ಬಾಗಲಕೋಟೆ : ಕಾಂಗ್ರೆಸ್ನವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಪೇ ಸಿಎಂ ಅಭಿಯಾನ ಅವರಿಗೇ ಮುಳುವಾಗಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.
ಈ ಪೇ ಸಿಎಂ ಅಭಿಯಾನ ವಿಚಾರದ ಬಗ್ಗೆ ಬಾಗಲಕೋಟೆಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜ್ಯದ ಸಿಎಂ ಮೇಲೆ ಸುಳ್ಳು ಆರೋಪ ಮಾಡಿದರೆ. ಇಡೀ ರಾಜ್ಯಕ್ಕೆ ಕೆಟ್ಟ ಹೆಸರು ತಂದಂತೆ. ಕಾಂಗ್ರೆಸ್ನವರಿಗೆ ಇದು ಶೋಭೆ ತರುವ ವಿಚಾರವಲ್ಲ ಎಂದು ಕಾರಜೋಳ ಕಿಡಿಕಾರಿದ್ರು. ಈಗಾಗಲೇ ಕಾಂಟ್ರಾಕ್ಟರ್ ಸಂಘದ ಕೆಂಪಣ್ಣ ವಿರುದ್ಧ ಸಚಿವ ಮುನಿರತ್ನ ಮಾನನಷ್ಟ ಕೇಸ್ ಹಾಕಿದ್ದಾರೆ. ಸುಳ್ಳು ಆರೋಪ ಮಾಡಿದವರು ತಕ್ಕ ಪ್ರತಿಫಲ ಅನುಭವಿಸುತ್ತಾರೆ ಎಂದು ಹೇಳಿದರು.
ಇದುನ್ನೂ ಓದಿ :ಮಾಜಿ ಸಿಎಂ ಸಿದ್ದರಾಮಯ್ಯ ಭ್ರಷ್ಟಾಚಾರದ ಪಿತಾಮಹ : ಸಚಿವ ಸುನಿಲ್ಕುಮಾರ್