ಬೆಂಗಳೂರು : ಹಾಲು ಪೂರೈಕೆದಾರರ ಮುಷ್ಕರ ಹಿನ್ನೆಲೆ ಇಂದು ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಬಮುಲ್ ಹಾಗೂ ಹಾಲು ಪೂರೈಕೆದಾರರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿಇಂದು ಸಭೆ ನಡೆದಿದೆ.
ಕೊನೆಗೂ ಸಭೆ ಸಂಧಾನವಾಗಿದ್ದು, ನಾಳೆಯಿಂದ ಯಥಾಸ್ಥಿತಿಯಲ್ಲಿ ಹಾಲಿನ ಸಪ್ಲೈ ಇರುತ್ತದೆ. ಪೂರೈಕೆದಾರರ ಬೇಡಿಕೆ ಈಡೇರಿಸಲು ಬಮುಲ್ ಮುಂದಾಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಮುಷ್ಕರ ನಡೆಯಿತ್ತಿತ್ತು. ಇಂದು ನಡೆದ ಸಭೆ ಬಳಿಕ ಪೂರೈಕೆದಾರರು ಮುಷ್ಕರ ಹಿಂಪಡೆದಿದ್ದಾರೆ. ಬಮುಲ್ ಹೆಚ್ಚಿಗೆ ಓಡಿದ ವಾಹನಗಳ ಕಿಮೀ ದುಡ್ಡು ಕೊಡಲು ಒಪ್ಪಿದ್ದಾರೆ. ನಿಗದಿತ ಕಿಮೀ ಗಿಂತ ಹೆಚ್ಚಿಗೆ ಓಡಿದರು ಅದಕ್ಕೆ ದುಡ್ಡು ಸಂದಾಯ ಮಾಡಲು ರೆಡಿಯಾಗಿದ್ದಾರೆ. ಇಂದಿನಿಂದ ಹಾಲಿನ ವಹಿವಾಟು ಸರಾಗವಾಗಿ ಇರಲಿದೆ. ಕೊನೆಯಲ್ಲಿ ಪೂರೈಕೆದಾರರ ಸಂಘ ಒಪ್ಪಿದ್ದು, ಕಳೆದ ಮೂರು ದಿನಗಳಿಂದ ಸಭೆ ನಡೆಯುತ್ತಿತ್ತು. ಆದ್ರೆ ಇವತ್ತು ಸಂಧಾನ ಯಶಸ್ವಿಯಾಗಿದ್ದು, ನಾಳೆಯಿಂದ ಮಾಮುಲಿ ಹಾಗೇ ಹಾಲು ಸಿಗಲಿದೆ.
ಇದನ್ನೂ ಓದಿ : ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕೆ ಎಲ್ ರಾಹುಲ್ ಅಥಿಯಾ… ಇಲ್ಲಿದೆ ಫೋಟೋಸ್….