ಬೆಂಗಳೂರು: ಕರಗ ಸಂಭ್ರಮ ಇಂದಿನಿಂದ್ಲೇ ಶುರುವಾಗಲಿದ್ದು, ರಾತ್ರಿ 10 ರಿಂದ ರಥೋತ್ಸವದ ಧ್ವಜಾರೋಹಣ ನಡೆಯಲಿದೆ. ಕರಗ ತಯಾರಿ ಬಗ್ಗೆ ಪಾಲಿಕೆ ಕಛೇರಿಯಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ಐತಿಹಾಸಿಕ ಕರಗ ಸಂಭ್ರಮ ಇಂದಿನಿಂದಲೇ ಶುರುವಾಗಲಿದ್ದು, ಏಪ್ರಿಲ್ 16ರ ಮಧ್ಯರಾತ್ರಿ ಕರಗ ಶಕ್ತ್ಯೋತ್ಸವ ನಡೆಯಲಿದೆ.
ತಿಗಳರ ಪೇಟೆಯ ಧರ್ಮರಾಯ ದೇವಸ್ಥಾನದಲ್ಲಿ ಕರಗ ಉತ್ಸವ ನಡೆಯಲಿದ್ದು, ಇಂದಿನಿಂದಲೇ ಕರಗ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ಇಂದು ರಾತ್ರಿ 10 ರಿಂದ ರಥೋತ್ಸವದ ಧ್ವಜಾರೋಹಣ ನಡೆಯಲಿದ್ದು, ನಾಳೆಯಿಂದ ಪ್ರತಿದಿನ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಲಾಗುತ್ತದೆ. ಏಪ್ರಿಲ್ 18ರವರೆಗೂ ವಿವಿಧ ಧಾರ್ಮಿಕ ವಿಧಾನಗಳು ನಡೆಯಲಿದ್ದು,
ಕೋವಿಡ್ನಿಂದಾಗಿ ಕಳೆದೆರಡು ವರ್ಷಗಳಿಂದ ಕರಗ ಕಳೆಗುಂದಿತ್ತು. ಕರಗ ಮಹೋತ್ಸವದ ವ್ಯವಸ್ಥೆಯ ಬಗ್ಗೆ ಇಂದು ಸುದ್ದಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಶಾಸಕರು, ಜಿಲ್ಲಾಧಿಕಾರಿಗಳು, DCP, ವ್ಯವಸ್ಥಾಪಕ ಸಮಿತಿ, ಹಾಗೂ ಅಧಿಕಾರಿಗಳಿಂದ ಬೆಳಗ್ಗೆ 10.30ಕ್ಕೆ ಸುದ್ದಿಗೋಷ್ಠಿ ನಡೆಯಲಿದೆ.
ಇದನ್ನೂ ಓದಿ:ಕೇಂದ್ರ ಸಚಿವ ಅಮಿತ್ ಶಾ ಭೇಟಿಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್..! ಉನ್ನತ ಸ್ಥಾನಕ್ಕಾಗಿ ಬೇಡಿಕೆ ಇಟ್ಟರೆ ಶೆಟ್ಟರ್..?