ಬೆಂಗಳೂರು: ಇಂದಿನಿಂದ ಬೆಂಗಳೂರಲ್ಲಿ ಅವರೆ ಮೇಳ ಶುರುವಾಗಲಿದ್ದು, ಕೊರೋನಾ ಎಫೆಕ್ಟ್ನಿಂದ ಈ ಬಾರಿ ಸರಳವಾಗಿ ಮೇಳ ನಡೆಯಲಿದೆ.
ಅವರೇ ಕಾಳಿನ ಸೀಸನ್ ಶುರುವಾಗ್ತಿದಂಗೆ ತಟ್ಟನೆ ನೆನಪಿಗೆ ಬರೋದು ಅವರೇ ಮೇಳ ರಸ್ತೆಯ ಉದ್ದಕ್ಕೆಲ್ಲ ಅವರೆಕಾಳು ಘಮ ಜನರನ್ನು ಸೆಳೆಯುತ್ತೆ. ತರಹೇವಾರಿ ಅವರೇ ಕಾಳಿನ ತಿಂಡಿಗಳನ್ನು ಸವಿಯಲು ಅವರೆ ಪ್ರಿಯರು ತುದಿಗಾಲಿನಲ್ಲಿ ನಿಲ್ಲುತ್ತಾರೆ.
21 ವರ್ಷಗಳಿಂದ ವಿವಿ ಪುರಂನ ಫುಡ್ ಸ್ಟ್ರೀಟ್ನಲ್ಲಿ ನಡೆಯುತ್ತಿದ್ದ ಅವರೆ ಮೇಳಕ್ಕೆ ಕೊರೋನಾ ಮಹಾಮಾರಿ ತಡೆದಿದೆ. ಹೀಗಾಗಿ ಇಂದಿನಿಂದ ನಡೆಯಲಿರುವ ಅವರೆ ಮೇಳ ಸಿಂಪಲ್ ಆಗಿ ಮಾಡಲು ಮುಂದಾಗಿದ್ದು, ವಿವಿ ಪುರಂನ ವಾಸವಿ ಕಾಂಡಿಮೆಂಟ್ಸ್ ಕಳೆದ 21 ವರ್ಷಗಳಿಂದ ಅವರೆ ಮೇಳ ಆಯೋಜಿಸಿಕೊಂಡು ಬರುತ್ತಿತ್ತು. ರೈತರಿಂದ ನೇರವಾಗಿ ಗ್ರಾಹಕರಿಗೆ ಎಂಬ ವಾಕ್ಯದಡಿ ಈ ಮೇಳ ಆಯೋಜನೆಗೊಳ್ತಿತ್ತು. ಕೊರೋನಾ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಈ ವರ್ಷ ಮೇಳದ ಕಳೆ ಕಾಣೆಯಾಗಿದೆ.
ಈ ವರ್ಷ ವಿಶೇಷವಾಗಿ ಪ್ರತಿಯೋಬ್ಬರಿಗೂ ಅವರೆ ಸೊಪ್ಪಿನ ಕಷಾಯಾ ಕೊಡುವ ವ್ಯವಸ್ಥೆ ಮಾಡಲು ಮಂದಾಗಿದ್ದಾರೆ . ಕೋವಿಡ್ ಪ್ರಿಕಾಷನ್ ಗಳನು ಗಮನದಲ್ಲಿಟ್ಟುಕೊಂಡು ಮೇಳವನ್ನು ಆಯೋಜನೆ ಮಾಡಿದ್ದಾರೆ. ಇನ್ನು ಅವರೆಕಾಯಿ ಒಂದನ್ನೇ ಉಪಯೋಗಿಸಿ ಸುಮಾರು 70 ರಿಂದ 80 ತಿಂಡಿಗಳನ್ನು ತಯಾರಿಸಿ ಗ್ರಾಹಕರಿಗೆ ನೀಡುತ್ತಾರೆ .