ಬೆಂಗಳೂರು: ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಕಾರು ಬ್ಲಾಸ್ಟ್ ಆಗಿದ್ದು, ತಡರಾತ್ರಿ ಕಾರಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನ ನಂದಿಸಲು ಹೋಗಿದ್ದ ಜನ ಏಕಾ ಏಕಿ ಕಾರ್ ಬ್ಲಾಸ್ಟ್ ಆಗಿದ್ದಕ್ಕೆ ಎದ್ನೋ ಬಿದ್ನೋ ಅಂತಾ ಓಡಿದ್ದಾರೆ.
ಬೆಂಗಳೂರಿನ ಇಟ್ಟಮಡು ಬಳಿಯ ಮಂಜುನಾಥ ನಗರದಲ್ಲಿ ಈ ಘಟನೆ ನಡೆದಿದ್ದು, ತಡರಾತ್ರಿ 2.19ರ ಸುಮಾರಿಗೆ ಕಾರಿಗೆ ಬೆಂಕಿ ಹತ್ತಿತ್ತು, ಕೂಡ್ಲೇ ಅಕ್ಕಪಕ್ಕದವರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಹೊತ್ತಿ ಉರಿಯುತ್ತಿದ್ದ ಕಾರ್ ದಿಢೀರ್ ಬ್ಲಾಸ್ಟ್ ಆಗಿದೆ. ಈ ಹಿನ್ನೆಲೆ ಎದ್ನೋ ಬಿದ್ನೋ ಅಂತಾ ಜನರು, ಅಗ್ನಿಶಾಮಕ ಸಿಬ್ಬಂದಿ ಓಡಿದ್ದಾರೆ. ತಡರಾತ್ರಿ ಯಾಗಿದ್ದ ಹಿನ್ನೆಲೆ ಕಾರ್ನಲ್ಲಿ ಯಾರೂ ಇರಲಿಲ್ಲ. ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಕಾರು ಸಂಪೂರ್ಣ ಭಸ್ಮವಾಗಿದ್ದು, ಬೆಂಕಿಯಿಂದ ಮನೆಯ ಕೆಳ ಮಹಡಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇದನ್ನೂ ಓದಿ:ದೈನಂದಿನ ರಾಶಿ ಭವಿಷ್ಯ..! 18/11/21