ಬೆಂಗಳೂರು: ಬಾಡಿಗೆ ಹಣ ಖರ್ಚು ಮಾಡಿದ್ದಕ್ಕೆ ಹೆಂಡತಿಯನ್ನೆ ಕೊಲೆ ಮಾಡಿರುವ ಘಟನೆ ನಡೆದಿದ್ದು, ಅಷ್ಟಕ್ಕೂ ಮಡದಿ ಆ ಹಣವನ್ನ ಯಾವ ಕಾರಣಕ್ಕೆ ಖರ್ಚು ಮಾಡಿದ್ದಳು ಅಂತೀರಾ ಈ ಸ್ಟೋರಿ ಓದಿ…
ಬೆಂಗಳೂರಿನ ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ,ಬಾಡಿಗೆ ಕಟ್ಟಲು 6500 ರೂ. ಹಣವನ್ನ ಪತಿ ಫಾರೂಕ್ ಇಟ್ಟಿದ್ದನಂತೆ ಈ ಹಣದಲ್ಲಿ ಪತ್ನಿ ನಾಜಿಯಾ ಫ್ಯಾನ್ಸಿ ಒಡವೆ ಖರೀದಿ ಮಾಡಿದ್ದಾಳೆ. ಹಣ ಬಳಸಿಕೊಂಡಿದ್ದಕ್ಕೆ ಗಂಡ-ಹೆಂಡತಿ ನಡುವೆ ಜಗಳವಾಗಿದ್ದು, ನಾಜಿಯಾ ಮೇಲೆ ಪತಿ ಫಾರೂಕ್ ಕೈ ಮಾಡಿದ್ದಾನೆ. ಈ ಹಿನ್ನೆಲೆ ನಾಜಿಯಾ ಪ್ರಜ್ಞಾಹೀನಳಾಗಿದ್ದಾಳೆ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲೇ ನಾಜಿಯಾ ಜೀವ ಬಿಟ್ಟಿದ್ದಾಳೆ. ನಾಜಿಯಾ ಪತಿ ಫಾರೂಕ್ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಪುನೀತ್ ರಾಜ್ ಕುಮಾರ್ ಗೆ ಬೃಹತ್ ಶ್ರದ್ಧಾಂಜಲಿ ಕಾರ್ಯಕ್ರಮ… ಥಿಯೇಟರ್ ಗಳ ಅಂಗಳದಲ್ಲಿ ಅಪ್ಪುಗೆ ನಮನ…