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಅಂತಾ ಸಂಚಾರಿ ಜಂಟಿ ಪೊಲೀಸ್ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ.
ಬೆಂಗಳೂರಲ್ಲಿ ವಾಯು ಮಾಲಿನ್ಯ ಕಡಿಮೆಗೆ, ಗಾಳಿ ಗುಣಮಟ್ಟ ಹೆಚ್ಚಿಸಲು ಸಂಚಾರಿ ಪೊಲೀಸರ ನೂತನ ಕ್ರಮ ಕೈಗೊಂಡಿದ್ದಾರೆ. ಭೂ ಸಾರಿಗೆ ನಿರ್ದೆಶನಾಲಯ-ಸಂಚಾರ ಪೊಲೀಸರಿಂದ ಜಂಟಿ ಕಾರ್ಯದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.