ಬೆಂಗಳೂರು: ಆಟೋ ಡ್ರೈವರ್ ನನ್ನು ವಿವಸ್ತ್ರಗೊಳಿಸಿ ಡಾಕ್ಟರ್ ರೌಡಿಸಂ ಮಾಡಿದ್ದು ಕುಡಿದ ಮತ್ತಿನಲ್ಲಿ ಆಟೊ ಚಾಲಕನ ಮೇಲೆ ಹಲ್ಲೆ ಮಾಡಿದ್ದಾನೆ.
ಆಟೋ ಡ್ರೈವರ್ ಮೇಲೆ ಡಾಕ್ಟರ್ ಕುಡಿದ ಮತ್ತಿನಲ್ಲಿ ಮೂತ್ರ ವಿಸರ್ಜನೆ ಮಾಡಿ ಹಲ್ಲೆ ಮಾಡಿರುವ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರೌಡಿಗಳ ಮುಂದೆ ಕೂಗಾಡಿದ ಅಂತಾ ಯಲಹಂಕ ನಿವಾಸಿ 26 ವರ್ಷದ ಮುರಳಿ ಎಂಬ ಆಟೋ ಚಾಲಕನ ಮೇಲೆ ಡಾಕ್ಟರ್ ಹಲ್ಲೆ ಮಾಡಿದ್ದಾನೆ. ಮುರಳಿ ದೂರಿನ ಮೇಲೆ ಖಾಸಗಿ ಆಸ್ಪತ್ರೆ ಡಾಕ್ಟರ್ ರಾಕೇಶ್ ಶೆಟ್ಟಿಯನ್ನ ಅರೆಸ್ಟ್ ಮಾಡಲಾಗಿದೆ.
ರಾಕೇಶ್ ಜೊತೆ ಆರೇಳು ಮಂದಿ ಆಟೋ ಚಾಲಕ ಮುರಳಿ ಮೇಲೆ ಹಲ್ಲೆ ಮಾಡಿದ್ದು ಅವರೆಲ್ಲಾ ಇದೀಗ ಎಸ್ಕೇಪ್ ಆಗಿದ್ದಾರೆ. ನವೆಂಬರ್ 4ರಂದು ಈ ಘಟನೆ ನಡೆದಿದ್ದು, ಡಾಕ್ಟರ್ಗೆ ಪರಿಚಯವಿದ್ದ ಕಾರಣ ಆಟೋ ಚಾಲಕ ಮುರುಳಿ ಬಾಡಿಗೆಗೆ ತನ್ನ ಆಟೋದಲ್ಲಿ ಅಡುಗೆ ಸಾಗಿಸಲು ಒಪ್ಪಿಕೊಂಡಿದ್ದಾರೆ. ಈ ವೇಳೆ ರೋಗಿಗಳ ಮುಂದೆ ರೌಡಿಯಂತೆ ಆಟೋ ಚಾಲಕ ವರ್ತಿಸ್ತಾನೆ ಅಂತಾ ಸಿಬ್ಬಂದಿ ಹೇಳಿದ್ದಾರೆ. ಇದಕ್ಕೆ ಕೋಪಗೊಂಡು ಕುಡಿದ ಅಮಲಿನಲ್ಲಿ ಮುರಳಿ ಮೇಲೆ ಡಾಕ್ಟರ್ ಹಲ್ಲೆ ಮಾಡಿದ್ದಾನೆ. ಬಾಗಲೂರು ಠಾಣೆ ಪೊಲೀಸರಿಂದ ಖಾಸಗಿ ಆಸ್ಪತ್ರೆ ಡಾಕ್ಟರ್ ಅರೆಸ್ಟ್ ಆಗಿದ್ದಾನೆ.
ಇದನ್ನೂ ಓದಿ:ಕೊರೊನಾ ಬಳಿಕ ಚೇತರಿಸಿಕೊಂಡ ಬೆಟ್ಟದ ತಾಯಿಯ ಆದಾಯ…! ಹುಂಡಿಯಲ್ಲಿ 1.77 ಕೋಟಿ ರೂ. ಸಂಗ್ರಹ…!