ಪರೀಕ್ಷೆಯಲ್ಲಿ ಬ್ಲೂಟೂತ್ ಡಿವೈಸ್ ಬಳಿಸಿ ಅಕ್ರಮ…! KPSC ಪರೀಕ್ಷೆ ಮುಂದೂಡುವಂತೆ KPSC ಕಾರ್ಯದರ್ಶಿಗೆ ಪತ್ರ ಬರೆದ ಅಭ್ಯರ್ಥಿಗಳು…!.

ಬೆಂಗಳೂರು: ಕೆಪಿಎಸ್ ಸಿ ಪರೀಕ್ಷೆ ಮುಂದೂಡುವಂತೆ ಕೆಪಿಎಸ್ ಸಿ ಕಾರ್ಯದರ್ಶಿಗೆ  ಪರೀಕ್ಷಾ ಅಭ್ಯರ್ಥಿಗಳು ದೂರು ನೀಡಿದ್ದಾರೆ. ‘ಬ್ಲೂಟೂತ್ ಡಿವೈಸ್ ಬಳಿಸಿ ಅಕ್ರಮ ನಡೆಯುವ ಸಂಬಂಧ ಮಾಹಿತಿ ಲಭ್ಯವಾಗಿದ್ದು, ಈ ಹಿನ್ನೆಲೆ ಈ ಆಕ್ರಮ ತಡೆಗಟ್ಟಲು ದೂರು ಸಲ್ಲಿಕೆ ಮಾಡಲಾಗಿದೆ. ಕೆಪಿಎಸ್ ಸಿ ಕಾರ್ಯದರ್ಶಿ...

Read more

ಸೀಲ್​ ಸಂಕಷ್ಟ ತಂದ ಬರ್ತ್ ಡೇ ಪಾರ್ಟಿ…! ಬೆಂಗಳೂರಿನಲ್ಲಿ ಅಪಾರ್ಟ್​ಮೆಂಟ್ ಸೀಲ್​ಡೌನ್​​​…!

ಬೆಂಗಳೂರು:  ಬೆಂಗಳೂರಿನಲ್ಲಿ  ಮಾಡಿದ್ದ ಬರ್ತ್ ಡೇ ಪಾರ್ಟಿಯಿಂದ ಎಡವಟ್ಟಾಗಿದ್ದು, ಅಪಾರ್ಟ್ಮೆಂಟ್ ನ ಫ್ಲಾಟ್ ನಲ್ಲಿ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ. ಬೆಂಗಳೂರಿನ ಕೋರಮಂಗಲದ ರಹೇಜ ರೆಸಿಡೆನ್ಸಿ ಅಪಾರ್ಟ್ಮೆಂಟ್ ನ ಫ್ಲಾಟ್ ನಲ್ಲಿ ಕೊರೋನಾ ಕೇಸ್​​ ದಾಖಲಾಗಿದ್ದು,  ಅಪಾರ್ಟ್‌ಮೆಂಟ್ ಗೆ ಆರೋಗ್ಯ ಸಿಬ್ಬಂದಿ ಭೇಟಿ ಪರಿಶೀಲನೆ...

Read more

ಕಿಚ್ಚನಿಗಾಗಿ ಗುಡಿ ಕಟ್ಟಿದ ಅಭಿಮಾನಿಗಳು… ಕೆಲವೇ ದಿನಗಳಲ್ಲಿ ದೇವಸ್ಥಾನ ಉದ್ಘಾಟನೆ..!

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಅಭಿಮಾನಿಗಳು ಸುದೀಪ್ ದೇವಸ್ಥಾನ ಕಟ್ಟಿದ್ದಾರೆ. ಶಿರವಾರ ತಾಲೂಕಿನ ಕುರುಕುಂದ ಗ್ರಾಮದಲ್ಲಿ ಕಿಚ್ಚನಿಗಾಗಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಸುಮಾರು 12ಲಕ್ಷ ವೆಚ್ಚದಲ್ಲಿ 3 ತಿಂಗಳಿನಿಂದ ದೇವಸ್ಥಾನ ನಿರ್ಮಾಣ ಕೆಲಸ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ದೇವಸ್ಥಾನ ಉದ್ಘಾಟನೆ ಮಾಡಲಾಗುತ್ತದೆ. ದೇವದುರ್ಗ...

Read more

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲಾಕ್​​​ಡೌನ್ ಮಾಡಲ್ಲ: ಸಿಎಂ ಬಸವರಾಜ ಬೊಮ್ಮಾಯಿ…!

ಬೆಂಗಳೂರು: ಓಮಿಕ್ರಾನ್​​​ ಬಗ್ಗೆ ನಾವು ಗಮನ ಹರಿಸುತ್ತಿದ್ದೇವೆ, ಡೆಲ್ಟಾ ಕೂಡಾ ಕೆಲವು ಕಡೆ ಕಂಡು ಬರ್ತಾ ಇದೆ. ಎರಡೂ ರೂಪಾಂತರಿಗಳ ಮೇಲೆ ನಿಗಾ ಇಟ್ಟಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಈ ಬಗ್ಗೆ  ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜಬೊಮ್ಮಾಯಿ, ನಮ್ಮಲ್ಲಿ ಪತ್ತೆಯಾದ...

Read more

ಓಮಿಕ್ರಾನ್​​​ ರಿಸ್ಕ್​​ ಹೆಚ್ಚಾಗ್ತಾ ಇದೆ…! ಸಾಂಕ್ರಾಮಿಕ ಸ್ವರೂಪಕ್ಕೆ ಓಮಿಕ್ರಾನ್​ ತಿರುಗಬಹುದು…! WHO ಅಲರ್ಟ್…!

ಬೆಂಗಳೂರು: ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್​ ದೇಶದಾದ್ಯಂತ ತನ್ನ ಆರ್ಭಟವನ್ನ ಶುರುಮಾಡಿದ್ದು, ಓಮಿಕ್ರಾನ್​ನ  ​​ ರಿಸ್ಕ್​​ ಹೆಚ್ಚಾಗ್ತಾ ಇದೆ, ಸಾಂಕ್ರಾಮಿಕದ ಸ್ವರೂಪಕ್ಕೆ ತಿರುಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ WHO ಎಚ್ಚರಿಕೆ ನೀಡಿದೆ. ಆಫ್ರಿಕನ್​​ ರೂಪಾಂತರಿ ಅಂತರಾಷ್ಟ್ರೀಯವಾಗಿ ಹರಡುತ್ತಿದ್ದು,  ಇಡೀ ಜಗತ್ತಿಗೆ...

Read more

ಈ ವರ್ಷಾನೂ ನ್ಯೂ ಇಯರ್ ಢಮಾರ್ ಗುರು…! ಓಮಿಕ್ರಾನ್ ಭೀತಿಯಲ್ಲಿ ಸೆಲೆಬ್ರೇಷನ್​ಗೆ ಬ್ರೇಕ್..?

ಬೆಂಗಳೂರು: ಕಳೆದೆರಡು ವರ್ಷಗಳಿಂದ ಹೊಸ ವರ್ಷದಾಚರಣೆಗೆ ಕೊರೋನಾ ಕಾರಣಕ್ಕೆ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಈ ವರ್ಷವಾದರೂ ಅದ್ದೂರಿಯಾಗಿ ಹೊಸ ವರ್ಷ ಬರಮಾಡಿಕೊಳ್ಳೋಣ ಎಂದು ಕಾಯುತ್ತಿದ್ದವರಿಗೆ ನಿರಾಸೆ ಎದುರಾಗಿದೆ. ಈ ವರ್ಷ ಹೊಸ ರೂಪಾಂತರಿ ಓಮಿಕ್ರಾನ್​ನಿಂದಾಗಿ, ಎಲ್ಲಾ ಸೆಲೆಬ್ರೇಷನ್​ಗಳಿಗೆ ಬ್ರೇಕ್​ ಬೀಳುವ ಸಾಧ್ಯತೆಗಳಿದೆ....

Read more

ವಿಶ್ವದ 18 ರಾಷ್ಟ್ರಗಳಲ್ಲಿ ಓಮಿಕ್ರಾನ್​​​ ಪತ್ತೆಯಾಗಿದೆ… 3ನೇ ಅಲೆ ಬಂದರೆ ತುಂಬಾ ಕಷ್ಟ : ಡಾ.ಕೆ.ಸುಧಾಕರ್​…!

ಬೆಂಗಳೂರು: ವಿಶ್ವದ 18 ರಾಷ್ಟ್ರಗಳಲ್ಲಿ ಓಮಿಕ್ರಾನ್​​​ ಪತ್ತೆಯಾಗಿದ್ದು, ಹೊಸ ವೈರಸ್​ ಬಗ್ಗೆ ಈಗಾಗಲೇ ಅಲರ್ಟ್ ಆಗಿದ್ದೇವೆ. ಕೊರೋನಾ 3ನೇ ಅಲೆ ಬಂದರೆ ತುಂಬಾ ಕಷ್ಟ ಆಗಲಿದೆ ಎಂದು ಆರೋಗ್ಯ ಸಚಿವ ಸುಧಾಕರ್​ ಆತಂಕ ವ್ಯಕ್ತ ಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ...

Read more

ಪ್ರವಾಸಿಗರಿಗೆ ಗುಡ್​​ನ್ಯೂಸ್​​… ನಾಳೆಯಿಂದ ಮತ್ತೆ ನಂದಿಬೆಟ್ಟಕ್ಕೆ ಪ್ರವೇಶ ಆರಂಭ….!

ಚಿಕ್ಕಬಳ್ಳಾಪುರ:  ನಾಳೆಯಿಂದ ಮತ್ತೆ ನಂದಿಬೆಟ್ಟಕ್ಕೆ ಪ್ರವೇಶ ಆರಂಭವಾಗಲಿದೆ.  ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವಪ್ರಸಿದ್ಧ ನಂದಿಬೆಟ್ಟ ಗಿರಿಧಾಮ, ಮಣ್ಣು ಕುಸಿತದಿಂದ ನಂದಿಬೆಟ್ಟದ ರಸ್ತೆ ನಾಶವಾಗಿತ್ತು. ಈ ಹಿನ್ನೆಲೆ ಆಗಸ್ಟ್ ತಿಂಗಳಿನಲ್ಲಿ ಸಂಪರ್ಕ ಕಡಿತವಾಗಿತ್ತು.ಮೂರು ತಿಂಗಳಲ್ಲಿ ರಸ್ತೆ ಮರು ನಿರ್ಮಾಣ ಮಾಡಲಾಗಿದ್ದು, ನಾಳೆಯಿಂದ ಮತ್ತೆ ನಂದಿಬೆಟ್ಟಕ್ಕೆ ಪ್ರವಾಸಿಗರು ಹೋಗಬಹುದಾಗಿದೆ. ...

Read more

ಉಪ್ಪಾರಪೇಟೆ ಪೊಲೀಸ್ ಸ್ಟೇಷನ್ ಮುಂದೆಯೇ ಡೀಲ್…. ಪೊಲೀಸ್ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ಆರೋಪಿ​ ಅರೆಸ್ಟ್​​…!

ಬೆಂಗಳೂರು: ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ವಂಚಿಸುತ್ತಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ. ತಾನು ಪೊಲೀಸ್​​ ಸಬ್​ ಇನ್ಸ್​ಪೆಕ್ಟರ್​ ಆಗಿ ಕೆಲಸ ಮಾಡೋದಾಗಿ ಜನರಿಗೆ ವಂಚನೆ ಮಾಡುತ್ತಿದ್ದ ಖದೀಮ ಪೊಲೀಸರ ಬಲೆಗೆ ಬಿದ್ದಿದ್ದಾನೆ. 57 ವರ್ಷದ  ಅನಿಲ್​ ಕುಲಕರ್ಣಿ ಎಂಬಾತ, ಪೊಲೀಸ್ ಸಬ್...

Read more

WHO ವಾರ್ನಿಂಗ್​​​​… ರಾಜ್ಯಕ್ಕೂ ಶುರುವಾಯ್ತು ಓಮಿಕ್ರಾನ್​ ​​​ಆತಂಕ… ತಜ್ಞರ ಜೊತೆ ಆರೋಗ್ಯ ಸಚಿವರಿಂದ ಇಂದು 7 ಗಂಟೆಗಳ ಮಹಾಸಭೆ…!

ಬೆಂಗಳೂರು: ರಾಜ್ಯಕ್ಕೂ ಶುರುವಾಯ್ತು ಓಮಿಕ್ರಾನ್​​ ಆತಂಕ ಶುರುವಾಗಿದ್ದು,  ತಜ್ಞರ ಜೊತೆ ಆರೋಗ್ಯ ಸಚಿವರಿಂದ 7 ಗಂಟೆಗಳ ಮಹಾಸಭೆ ನಡೆಯಲಿದೆ. ಪ್ರಪಂಚದಾದ್ಯಂತ ಓಮಿಕ್ರಾನ್​ ​​​ವೈರಸ್​ ಬಗ್ಗೆ ಆತಂಕ ಶುರುವಾಗಿದ್ದು, ಈ ಹೊಸ ರೂಪಾಂತರಿ ತಳಿಯ ಆರ್ಭಟದ ಬಗ್ಗೆ WHO ಈಗಾಗಲೇ ವಾರ್ನಿಂಗ್ ನೀಡಿದ್ದು,...

Read more

ಬೆಂಗಳೂರು ಜನರೇ ಹುಷಾರ್​​…! ಮನೆ ಬಾಗಿಲು ತೆಗೆಯೋ ಮುನ್ನ ಎಚ್ಚರ..! ವ್ಯಾಕ್ಸಿನ್​ ಹಾಕುವ ನೆಪದಲ್ಲಿ ಬೆಂಗಳೂರಲ್ಲಿ ದರೋಡೆ…! 

ಬೆಂಗಳೂರು: ಬೆಂಗಳೂರು ಮಹಾ ಜನರೇ ಎಚ್ಚರ,  ಮನೆ ಬಾಗಿಲು ತೆಗೆಯೋ ಮುನ್ನ ಸ್ವಲ್ಪ ಹುಷಾರಾಗಿರಿ,  ವ್ಯಾಕ್ಸಿನ್​ ಹಾಕುವ ನೆಪದಲ್ಲಿ ದರೋಡೆ ಮಾಡಿದ್ದಾರೆ. ಮನೆಗೆ ನುಗ್ಗಿ ಸಿನಿಮಾ ಸ್ಟೈಲ್​​ನಲ್ಲಿ ದರೋಡೆ ಮಾಡಿರುವ ಘಟನೆ ನಡೆದಿದೆ. ಕೊರೋನಾ ವ್ಯಾಕ್ಸಿನೇಷನ್‌ ಹೆಸರಲ್ಲಿ  ಕಳ್ಳರು ಮನೆಗೆ ನುಗ್ಗಿದ್ದು, ...

Read more

ಹೆಚ್ಚಾಯ್ತು ಓಮಿಕ್ರಾನ್​ ಆತಂಕ… ಬೂಸ್ಟರ್ ಡೋಸ್​ ನೀಡಲು ಕೇಂದ್ರ ಸರ್ಕಾರ ಚಿಂತನೆ…!

ಬೆಂಗಳೂರು: ದೇಶದಲ್ಲಿ ಓಮಿಕ್ರಾನ್ ಆತಂಕ ಹೆಚ್ಚಾಗುತ್ತಿದ್ದಂತೆ,  ಜನರಿಗೆ ಬೂಸ್ಟರ್ ಡೋಸ್​ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈಗಾಗಲೇ ಕೊರೋನಾ ಹೊಸ ರೂಪಾಂತರಿ ತಳಿ ಪ್ರಪಂಚದಾದ್ಯಂತ ತಲ್ಲಣವನ್ನುಂಟು ಮಾಡಿದ್ದು, ದೇಶದಲ್ಲೂ ದಿನದಿಂದ ದಿನಕ್ಕೆ ಕ್ರಮೇಣ ಕೊರೋನಾ ಪಾಸಿಟಿವ್​ ರೇಟ್​ ಹೆಚ್ಚಾಗುತ್ತಿದೆ. ಈ...

Read more

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ…! ಮೊಬೈಲ್, ಸಿಮ್ ಕಾರ್ಡ್ ಹಾಗೂ ಗಾಂಜಾ ಸೇದುವ ಪೈಪ್ ಗಳು , ಪೆನ್ ಡ್ರೈವ್ ಪತ್ತೆ…?

ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ಮಾಡಿದ್ದಾರೆ. ಇಪ್ಪತ್ತಕ್ಕೂ ಹೆಚ್ಚು ಜೀಪ್ ಗಳಲ್ಲಿ  ಸಿಸಿಬಿ ಪೊಲೀಸರು ಬಂಧಿದ್ದು,  ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಈ  ದಾಳಿ ನಡೆದಿದೆ. ಬೆಳಗ್ಗೆ 5.30ಕ್ಕೆ ಜೈಲಿನಲ್ಲಿ  ಅಧಿಕಾರಿಗಳು ದಾಳಿ ಮಾಡಿದ್ದು, ಮೊಬೈಲ್ ಗಳು, ಸಿಮ್...

Read more

ಭಾರತೀಯರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​…! ಟ್ವಿಟ್ಟರ್​ CEO ಆಗಿ ಪರಾಗ್ ಅಗರ್​ವಾಲ್ ಅಧಿಕಾರ ಸ್ವೀಕಾರ…!

ಬೆಂಗಳೂರು:  ವಿಶ್ವದ ಟಾಪ್​ ಕಂಪನಿಗಳಲ್ಲಿ ಭಾರತೀಯರದ್ದೇ ಪಾರುಪತ್ಯವಾಗಿದ್ದು, ಮತ್ತೊಂದು ದೊಡ್ಡ ಕಂಪನಿ ಮುಖ್ಯಸ್ಥರಾಗಿ ಭಾರತೀಯ ಆಯ್ಕೆಯಾಗಿದ್ದಾರೆ. ಟ್ವಿಟ್ಟರ್​ CEO ಆಗಿ ಪರಾಗ್ ಅಗರ್​ವಾಲ್ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಟ್ವಿಟ್ಟರ್​ CEO ಆಗಿ ಪರಾಗ್ ಅಗರ್​ವಾಲ್ ಅಧಿಕಾರ ಸ್ವೀಕಾರ ಮಾಡಿದ್ದು,ಪರಾಗ್‌ ಅಗರ್ವಾಲ್‌  ಟ್ವಿಟರ್​...

Read more

ದೈನಂದಿನ ರಾಶಿ ಭವಿಷ್ಯ..! 30/11/21

ದಕ್ಷಿಣಾಯನ ಶರದ್  ಋತು ಆಶ್ವೀಜ ಮಾಸ ಕೃಷ್ಣ ಪಕ್ಷ ಏಕಾದಶಿ ಮಂಗಳವಾರ ಸೂರ್ಯೋದಯ ಬೆಳಗ್ಗೆ : 06:56 AM ಸೂರ್ಯಾಸ್ತ ಸಂಜೆ :05:24 PM ಚಂದ್ರೋದಯ : 03:17 AM, Dec 01 ಚಂದ್ರಾಸ್ತ : 02:37 PM ರಾಹುಕಾಲ : 02:47 PM to 04:05 PM ಗುಳಿಕಕಾಲ: 12:10 PM to 01:28 PM ಯಮಗಂಡಕಾಲ :09:33 AM to 10:51 AM...

Read more

ವಿಧಾನ ಪರಿಷತ್ ಚುನಾವಣೆ… ತುಮಕೂರಿನಲ್ಲಿ ಬಿಜೆಪಿ ಅಭ್ಯರ್ಥಿ ಲೋಕೇಶ್​ ಗೌಡ ಭರ್ಜರಿ ಕ್ಯಾಂಪೇನ್…!

ತುಮಕೂರು: ತುಮಕೂರಿನಲ್ಲಿ ಬಿಜೆಪಿ ಎಂಎಲ್​ಸಿ ಅಭ್ಯರ್ಥಿ ಲೋಕೇಶ್​ ಗೌಡ ಕ್ಷೇತ್ರಾದ್ಯಂತ ಭರ್ಜರಿ ಕ್ಯಾಂಪೇನ್​ ಮಾಡುತ್ತಿದ್ದಾರೆ. ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಪಕ್ಕಾ ಪ್ಲಾನ್​ ಮಾಡಿಕೊಂಡು ಪ್ರಚಾರದ ರೂಪುರೇಷೆ ಸಿದ್ದಮಾಡಿದ್ದಾರೆ. ಇಂದು  ತುಮಕೂರಿಗೆ ಸಿಎಂ ಬೊಮ್ಮಾಯಿ ಹಾಗೂ ಜಿಲ್ಲೆಯ ಸಚಿವರು, ಶಾಸಕರು, ಮಾಜಿ...

Read more

ವಿಧಾನ ಪರಿಷತ್​​ ಫೈಟ್​ ಬೆನ್ನಲ್ಲೇ ರಾಜ್ಯಕ್ಕೆ ಮತ್ತೊಂದು ಎಲೆಕ್ಷನ್…. 58 ನಗರ-ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ…

ಬೆಂಗಳೂರು: ವಿಧಾನ ಪರಿಷತ್​​ ಫೈಟ್​ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಎಲೆಕ್ಷನ್​​​​ ನಡೆಯಲಿದ್ದು, ಡಿಸೆಂಬರ್​​​ 27ಕ್ಕೆ ಲೋಕಲ್​ ಬಾಡಿ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ 58 ನಗರ-ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆ ಮಾಡಲಾಗಿದೆ. ಅವಧಿ ಮುಕ್ತಾಯ ಹಿನ್ನೆಲೆ 58 ನಗರ ಸ್ಥಳೀಯ ಸಂಸ್ಥೆಗಳಿಗೆ...

Read more

ರಾಜ್ಯದಲ್ಲಿ ಲಾಕ್​ ಡೌನ್​ ಇಲ್ಲ…! ಲಾಕ್​ಡೌನ್ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಡಾ.ಕೆ.ಸುಧಾಕರ್ ಸ್ಪಷ್ಟನೆ…

ಬೆಂಗಳೂರು: ರಾಜ್ಯದಲ್ಲಿ ಲಾಕ್​ ಡೌನ್​ ಇಲ್ಲ.. ಲಾಕ್​ಡೌನ್ ಪ್ರಸ್ತಾಪ ಸರಕಾರದ ಮುಂದಿಲ್ಲ  ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಆತಂಕ ಸೃಷ್ಟಿ ಮಾಡೋ ಕೆಲಸ ಯಾರೂ ಮಾಡಬಾರದು, ಜನತೆ, ಯುವಕರಲ್ಲಿ ನಾನು...

Read more

ಒಮಿಕ್ರಾನ್​​​​​ ವೈರಸ್​ ಎಂಟ್ರಿ ಹೇಗಿರುತ್ತೆ ಗೊತ್ತಾ..? ಹೊಸ ವೈರಸ್​ ಅಟ್ಯಾಕ್​​ ಆದ್ರೆ ಏನ್​​ ಲಕ್ಷಣ ಗೋಚರಿಸುತ್ತೆ..?

ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್​ ವೈರಸ್​​ನಿಂದಾಗಿ ಪ್ರಪಂಚದಾದ್ಯಂತ ಆತಂಕ ಶುರುವಾಗಿದೆ. ಈ ಒಮಿಕ್ರಾನ್​ ​​ ಶರವೇಗದಲ್ಲಿ ಹರಡುತ್ತಿದ್ದು, ಈ ವೈರಸ್ ಯಾವ ರೀತಿ ಅಟ್ಯಾಕ್​ ಮಾಡುತ್ತದೆ ಗೊತ್ತಾ..? ವಿವರ ಇಲ್ಲಿದೆ ಓದಿ.. ಈ ಒಮಿಕ್ರಾನ್​ ದೇಹದ...

Read more

ಓಮಿಕ್ರಾನ್​​​​​ ಹೊಸ ತಳಿ ಬಗ್ಗೆ ನಾಳೆ ತಜ್ಞರ ಜೊತೆ ಮಹತ್ವದ ಮೀಟಿಂಗ್​… ಆರೋಗ್ಯ ಸಚಿವ ಡಾ.ಕೆ.ಸುಧಾಕರ್…

ಬೆಂಗಳೂರು: ಓಮಿಕ್ರಾನ್​​​​​ ಹೊಸ ತಳಿ ಬಗ್ಗೆ ರಾಜ್ಯದಲ್ಲಿ ಆತಂಕ ಶುರುವಾಗಿದ್ದು, ಈ ಹಿನ್ನೆಲೆ ನಾಳೆ ಆರೋಗ್ಯ ಸಚಿವ ಡಾ.ಕೆ. ಸುಧಾಕರ್​​ ತಜ್ಞರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ. ಈವರೆಗೆ ವಿಶ್ವದ 12 ದೇಶಗಳಲ್ಲಿ ಓಮಿಕ್ರಾನ್​​​ ಪತ್ತೆಯಾಗಿದೆ. ಈ ಹಿನ್ನೆಲೆ ಆರೋಗ್ಯ ಸಚಿವರು...

Read more

ಟ್ರಾಫಿಕ್​​ ಜಾಮ್​ ಆಗಿದ್ದೇ ಅಪ್ಪು ಸಾವಿಗೆ ಕಾರಣ… ಭಾವುಕರಾದ ರಾಘವೇಂದ್ರ ರಾಜ್​ಕುಮಾರ್…

ಬೆಂಗಳೂರು: ದಿ. ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲ ಅಗಲಿ ಇಂದಿಗೆ 1 ತಿಂಗಳು ಕಳೆದಿದ್ದು, ಇಂದಿಗೂ ಅಪ್ಪು ಇನ್ನಿಲ್ಲ ಎಂಬ ಕಟು ಸತ್ಯವನ್ನ ನಾಡಿನ ಜನರಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಟ್ರಾಫಿಕ್​​ ಜಾಮ್​ ಆಗಿದ್ದೇ ಪುನೀತ್​ ಸಾವಿಗೆ ಕಾರಣ ಎಂದು ರಾಘವೇಂದ್ರ ರಾಜ್​ಕುಮಾರ್ ಹೇಳಿದ್ದಾರೆ....

Read more

ಭಾರತಕ್ಕೆ ಎಂಟ್ರಿ ಕೊಟ್ಟೇ ಬಿಡ್ತಾ ಒಮಿಕ್ರಾನ್​​​​​..? ಮಹಾರಾಷ್ಟ್ರದಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದ ಪ್ರಯಾಣಿಕನಿಗೆ ಕೊರೊನಾ ಪಾಸಿಟಿವ್​​​…!

ಮುಂಬೈ: ಪ್ರಪಂಚದಾದ್ಯಂತ ಕೊರೊನಾ ಹೊಸ ರೂಪಾಂತರಿ ಒಮಿಕ್ರಾನ್​ಗೆ ಅಬ್ಬರಕ್ಕೆ ಜನರು ಬೆಚ್ಚಿಬೀಳುತ್ತಿದ್ದು, ಇದೀಗ ಭಾರತಕ್ಕೂ ಈ ಹೊಸ ರೂಪಾಂತರಿ ಆಂತಕ ಸೃಷ್ಟಿಮಾಡಿದೆ. ವಿದೇಶದಿಂದ ಭಾರತಕ್ಕೆ ಬಂದವರಲ್ಲಿ ಕೊರೊನಾ ಪಾಸಿಟಿವ್​​​ ಹೆಚ್ಚಳವಾಗುತ್ತಿದ್ದು, ಮಹಾರಾಷ್ಟ್ರದಲ್ಲಿ ವಿದೇಶದಿಂದ ಬಂದ ಪ್ರಯಾಣಿಕನಿಗೆ ಸೋಂಕು ಇರುವುದು ದೃಢವಾಗಿದೆ. ಮಹಾರಾಷ್ಟ್ರದಲ್ಲಿ...

Read more

ಅಪ್ಪು ಅಗಲಿ ಇಂದಿಗೆ ಒಂದು ತಿಂಗಳು… ಇಂದು ಪುನೀತ್ ಸಮಾಧಿಗೆ ಕುಟುಂಬಸ್ಥರಿಂದ ಪೂಜೆ…

ಬೆಂಗಳೂರು: ದಿ. ಪುನೀತ್​​ ರಾಜ್​ಕುಮಾರ್​ ನಮ್ಮನ್ನೆಲ್ಲ ಅಗಲಿ ಇಂದಿಗೆ ಒಂದು ತಿಂಗಳಾಗಿದ್ದು,  ಅಪ್ಪು ಸಮಾಧಿಗೆ ಇಂದು  ಕುಟುಂಬಸ್ಥರ ಪೂಜೆ ಸಲ್ಲಿಸಿದ್ದಾರೆ. ಇಂದು ಕಂಠೀರವ ಸ್ಟುಡಿಯೋ ಬಳಿ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಮಾಧಿಗೆ ಸಂಬಂಧಿಕರು ಪೂಜೆ ನೆರವೇರಿಸಿದ್ದಾರೆ. ಸಮಾಧಿಗೆ ಸಾವಿರಾರು ಅಭಿಮಾನಿಗಳು ಬರಲಿದ್ದು,...

Read more

ಇಂದಿನಿಂದ ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ….

ಬೆಂಗಳೂರು: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ 3 ದಿನಗಳಕಾಲ‌ ಪರಿಷೆ ನಡೆಯಲಿದೆ. ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆಯಿಂದ ಇಂದು ಬೆಳಿಗ್ಗೆ 10.30ಕ್ಕೆ ಪರಿಷೆಗೆ ಚಾಲನೆ ನೀಡಿದ್ದು,  ಬಸವನಗುಡಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದು, ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದೆ. ಪರಿಷೆಯ ಪ್ರಮುಖ...

Read more

ಹೊಸ ವೈರಸ್​ ಆತಂಕ ತರುವ ಲಕ್ಷಣ ಕಾಣುತ್ತಿವೆ… ಸಂಸತ್​​​​ ಅಧಿವೇಶನ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಆತಂಕ…!

ದೆಹಲಿ:  ಪ್ರಪಂಚದಾದ್ಯಂತ ಕೊರೋನಾ ರೂಪಾಂತರಿ ಕಾಟ ಶುರುವಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.  ಮತ್ತೊಮ್ಮೆ ಸಂಕಷ್ಟದ ದಿನಗಳು ಎದುರಾಗುತ್ತಿವೆ, ಹೊಸ ವೈರಸ್​ ಆತಂಕ ತರುವ ಲಕ್ಷಣ ಕಾಣುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಬಗ್ಗೆ ಸಂಸತ್​​​​...

Read more

ರಾಜ್ಯದಲ್ಲಿ ಮೂರನೇ ಅಲೆ ಭೀತಿ ಬಗ್ಗೆ ನಿಗಾ ಇಟ್ಟಿದ್ದೇವೆ : ಬಸವರಾಜ ಬೊಮ್ಮಾಯಿ…!

ತುಮಕೂರು : ರಾಜ್ಯದಲ್ಲಿ ಕೊರೋನಾ ಬಗ್ಗೆ ನಿಗಾ ಇಟ್ಟಿದ್ದೇವೆ, ಮೂರನೇ ಅಲೆ ಭೀತಿ ಬಗ್ಗೆ ನಿಗಾ ವಹಿಸಲಾಗಿದೆ. ಹೊರಗಿನಿಂದ ಬರುವವರ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಬಗ್ಗೆ  ತುಮಕೂರಿನಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ...

Read more

ಬಾಡಿಗೆ ಆಸೆಗೆ ಸಾಲ ಮಾಡಿ ಕಾರುಗಳನ್ನ ಟ್ರಾವೆಲ್ಸ್​​​​ಗೆ ಅಟ್ಯಾಚ್ ಮಾಡಿದ್ದೀರಾ… ಹಾಗಾದ್ರೆ ಈ ಸ್ಟೋರಿ ನೋಡಿ…! ಕಾರು ಇಲ್ಲ ಬಾಡಿಗೆ ದುಡ್ಡೂ ಇಲ್ಲ…!

ಬೆಂಗಳೂರು: ಬೆಂಗಳೂರಲ್ಲಿ ಮತ್ತೊಂದು ಮಹಾನ್ ವಂಚನೆ ಬೆಳಕಿಗೆ ಬಂದಿದ್ದು, ಟ್ರಾವೆಲ್ಸ್ ಹೆಸರಿನಲ್ಲಿ ಕಾರುಗಳನ್ನ ಅಟ್ಯಾಚ್ ಮಾಡಿಸ್ಕೊಂಡು ಟ್ರಾವೆಲ್ಸ್ ಕಚೇರಿ ರಾತ್ರೋರಾತ್ರಿ ಖಾಲಿ ಮಾಡಿ  ಎಸ್ಕೇಪ್ ಆಗಿದ್ದಾರೆ. ಬಗಲುಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಸಂದ್ರದಲ್ಲಿ ಈ ಘಟನೆ ನಡೆದಿದ್ದು, ತಮಿಳುನಾಡು ಮೂಲದ ಶಿವಕುಮಾರ್...

Read more

ಈ ವರ್ಷ ರೆಗ್ಯುಲರ್ ಕ್ಲಾಸ್ ಬೇಡ್ವೇ ಬೇಡ… ಸರ್ಕಾರಕ್ಕೆ ಪೋಷಕರ ಒತ್ತಾಯ…!

ಬೆಂಗಳೂರು: ಕರ್ನಾಟಕದಲ್ಲೂ ಒಮಿಕ್ರಾನ್​​ ಬಗ್ಗೆ ಭಾರೀ ಆತಂಕ ಶುರುವಾಗಿದ್ದು, ಕಳೆದೆರಡು ವರ್ಷಗಳಿಂದ ಮುಚ್ಚಿದ್ದ ಶಾಲಾ-ಕಾಲೇಜು ಇತ್ತೀಚೆಗಷ್ಟೆ ತೆರೆದಿದ್ದು, ರೆಗ್ಯುಲರ್​ ಕ್ಲಾಸ್​ ಶುರುವಾಗಿತ್ತು. ಆದರೆ ಇದೀಗ ಮತ್ತೆ ಕೊರೋನಾ ರೂಪಾಂತರಿ ಕಾಟ ಹೆಚ್ಚಾಗುತ್ತಿದ್ದು, ಮತ್ತೆ ಆನ್​ಲೈನ್​ ಕ್ಲಾಸ್​ ಶುರುಮಾಡಿ ಈ ವರ್ಷ ರೆಗ್ಯುಲರ್​...

Read more

ತನಿಖಾಧಿಕಾರಿಯ ಮುಂದೆ ಹಾಜರಾಗಿಲ್ಲ ಶ್ರೀಕಿ…! ಜೈಲಿನಿಂದ ಹೊರಬಂದಾಗಿಂದಲೂ ಶ್ರೀಕಿ ಕಣ್ಮರೆ…!

ಬೆಂಗಳೂರು: ಬಿಟ್ ಕಾಯಿನ್ ಕಿಂಗ್​​ಪಿನ್​​ ಹ್ಯಾಕರ್​​ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತೆ ಜೈಲು ಸೇರೋ ಲಕ್ಷಣಗಳು ಕಾಣಿಸುತ್ತಿದ್ದು,  ಹೊಟೇಲ್ ಗಲಾಟೆ ಹಾಗೂ ಡ್ರಗ್ಸ್ ಸೇವನೆ ಕೇಸ್​​ನಲ್ಲಿ ಜಾಮೀನು ಮೇಲೆ ಹೊರ ಬಂದಿದ್ದ ಶ್ರೀಕಿ ನಿಗೂಢವಾಗಿ ಕಣ್ಮರೆಯಾಗಿದ್ದಾನೆ. ಬೆಂಗಳೂರಿನ ಜೀವನ್ ಭೀಮಾ ನಗರ...

Read more

ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದೆ ಒಮಿಕ್ರಾನ್​​​​​…! ಡೆಲ್ಟಾ ರೂಪಾಂತರಿಗಿಂತ 6 ಪಟ್ಟು ವೇಗ ಈ ಒಮಿಕ್ರಾನ್​​​​…!

ಬೆಂಗಳೂರು: ಹೊಸ ರೂಪಾಂತರಿ ಒಮಿಕ್ರಾನ್​ ವೈರಸ್​​​​​​ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದ್ದು,  ಡೆಲ್ಟಾ ರೂಪಾಂತರಿಗಿಂತ 6 ಪಟ್ಟು ವೇಗದಲ್ಲಿ ಹರಡುತ್ತಿದೆ. ಈಗಾಗಲೇ ​​ 20ಕ್ಕೂ ಹೆಚ್ಚು ದೇಶಗಳಲ್ಲಿ ಹೊಸ ವೈರಸ್​ ಪತ್ತೆಯಾಗಿದೆ. ಶರವೇಗದಲ್ಲಿ ಹರಡುತ್ತಿರುವ ಈ ಆಫ್ರಿಕನ್​ ರೂಪಾಂತರಿ, ದಕ್ಷಿಣ ಆಫ್ರಿಕಾ,...

Read more

ಪ್ರೆಸ್ ಕ್ಲಬ್ ಕೌನ್ಸಿಲ್ ಜಿಲ್ಲಾಧ್ಯಕ್ಷರಾಗಿ ಬಿಟಿವಿ ವರದಿಗಾರ ಮಂಜುನಾಥ್.ಜಿ ಆಯ್ಕೆ…!

ನೆಲಮಂಗಲ: ಕರ್ನಾಟಕ ರಾಜ್ಯದಲ್ಲಿ ತನ್ನದೆ ಆದ ಚಾಪು ಮೂಡಿಸಿರುವ ಪ್ರೆಸ್ ಕ್ಲಬ್ ಕೌನ್ಸಿಲ್ ನ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ನಿಮ್ಮ ಬಿಟಿವಿ ನೆಲಮಂಗಲ ವರದಿಗಾರರಾದ ಮಂಜುನಾಥ್.ಜಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈಗಾಗಲೆ ರಾಜ್ಯಾದ್ಯಂತ ಪತ್ರಕರ್ತರ ನೋವು ನಲಿವುಗಳಿಗೆ ಸ್ಪಂಧಿಸುತ್ತಿರುವ ಪ್ರೆಸ್ ಕ್ಲಬ್...

Read more

ದೈನಂದಿನ ರಾಶಿ ಭವಿಷ್ಯ..! 29/11/21

ದಕ್ಷಿಣಾಯನ ಶರದ್  ಋತು ಆಶ್ವೀಜ ಮಾಸ ಕೃಷ್ಣ ಪಕ್ಷ ದಶಮಿ ಸೋಮವಾರ ಸೂರ್ಯೋದಯ ಬೆಳಗ್ಗೆ : 06:55 AM ಸೂರ್ಯಾಸ್ತ ಸಂಜೆ :05:24 PM ಚಂದ್ರೋದಯ : 02:14 AM, Nov 30 ಚಂದ್ರಾಸ್ತ : 02:04 PM ರಾಹುಕಾಲ : 08:13 AM to 09:32 AM ಗುಳಿಕಕಾಲ: 01:28 PM to 02:47 PM ಯಮಗಂಡಕಾಲ :10:51 AM to 12:09 PM...

Read more

ಕೆ. ಹೆಚ್. ಮುನಿಯಪ್ಪ ಪ್ರಾಮಾಣಿಕ ವ್ಯಕ್ತಿ, ಪಕ್ಷ ನಿಷ್ಠೆಯ ವ್ಯಕ್ತಿ… ಹೆಚ್.ಡಿ.ಕುಮಾರಸ್ವಾಮಿ…

ಕೋಲಾರ:  ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ನ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ವಿರುದ್ಧ ಲಘುವಾಗಿ ಮಾತನಾಡುವುದಿಲ್ಲ, ಅವರು ಪ್ರಾಮಾಣಿಕ ವ್ಯಕ್ತಿ, ಪಕ್ಷ ನಿಷ್ಠೆಯ ವ್ಯಕ್ತಿ ಎಂದು ಹೇಳಿದ್ದಾರೆ. ಈ ಬಗ್ಗೆ ಕೋಲಾರದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ,...

Read more

ದಕ್ಷಿಣ ಆಫ್ರಿಕಾ ನಂತರ ಆಸ್ಟ್ರೇಲಿಯಾದಲ್ಲೂ ಓಮಿಕ್ರಾನ್ ಕಾಟ… ಆಫ್ರಿಕಾದಿಂದ ಸಿಡ್ನಿಗೆ ಬಂದ ಇಬ್ಬರಿಗೆ ಓಮಿಕ್ರಾನ್ ಸೋಂಕು…

ಬೆಂಗಳೂರು: ದಕ್ಷಿಣ ಆಫ್ರಿಕಾ ನಂತರ ಆಸ್ಟ್ರೇಲಿಯಾದಲ್ಲೂ ಓಮಿಕ್ರಾನ್​​​ ಕಾಟ ಶುರುವಾಗಿದ್ದು,  ಸಿಡ್ನಿಯ ಇಬ್ಬರು ಪ್ರಯಾಣಿಕರಲ್ಲಿ ಹೊಸ ಸೋಂಕು ಕಾಣಿಸಿಕೊಂಡಿದೆ. ದಕ್ಷಿಣ ಆಫ್ರಿಕಾದಿಂದ ಬಂದಿದ್ದ ಇಬ್ಬರಲ್ಲಿ ಸೋಂಕು ಪತ್ತೆಯಾಗ್ತಿದ್ದಂತೆ  ಆಸ್ಟ್ರೇಲಿಯಾ ಆತಂಕಕ್ಕೆ ಒಳಗಾಗಿದ್ದು, ನ್ಯೂ ಸೌತ್​ವೇಲ್ಸ್​ ಜೆನೋಮ್​​ ಸೆಂಟರ್​ನಲ್ಲಿ ಗಂಟಲು ದ್ರವ ಪರೀಕ್ಷೆ...

Read more

ಕನಿಷ್ಠ 15 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ… ಇಡೀ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿದೆ..: BY ವಿಜಯೇಂದ್ರ..

ಚಿತ್ರದುರ್ಗ: ಮುಂಬರುವ ಚುನಾವಣೆಯಲ್ಲಿ ಬಿ.ವೈ. ವಿಜಯೇಂದ್ರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ನಾನು ಎಲ್ಲಿ ಚುನಾವಣೆ ಸ್ಪರ್ಧಿಸಬೇಕು ಎಂಬುದು ಪಕ್ಷ ತೀರ್ಮಾನ ಮಾಡಬೇಕು. ನಾನು ಪಕ್ಷಕ್ಕಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದೇನೆ ಕನಿಷ್ಠ 15 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಖಚಿತ. ಕಾಂಗ್ರೆಸ್...

Read more

ರಾಜ್ಯಕ್ಕೆ ಇನ್ನೂ ಕೊರೊನಾ ಹೊಸ ತಳಿ ಬಂದಿಲ್ಲ… ಆರೋಗ್ಯ ಸಚಿವ ಡಾ.ಕೆ.ಸುಧಾಕರ್…

ಬೆಂಗಳೂರು: ಕೊರೊನಾ ರೂಪಾಂತರಿ ವೈರಸ್​ ಬಗ್ಗೆ ರಾಜ್ಯದಲ್ಲಿ ಆತಂಕ ಹೆಚ್ಚಾಗಿದ್ದು, ಈ ಬಗ್ಗೆ  ಆರೋಗ್ಯ ಸಚಿವ ಡಾ. ಸುಧಾಕರ್​ ಪ್ರತಿಕ್ರಿಯಿಸಿದ್ದು, ರಾಜ್ಯಕ್ಕೆ ಇನ್ನೂ ಹೊಸ ತಳಿ ಎಂಟ್ರಿ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ.ಸುಧಾಕರ್​, ...

Read more

ಕರ್ನಾಟಕಕ್ಕೆ ಶಾಕ್​​ ಕೊಟ್ಟ ಓಮಿಕ್ರಾನ್ ವೈರಸ್​…! ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಕೊರೊನಾ ಪತ್ತೆ…!

ಬೆಂಗಳೂರು: ಕರ್ನಾಟಕಕ್ಕೆ ಆಫ್ರಿಕಾ ವೈರಸ್​ ಶಾಕ್​​ ಕೊಟ್ಟಿದ್ದು, ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಕೊರೊನಾ ಪತ್ತೆಯಾಗಿದೆ. ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರಲ್ಲಿ ಕೊರೊನಾ ಸೋಂಕು ದೃಢವಾಗಿದೆ. ಇಬ್ಬರ ಸಂಪರ್ಕದಲ್ಲಿದ್ದ 10 ಪ್ರಯಾಣಿಕರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಇಬ್ಬರು...

Read more

ರಾಜ್ಯದಲ್ಲಿ ದುನಿಯಾ ಟೈಟ್ ಆಗೋದು ಪಕ್ಕಾ..? ಕಠಿಣ ರೂಲ್ಸ್​ಗಳ ಸುಳಿವು ಕೊಟ್ಟ ಸಿಎಂ ಬಸವರಾಜ ಬೊಮ್ಮಾಯಿ…

ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೊನಾ ರೂಪಾಂತರಿ ವೈರಸ್ ಪತ್ತೆಯಾಗಿದ್ದು, ಈ ವೈರಸ್​ನಿಂದಾಗಿ ಜಗತ್ತಿನಾದ್ಯಂತ​ ಟೆನ್ಷನ್​​ ಶುರುವಾಗಿದೆ. ಈ ಹಿನ್ನೆಲೆ ಮುನ್ನೆಚರಿಕಾ ಕ್ರಮವಾಗಿ ರಾಜ್ಯದಲ್ಲಿ ಟಫ್​ ರೂಲ್ಸ್​  ಜಾರಿ ಮಾಡಲಾಗುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಟಫ್...

Read more

ಕೊಪ್ಪಳದಲ್ಲಿ ಕೊರೊನಾ ಲಸಿಕೆಗೆ ಹೆದರಿ ಮೈ ಮೇಲೆ ದೇವರು ಬಂದಂತೆ ವರ್ತಿಸಿದ ತಾತಪ್ಪ…!

ಕೊಪ್ಪಳ: ವ್ಯಕ್ತಿಯೊಬ್ಬ ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಹೆದರಿ ಮೈ ಮೇಲೆ ದೇವರು ಬಂದಂತೆ ವರ್ತಿಸಿದ್ದಾನೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಖಾಪುರದಲ್ಲಿ ಈ ಘಟನೆ ನಡೆದಿದ್ದು,  ಶನಿವಾರ ಕೆ ಬೋದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಲಸಿಕೆ ಹಾಕಲು ಹೋದ ವೇಳೆ, ...

Read more

ರಾಜ್ಯ ಸರ್ಕಾರದ ವಿರುದ್ಧ ಡಿಕೆಶಿ ಮೇಕೆದಾಟು ಅಸ್ತ್ರ…! ಸಂಗಮದಿಂದ ಬೆಂಗಳೂರುವರೆಗೆ ಜನವರಿ ಮೊದಲ ವಾರದಲ್ಲಿ ಕಾಂಗ್ರೆಸ್ ಪಾದಯಾತ್ರೆ…

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಜನವರಿ ಮೊದಲ ವಾರ ಕಾಂಗ್ರೆಸ್ ಪಾದಯಾತ್ರೆ ನಡೆಸಲಿದೆ. ಸರ್ಕಾರದ ಇಮೇಜ್ ಡ್ಯಾಮೇಜ್ ಮಾಡಲು ಡಿಸೆಂಬರ್ ಅಧಿವೇಶನ ಮುಗಿದ ಕೂಡಲೇ ಮೇಕೆದಾಟು ಕಾವು ಹೆಚ್ಚಿಸಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಪ್ಲಾನ್ ಮಾಡಿದ್ದಾರೆ. ಹೀಗಾಗಿ ನಿನ್ನೆಯಷ್ಟೇ ಡಿಕೆಶಿ...

Read more

ಮತ್ತೆ ಕೋಟಿ ಒಡೆಯನಾದ ಮಲೆ ಮಹದೇಶ್ವರ… 28 ದಿನದಲ್ಲಿ ಒಂದೂವರೆ ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹ…

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಮತ್ತೆ ಕೋಟಿ ಒಡೆಯನಾಗಿದ್ದಾನೆ. ಹನೂರು ತಾಲೂಕಿನ ಮಲೆ ಮಹದೇಶ್ವರ ದೇವಸ್ಥಾನ ಹುಂಡಿ ಎಣಿಕೆ ಕಾರ್ಯ ನಡೆದಿದ್ದು ಕೇವಲ 28 ದಿನದಲ್ಲಿ ಭಕ್ತರು ಒಂದೂವರೆ ಕೋಟಿಗೂ ಹೆಚ್ಚು ಕಾಣಿಕೆ ಸಲ್ಲಿಕೆ ಮಾಡಿದ್ದಾರೆ. ಮಾದಪ್ಪನ ಹುಂಡಿಗೆ 1...

Read more

ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ… ಮುಂದಿನ 2 ದಿನ ಸಾಧಾರಣ ಮಳೆಯಾಗುವ ಮುನ್ಸೂಚನೆ…

ಬೆಂಗಳೂರು: ಕಳೆದ ಮೂರು ನಾಲ್ಕು ದಿನದಿಂದ ಬೆಂಗಳೂರಲ್ಲಿ ಬಿಡುವು ನೀಡಿದ್ದ ಮಳೆರಾಯ ಇದೀಗ  ಮತ್ತೆ ಶಾಕ್​ ನೀಡುತ್ತಿದ್ದು, ಇಂದು  ಮುಂಜಾನೆಯಿಂದ ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣವಿದ್ದು, ಮುಂದಿನ 2 ದಿನ ಸಾಧಾರಣ ಮಳೆಯಾಗುವ...

Read more

ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಸದ್ದು ಮಾಡ್ತಿದೆ ಮೀಟೂ… ನಟಿ ಶೃತಿ ಹರಿಹರನ್​ಗೆ ಪೊಲೀಸರ ನೋಟಿಸ್​…

ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಮತ್ತೆ ಮೀಟೂ ಸದ್ದು ಮಾಡುತ್ತಿದ್ದು, ಅರ್ಜುನ್ ಸರ್ಜಾ ವಿರುದ್ಧ ಆರೋಪ ಮಾಡಿದ್ದ ಶೃತಿ ಹರಿಹರನ್​ಗೆ ಕಬ್ಬನ್​​​ಪಾರ್ಕ್ ಪೊಲೀಸರು ನೋಟಿಸ್​ ನೀಡಿದ್ದಾರೆ. ಸರ್ಜಾ ವಿರುದ್ದ ಶೃತಿ ಹರಿಹರನ್ ಲೈಂಗಿಕ ದೌರ್ಜನ್ಯ ಆರೋಪವನ್ನ 2018ರಲ್ಲಿ ಮಾಡಿ,  ಕಬ್ಬನ್ ಪಾರ್ಕ್ ಠಾಣೆಯಲ್ಲಿ ದೂರು...

Read more

ಮತ್ತೊಬ್ಬ ಭ್ರಷ್ಟನನ್ನು ಅರೆಸ್ಟ್ ಮಾಡಿದ ACB… ನಿರ್ಮಿತಿ ಕೇಂದ್ರದ ಮಾಜಿ ಅಧಿಕಾರಿ ವಾಸುದೇವ್​ ಅರೆಸ್ಟ್…!

ಬೆಂಗಳೂರು: ಕೆಲದಿನಗಳಿಂದ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮೇಲೆ ದಾಳಿ ಮಾಡಿತ್ತಿದ್ದು, ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಾಜೆಕ್ಟ್​ ಡೈರೆಕ್ಟರ್​​ ಆಗಿದ್ದ ವಾಸುದೇವ್ ​​​ರನ್ನ  ಎಸಿಬಿ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ. ನಿರ್ಮಿತಿ ಕೇಂದ್ರದ ಮಾಜಿ ಅಧಿಕಾರಿ ವಾಸುದೇವ್​ ಅರೆಸ್ಟ್ ಆಗಿದ್ದು, ಒಟ್ಟು...

Read more

ರಾಜ್ಯದಲ್ಲಿ ಮತ್ತೆ ಕೊರೊನಾ ಟೆನ್ಷನ್… ತುರ್ತು ಸಭೆ ಮಾಡಿದ ಸಿಎಂ ಬೊಮ್ಮಾಯಿ… ಸಭೆಯಲ್ಲಿ ಏನೇನ್​​​​ ಡಿಸೈಡ್ ಆಯ್ತು ಗೊತ್ತಾ..?

ಬೆಂಗಳೂರು:  ಆಫ್ರಿಕಾ ವೈರಸ್​ ಭೀತಿ ಹೆಚ್ಚಾದ ಹಿನ್ನೆಲೆ, ಸಿಎಂ ಬೊಮ್ಮಾಯಿ  ತುರ್ತು ಸಭೆ ನಡೆಸಿದ್ದು, ಕೊರೊನಾ ಹೊಸ ವೈರಸ್​​ ಹರಡದಂತೆ ತಡೆಯಲು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚನೆ  ನೀಡಿದ್ದಾರೆ. ಸಭೆಯಲ್ಲಿ ಸಿಎಂ ಕೇರಳ...

Read more

ಕೇರಳದಲ್ಲಿ ನ್ಯೂರೋ ವೈರಸ್ ಪತ್ತೆ… ರಾಜ್ಯದಲ್ಲೂ ಶುರುವಾಯ್ತು ನ್ಯೂರೋ ವೈರಸ್ ಆತಂಕ…

ಬೆಂಗಳೂರು: ಕೇರಳದಲ್ಲಿ ನ್ಯೂರೋ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲೂ ನ್ಯೂರೋ ವೈರಸ್ ಆತಂಕ ಹೆಚ್ಚಾಗಿದ್ದು, ಗಡಿ ಜಿಲ್ಲೆ ಮೈಸೂರಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಡಿ ಭಾಗದ 28 ಹಳ್ಳಿಗಳಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಬಾವಲಿ ಚೆಕ್​ಪೋಸ್ಟ್​ ಬಳಿ ತೀವ್ರ ತಪಾಸಣೆ ಮಾಡಲಾಗುತ್ತಿದೆ.  ಮನೆ ಮನೆಗೂ...

Read more

ದೇಶದ ಪ್ರಗತಿಗೆ ಗ್ರೀನ್ ವಾಹನ ಸ್ವಾಗತಾರ್ಹ… ಆರ್ಟ್​​ ಆಫ್​ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ…!

ನೆಲಮಂಗಲ: ಗ್ರೀನ್ ಎಕ್ಸ್ ಪೋಗೆ ಆರ್ಟ್​​ ಆಫ್​ ಲಿವಿಂಗ್ ಸಂಸ್ಥೆಯ ಶ್ರೀ ರವಿಶಂಕರ್ ಗುರೂಜಿ ಚಾಲನೆ ನೀಡಿದ್ದು, ದೇಶದ ಪ್ರಗತಿಗೆ ಗ್ರೀನ್ ವಾಹನ ಸ್ವಾಗತಾರ್ಹ ಎಂದು ಹೇಳಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲದ ಮಾದವಾರದ ಬಿಐಇಸಿಯಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಗ್ರೀನ್...

Read more

ಎದುರು ಮನೆಯವರ ಮೇಲೆ ಕುಸ್ತಿ ಮಾಡಿದ್ರೆ ಒಂಥರಾ ಇರುತ್ತೆ…! ಕುಮಾರಸ್ವಾಮಿಗೆ ಪರೋಕ್ಷ ಟಾಂಗ್ ನೀಡಿದ ಡಿಕೆಶಿ…

ಬೆಂಗಳೂರು: ಕನಕಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನ ಕಣಕ್ಕಿಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ, ಡಿ.ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ಎದುರು ಮನೆಯವರ ಮೇಲೆ ಕುಸ್ತಿ ಮಾಡಿದರೆ ಒಂಥರಾ ಇರುತ್ತೆ, ಪಕ್ಕದ ಮನೆಯವರ ಮೇಲೆ ಕುಸ್ತಿ ಮಾಡಿದರೆ ಒಂಥರಾ ಇರುತ್ತೆ. ಅಕ್ಕಪಕ್ಕದ ಮನೆಯವರು ಅಲ್ಲವಾ ಎಂದು ಕುಮಾರಸ್ವಾಮಿಗೆ...

Read more

ಶಿವರಾಮ ಕಾರಂತ ಬಡಾವಣೆ ಹೋರಾಟಗಾರರಿಗೆ ಗುಡ್​ನ್ಯೂಸ್… ಅಕ್ರಮ ಕಟ್ಟಡ ಸಕ್ರಮಗೊಳಿಸಿ ಸುಪ್ರೀಂ ಆದೇಶ…

ಬೆಂಗಳೂರು: ಶಿವರಾಮ ಕಾರಂತ ಬಡಾವಣೆ ಜನರಿಗೆ  ಸುಪ್ರೀಂಕೋರ್ಟ್​​ ಗುಡ್​ನ್ಯೂಸ್ ನೀಡಿದ್ದು, ಅಕ್ರಮ ಕಟ್ಟಡ ಸಕ್ರಮ ಗೊಳಿಸಿ ಆದೇಶ ಹೊರಡಿಸಿದೆ. ನ್ಯಾ. ಚಂದ್ರಶೇಖರ್ ಸಮಿತಿ ವರದಿ ಆಧರಿಸಿ ಸಕ್ರಮಕ್ಕೆ ಗ್ರೀನ್​ಸಿಗ್ನಲ್ ನೀಡಲಾಗಿದ್ದು,  BDAಯ ಶಿವರಾಮ ಕಾರಂತ ಲೇಔಟ್​​ನ ಅಕ್ರಮ ಕಟ್ಟಡಗಳು ಇನ್ನೂ ಮುಂದೆ...

Read more

ರಿಯಲ್​ ಎಸ್ಟೇಟ್​ ಮಾಫಿಯಾಗೆ ಹೆದರಿ ಸೂಸೈಡ್…? ತೆಲುಗು ಗಾಯಕಿ ಹರಿಣಿ ತಂದೆ ಸಾವಿನ ಕೇಸ್​ಗೆ ಟ್ವಿಸ್ಟ್…

ಬೆಂಗಳೂರು: ತೆಲುಗಿನ ಹಿನ್ನೆಲೆ ಗಾಯಕಿ ಹರಿಣಿ ತಂದೆ ಅನುಮಾನಸ್ಪದವಾಗಿ ಸಾವನಪ್ಪಿದ್ದು, ರೇಲ್ವೆ ಟ್ರ್ಯಾಕ್​ ಮೇಲೆ ಶವವಾಗಿ ಪತ್ತೆಯಾಗಿದ್ದರು. ಕೊಲೆ ಎಂದು ದೂರು ನೀಡಲಾಗಿತ್ತು. ಆದರೆ ಹರಿಣಿ ತಂದೆ ಸಾವಿನ ಕೇಸ್​ಗೆ ಟ್ವಿಸ್ಟ್ ಸಿಕ್ಕಿದ್ದು, ರಿಯಲ್​ ಎಸ್ಟೇಟ್​ ಮಾಫಿಯಾಗೆ ಹೆದರಿ ಹರಿಣಿ ತಂದೆ...

Read more

ದೇವರಪಲ್ಲಕ್ಕಿ ಹೊತ್ತು ವಿವಾದಕ್ಕೀಡಾದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…!

ಬೆಳ್ತಂಗಡಿ ಶಾಸಕರು ದೇವರಪಲ್ಲಕ್ಕಿ ಹೊತ್ತರು ಎಂಬ ಕಾರಣಕ್ಕೆ ವಿವಾದಕ್ಕೀಡಾಗಿದ್ದು, ಅನ್ಯ ಸಮುದಾಯದ ವ್ಯಕ್ತಿ ಪಲ್ಲಕ್ಕಿ ಹೊತ್ತಿದ್ದಾರೆ ಎಂದು ಪಲ್ಲಕ್ಕಿ ಶುದ್ಧೀಕರಣ ಮಾಡಲಾಗಿದೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಪರ ವಿರೋಧಗಳು ಕೇಳಿ ಬರುತ್ತಿದ್ದು,  ಸಾಮಾಜಿಕ ಜಾಲಾತಾಣದಲ್ಲಿ ಭಾರೀ ಚರ್ಚೆಗಳಾಗುತ್ತಿದೆ. ಬಂಟ ಸಮುದಾಯಕ್ಕೆ...

Read more

#Flashnews ಸುಧಾಕರ್ ಮನೆಗೆ ಶಾಸಕ ಜಮೀರ್ ಭೇಟಿ…!

ಬೆಂಗಳೂರು: ಸುಧಾಕರ್ ಮನೆಗೆ ಶಾಸಕ ಜಮೀರ್ ಭೇಟಿ ನೀಡಿದ್ದಾರೆ. ಭೇಟಿ ಬಳಿಕ ಮಾತನಾಡಿದ ಜಮೀರ್​, ನನ್ನ ಕ್ಷೇತ್ರದ ಕೆಲಸ ವಿಚಾರಕ್ಕೆ ಬಂದಿದ್ದೇನೆ.ವಿಕ್ಟೋರಿಯಾ ಆಸ್ಪತ್ರೆಗೆ ಅನುದಾನ ಬೇಕು, ಆ ವಿಚಾರಕ್ಕೆ ಮೆಮೊರಂಡಮ್ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಇನ್ನು ಪರಿಷತ್ ಚುನಾವಣೆ ವಿಚಾರಕ್ಕೆ ಸಂಬಂಧಿಸಿದಂತೆ...

Read more

ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ…! ದಕ್ಷಿಣ ಕನ್ನಡ ಆರೋಗ್ಯಾಧಿಕಾರಿ ಡಾ.ರತ್ನಾಕರ್ ಅರೆಸ್ಟ್…!

ಮಂಗಳೂರು: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ದಕ್ಷಿಣ ಕನ್ನಡ ಆರೋಗ್ಯಾಧಿಕಾರಿ ಡಾ.ರತ್ನಾಕರ್ ಅರೆಸ್ಟ್ ಆಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆ ಆರೋಗ್ಯಾಧಿಕಾರಿ ಡಾ.ರತ್ನಾಕರ್,  ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನೆಲೆ ಅರೆಸ್ಟ್ ಆಗಿದ್ದು, ಮಂಗಳೂರಿನ ಮಹಿಳಾ ಕಾರ್ಯಕರ್ತೆಯರು ರತ್ನಾಕರ್​ ವಿರುದ್ಧ ...

Read more

IAS ಅಧಿಕಾರಿ ವಿರುದ್ಧ ಲವ್.. ಸೆಕ್ಸ್.. ದೋಖಾ…! IAS ಅಧಿಕಾರಿ ಸ್ನೇಹಲ್​ ಲೋಖಂಡೆ ವಿರುದ್ಧ ಗಂಭೀರ ಆರೋಪ…!

ಕಲಬುರಗಿ:  IAS ಅಧಿಕಾರಿ ಸ್ನೇಹಲ್​ ಲೋಖಂಡೆ ವಿರುದ್ಧ ಲವ್.. ಸೆಕ್ಸ್.. ದೋಖಾ ಆರೋಪ ಕೇಳಿ ಬರುತ್ತಿದ್ದು, ದೆಹಲಿ‌ ಮೂಲದ ಯುವತಿಗೆ ಕಲಬುರಗಿ ‌ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ ಮದುವೆಯಾಗೋದಾಗಿ  ವಂಚಿಸಿ ಮೋಸ ಮಾಡಿದ್ದಾರೆ ಎಂದು ಯುವತಿ ಟ್ವಿಟರ್​ ಮೂಲಕ ಸಿಎಂ...

Read more

ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ರೂಪಾಂತರಿ ಆರ್ಭಟ…! ಆಫ್ರಿಕಾದಲ್ಲಿ ಆಯೋಜನೆಯಾಗಿದ್ದ ಕ್ರಿಕೆಟ್​ ಪಂದ್ಯ ಸ್ಥಗಿತ…!

ದಕ್ಷಿಣ ಆಫ್ರಿಕಾ: ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ರೂಪಾಂತರಿ ಆರ್ಭಟ ಹೆಚ್ಚಾಗಿದ್ದು,  ಹೊಸ ರೂಪಾಂತರಿ ಕಾಟಕ್ಕೆ ಕ್ರಿಕೆಟ್​ ಪಂದ್ಯ ಸ್ಥಗಿತಗೊಳಿಸಲಾಗಿದೆ.  ಆಫ್ರಿಕಾದಲ್ಲಿ ಆಯೋಜನೆಯಾಗಿದ್ದ ಎಲ್ಲಾ ಕ್ರೀಡಾಕೂಟಗಳನ್ನ ಸ್ಥಗಿತ ಮಾಡಲಾಗಿದೆ. ದ.ಆಫ್ರಿಕಾ-ನೆದರ್ಲೆಂಡ್​​ ಕ್ರಿಕೆಟ್​​ ಪಂದ್ಯ ಅರ್ಧಕ್ಕೆ ಸ್ಥಗಿತಗೊಳಿಸಲಾಗಿದ್ದು, ಮೊದಲ ಬ್ಯಾಟಿಂಗ್ ಮಾಡಿದ್ದ ಅಥಿತೇಯ ತಂಡ...

Read more

ರಾಜಾಜಿನಗರ ಪೊಲೀಸರ ಭರ್ಜರಿ ಕಾರ್ಯಚರಣೆ…! 48 ಗಂಟೆಯಲ್ಲೆ ಕಳ್ಳನನ್ನ ಪತ್ತೆ ಹಚ್ಚಿದ ಖಾಕಿಪಡೆ..!

ಬೆಂಗಳೂರು: ರಾಜಾಜಿನಗರ ಪೊಲೀಸರ ಭರ್ಜರಿ ಕಾರ್ಯಚರಣೆ ಮಾಡಿದ್ದು,  48 ಗಂಟೆಯಲ್ಲೆ ಕಳ್ಳತನ ಮಾಡಿದ್ದ ಆರೋಪಿಯ ಬಂಧಿಸಿದ್ದಾರೆ. ಮಧ್ಯಾಹ್ನದ ಸಮಯದಲ್ಲಿ ಮನೆಯನ್ನ ಅಥವಾ ಕಚೇರಿಯನ್ನ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖದೀಮ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ. ಟ್ರಾವೆಲ್ಸ್ ಕಚೇರಿಯಲ್ಲಿ ಚಿನ್ನಾಭರಣವಿಟ್ಟು  ಮಾಲೀಕ ತೆರಳಿದ್ದ...

Read more

ತಮಿಳುನಾಡಿನಲ್ಲಿ ಮತ್ತೆ ವರುಣನ ಅಬ್ಬರ…! ಭಾರೀ ಮಳೆಗೆ ಜನಜೀವನ ತತ್ತರ…!

ತಮಿಳುನಾಡು: ತಮಿಳುನಾಡಿನಲ್ಲಿ ಮತ್ತೆ ವರುಣನ ಅಬ್ಬರ ಜೋರಾಗಿದ್ದು, ರಸ್ತೆ, ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾಗಿದ್ದು, ಭಾರೀ ಮಳೆಗೆ ಜನಜೀವನ ತತ್ತರಿಸುವಂತಾಗಿದೆ.   ತಮಿಳುನಾಡಿನಲ್ಲಿ ಮತ್ತೆ ಮಳೆಯ ಆರ್ಭಟ ಹೆಚ್ಚಾಗಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​...

Read more

ದಕ್ಷಿಣ ಆಫ್ರಿಕಾದಲ್ಲಿ ಹೊಸ ವೈರಸ್​ ಟೆನ್ಷನ್​​…! ಒಮ್ಮೆ ದೇಹ ಹೊಕ್ಕಿದ್ರೆ, ಬಿಡಲ್ವಂತೆ ಈ ವೈರಸ್…! WHO ವಾರ್ನಿಂಗ್..!

ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಹೊಸ ಕೊರೋನಾ ರೂಪಾಂತರಿ ಪತ್ತೆಯಾಗಿದ್ದು, ಈ ವೈರಸ್​ನಿಂದಾಗಿ ಜಗತ್ತಿನಾದ್ಯಂತ​ ಟೆನ್ಷನ್​​ ಶುರುವಾಗಿದೆ. ಈ ವೈರಸ್​ ಒಮ್ಮೆ ದೇಹ ಹೊಕ್ಕಿದರೆ ಮತ್ತೆ  ಬಿಡುವುದು ಕಷ್ಟಕರವಾಗಿದೆ.  ಈ  ಹೊಸತಳಿಯ ಬಗ್ಗೆ WHO ಕೂಡಾ ಎಚ್ಚರವಹಿಸುವಂತೆ ವಾರ್ನಿಂಗ್ ಕೊಟ್ಟಿದ್ದಾರೆ. ವಿಶ್ವಾದ್ಯಂತ ಮತ್ತೆ...

Read more

ರೂಪಾಂತರಿ ಆರ್ಭಟಕ್ಕೆ ಶೇರುಪೇಟೆಯೂ ಶೇಕ್…! ಡಾಲರ್ ಎದುರು 37 ಪೈಸೆ ಕುಸಿದ ರೂಪಾಯಿ…!

ಬೆಂಗಳೂರು: ದಕ್ಷಿಣ ಆಫ್ರಿಕಾದಲ್ಲಿ ಕೊರೋನಾ ಹೊಸ ರೂಪಾಂತರಿ ಪತ್ತೆಯಾಗಿದ್ದು, ಈ ವೈರಸ್​ನಿಂದಾಗಿ ಇಡೀ ಜಗತ್ತೆ ಮತ್ತೆ ಕೊರೋನಾ ತನ್ನ ಆರ್ಭಟವನ್ನ ಶುರುಮಾಡಿದೆ ಎಂಬ ಆತಂಕದಲ್ಲಿದ್ದಾರೆ. ಹೀಗುರುವಾಗಲೇ ಈ ರೂಪಾತಂತಿ ವೈರಸ್​ನಿಂದಾಗಿ ಶೇರುಪೇಟೆಯಲ್ಲೂ ಗಣನೀಯ ಕುಸಿತ ಕಂಡಿದ್ದು,  ಶೇಕಡ 7 ರಷ್ಟು ಕಚ್ಚಾತೈಲ...

Read more

#Flashnews ಕರ್ನಾಟಕದಲ್ಲಿ ಮತ್ತೆ ಲಾಕ್​ಡೌನ್…? ಡಿಸೆಂಬರ್ 15ರ ನಂತರ ಲಾಕ್ ಮಾಡಲು ತಜ್ಞರ ಸೂಚನೆ…!

ಬೆಂಗಳೂರು:  ವಿಶ್ವಾದ್ಯಂತ ಮತ್ತೆ  ಕೊರೋನಾ ಆರ್ಭಟ ಶುರುವಾಗಿದ್ದು, ಈ ಹಿನ್ನೆಲೆ ಕರ್ನಾಟಕದಲ್ಲಿ ಮತ್ತೆ ಲಾಕ್​ಡೌನ್ ಆಗುವ ಸಾಧ್ಯತೆ ಇದೆ. ಕೊರೋನಾದ ಹೊಸ ರೂಪಾಂತರಿ ಭಾರೀ ತಲ್ಲಣ ಸೃಷ್ಟಿಸಿದ್ದು, ಸ್ವಲ್ಪ ಯಾಮಾರಿದರೂ ಮತ್ತೆ ‘ಲಾಕ್’ ಲೈಫ್ ಶುರುವಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ತಿಂಗಳ ಬಳಿಕ...

Read more

ದೈನಂದಿನ ರಾಶಿ ಭವಿಷ್ಯ..! 27/11/21

ದಕ್ಷಿಣಾಯನ ಶರದ್  ಋತು ಆಶ್ವೀಜ ಮಾಸ ಕೃಷ್ಣ ಪಕ್ಷ ಅಷ್ಟಮಿ ಶನಿವಾರ ಸೂರ್ಯೋದಯ ಬೆಳಗ್ಗೆ : 06:53 AM ಸೂರ್ಯಾಸ್ತ ಸಂಜೆ :05:24 PM ಚಂದ್ರೋದಯ : 12:14 AM, Nov 28 ಚಂದ್ರಾಸ್ತ : 12:57 PM ರಾಹುಕಾಲ : 09:31 AM to 10:50 AM ಗುಳಿಕಕಾಲ: 06:53 AM to 08:12 AM ಯಮಗಂಡಕಾಲ :...

Read more

ಬಗೆದಷ್ಟೂ ಬಯಲಾಗ್ತಿದೆ ರಸಿಕ ರತ್ನಾಕರನ ಕಾಮದಾಟ…! ಹೋದಲ್ಲೆಲ್ಲಾ ಸಿಬ್ಬಂದಿ ಜೊತೆ ಚೆಲ್ಲಾಟ… ಒಪ್ಪದಿದ್ರೆ ಮಾನಸಿಕ ಕಿರುಕುಳ..!

ಮಂಗಳೂರು: ಬಗೆದಷ್ಟೂ  ರಸಿಕ ರತ್ನಾಕರನ ಕಾಮದಾಟ ಬಯಲಾಗುತ್ತಿದ್ದು,  ಹೋದ-ಹೋದಲ್ಲೆಲ್ಲಾ ಸಿಬ್ಬಂದಿ ಜೊತೆ ರತ್ನಾಕರ ಚೆಲ್ಲಾಟ ಆಡುತ್ತಿದ್ದನಂತೆ.  ಸಲ್ಲಾಪಕ್ಕೆ ಸಹಕರಿಸದಿದ್ದರೆ,  ಮಾನಸಿಕ ಹಿಂಸೆ ನೀಡುತ್ತಿದ್ದನಂತೆ. ಈ ಹಿನ್ನೆಲೆ ರತ್ನಾಕರ್​​ ವಿರುದ್ಧ ಸಾಲು ಸಾಲು ದೂರು ಕೇಳಿ ಬಂದಿದ್ದು, ಕಮೀಷನರ್​ ಕಚೇರಿವರೆಗೂ ರತ್ನಾಕರ ಕಾಮದಾಟದ...

Read more

ರೈತರಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ… ಬದಲಿ ರಸ್ತೆಯಲ್ಲಿ ಸಂಚರಿಸುತ್ತಿರುವ ವಾಹನಗಳು…!

ಬೆಂಗಳೂರು: ಇಂದು ರೈತ ಸಂಘಟನೆಗಳು ಹೆದ್ದಾರಿಗಳನ್ನ ಬಂದ್​ ಮಾಡಿದ್ದಾರೆ. ಕೃಷಿ ಬೆಳೆಗಳಿಗೆ ಬೆಂಬಲ ಬೆಲೆ(MSP) ಖಾತ್ರಿ ಪಡಿಸಲು ಹಾಗೂ ವಿದ್ಯುತ್ ವಲಯ ಖಾಸಗೀಕರಣ ಮಾಡದಂತೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ. ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧ ಮಾಡ್ತಿರೋ ರೈತ ಸಂಘಟನೆಗಳು ಇಂದು...

Read more

ಪೇಡಾ ನಗರಿ ಧಾರವಾಡವನ್ನ ಶೇಕ್​ ಮಾಡ್ತಿದೆ ಕೊರೋನಾ…! SDM ಕಾಲೇಜಿನ 116 ವಿದ್ಯಾರ್ಥಿಗಳಲ್ಲಿ ಮತ್ತೆ ಸೋಂಕು..!

ಧಾರವಾಡ: ಪೇಡಾ ನಗರಿ ಧಾರವಾಡವನ್ನ  ಕೊರೋನಾ ಅಲುಗಾಡಿಸುತ್ತಿದ್ದು,  ಮತ್ತೆ 116 ಮಂದಿಯಲ್ಲಿ  ಡೆಡ್ಲಿ ವೈರಸ್​ ಕಾಣಿಸಿಕೊಂಡಿದೆ. SDM ಕಾಲೇಜಿನ 116 ವಿದ್ಯಾರ್ಥಿಗಳಲ್ಲಿ ಮತ್ತೆ ಸೋಂಕು ಪತ್ತೆಯಾಗಿದ್ದು,  ನವೆಂಬರ್​​​ 17ರಂದು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಕೊರೋನಾ ಲಕ್ಷಣ ಕಂಡು ಬಂದ ನಂತರ ಆಸ್ಪತ್ರೆ...

Read more

ಹಾಸನದಲ್ಲಿ ಹಾಡಹಗಲೇ ರೌಡಿಸಂ… ಹೆದ್ದಾರಿಯಲ್ಲೇ ತಲ್ವಾರ್​​​ ಹಿಡಿದು ಪುಂಡರ ವ್ಹೀಲಿಂಗ್​​​​…!

ಹಾಸನ: ಹಾಸನದಲ್ಲಿ ಹಾಡಹಗಲೇ ರೌಡಿಸಂ ಮಾಡಲಾಗುತ್ತಿದ್ದು, ಹೆದ್ದಾರಿಯಲ್ಲೇ ತಲ್ವಾರ್​​​ ಹಿಡಿದು ಪುಂಡರ ವ್ಹೀಲಿಂಗ್​​​​ ಮಾಡುತ್ತಿದ್ದಾರೆ. ಹಾಸನದ  ಚನ್ನರಾಯಪಟ್ಟಣ ಟೌನ್​​​ ಠಾಣೆ ವ್ಯಾಪ್ತಿಯಲ್ಲಿ ಪುಂಡರು ಪುಂಡಾಟ ನಡೆಸುತ್ತಿದ್ದು,  ಮೂರು ಬೈಕ್​​ನಲ್ಲಿ ಆರು ಯುವಕರು ಬೈಕ್ ವ್ಹೀಲಿಂಗ್​​​ ಮಾಡಿದ್ದಾರೆ.  ಕೈಯಲ್ಲಿ ತಲ್ವಾರ್ ಹಿಡಿದು ರೋಡ್​ನಲ್ಲಿ...

Read more

#Flashnews ಸಕ್ಕರೆ ನಾಡು ಮಂಡ್ಯದಲ್ಲೂ ನಡುಗಿದ ಭೂಮಿ…!

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲೂ  ಭೂಮಿ ನಡುಗಿದ್ದು,  ಬೆಳಗ್ಗೆ 11.15ರ ಸುಮಾರಿಗೆ ಮಂಡ್ಯದಲ್ಲಿ ಭೂಮಿ ಶೇಕ್​​​ ಆಗಿದೆ. 10-15 ನಿಮಿಷದ ಅಂತರದಲ್ಲಿ ಮೂರು ಬಾರಿ ಭೂಮಿ ಕಂಪಿಸಿದ್ದು, ಭಾರೀ ಸದ್ದು ಕೇಳಿಸಿದ ನಂತರ  ಭೂಮಿ ನಡುಗಿದೆ. ಭೂಮಿ ನಡುಗಿದ್ದರಿಂದ  ಮಂಡ್ಯದ ಜನರು...

Read more

#Flashnews ಬೆಂಗಳೂರು ಶೇಕ್​… ಹಲವೆಡೆ ಭೂಮಿ ಕಂಪಿಸಿದ ಅನುಭವ…!

ಬೆಂಗಳೂರು: ಐಟಿಸಿಟಿ ಬೆಂಗಳೂರಿನಲ್ಲಿ  ಹಲವೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು,  ಸುಮಾರು ಸೆಕೆಂಡ್​ಗಳ ಕಾಲ ಬೆಂಗಳೂರು  ನಡುಗಿದೆ. ಆರ್​​.ಆರ್​​.ನಗರ, ಕೆಂಗೇರಿ, ಕಗ್ಗಲೀಪುರ, ಹೆಮ್ಮಿಗೇಪುರ, ಯಶವಂತಪುರ ಸೇರಿದಂತೆ ಹಲವೆಡೆ ಭೂಮಿ ನಡುಗಿದ ಅನುಭವವಾಗಿದ್ದು,  ಕೆಲವೆಡೆ ಭಾರೀ ಶಬ್ಧ ಕೇಳಿ ಬಂದ ಹಿನ್ನೆಲೆಯಲ್ಲಿ ಭಾರೀ ಆತಂಕ...

Read more

ರಾಜ್ಯದಲ್ಲಿ ಮಿತಿಮೀರುತ್ತಿದೆ ಕಾಮುಕರ ಕಾಟ…! ಕಚೇರಿನ ಬೆಡ್​ ರೂಂ ಮಾಡ್ಕೊಂಡ ಕುಚ್​-ಕುಚ್ ಡಾಕ್ಟರ್​…! ಇಲ್ಲಿದೆ ನೋಡಿ ವಿಡಿಯೋ

ಮಂಗಳೂರು: ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರವಷ್ಟೇ ಅಲ್ಲ, ರಾಜ್ಯದಲ್ಲಿ ಮಿತಿಮೀರುತ್ತಿದೆ ಕಾಮುಕರ ಕಾಟವು ಹೆಚ್ಚಾಗಿದೆ. ಹೆಣ್ಣು ಮಕ್ಕಳು ರೋಡಲ್ಲಿ ಓಡಾಡಂಗಿಲ್ಲ, ಆಸ್ಪತ್ರೆಗೂ ಹೋಗಂಗಿಲ್ಲ ಅನ್ನೋ ಹಾಗಿದೆ ಇವತ್ತಿನ ಪರಿಸ್ಥಿತಿ. ಯಾಕೆ ಅಂತೀರಾ ಈ ಸ್ಟೋರಿ ಓದಿ... ...

Read more

ಮೂರು ದಿನ ಮತ್ತೆ ಡೇಂಜರ್…! ಸೈಕ್ಲೋನ್​​ನಿಂದ ಬೆಂಗಳೂರು ಸುತ್ತಮುತ್ತ ಭಾರೀ ಮಳೆ…!

ಬೆಂಗಳೂರು: ಮೂರು ದಿನ ಮತ್ತೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು,  ಸೈಕ್ಲೋನ್​​ನಿಂದ ಬೆಂಗಳೂರು ಸುತ್ತಮುತ್ತ ಭಾರೀ ಮಳೆಯಾಗಲಿದೆ. ಈ ಹಿನ್ನೆಲೆ  ಸರ್ಕಾರ ಹೈ ಅಲರ್ಟ್ ವಾರ್ನಿಂಗ್ ನೀಡಿದೆ. ಕಳೆದರೆಡು ದಿನಗಳಿಂದ ಕೊಂಚ ಮಟ್ಟಿಗೆ ರಿಲೀಫ್ ನೀಡಿದ್ದ ಮಳೆರಾಯ ಮತ್ತೆ ಅಬ್ಬರಿಸೋ ಸಾಧ್ಯತೆ...

Read more

ರೈಲ್ವೆ ಟ್ರ್ಯಾಕ್​ ಮೇಲೆ ಸಿಕ್ತು ಸಿಂಗರ್​​ ತಂದೆ ಶವ… ಕೊಲೆಯೋ..ಸೂಸೈಡೋ..ನಡೆಯುತ್ತಿದೆ ತನಿಖೆ..!

ಬೆಂಗಳೂರು:  ತೆಲುಗಿನ ಹಿನ್ನೆಲೆ ಗಾಯಕಿ ಹರಿಣಿ ತಂದೆ ಅನುಮಾನಸ್ಪದವಾಗಿ ಸಾವನಪ್ಪಿದ್ದು, ರೇಲ್ವೆ ಟ್ರಾಕ್​ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ಈ ಸಾವಿನ ಸುತ್ತ ಹಲವು ಅನುಮಾನಗಳು ಮೂಡುತ್ತಿದ್ದು,  ಕೊಲೆಯಾದ್ರಾ ಪ್ರಖ್ಯಾತ ಸಿಂಗರ್​​​ ತಂದೆ...? ಎಂಬ ಪ್ರಶ್ನೆ ಉಲ್ಬಣವಾಗುತ್ತಿದೆ.  ಯಲಹಂಕ ರೈಲ್ವೇ ಸ್ಟೇಷನ್ ಬಳಿ...

Read more

ಬೆಂಗಳೂರಿನಲ್ಲಿ ಹೆಚ್ಚಾಗಿದ್ದಾರೆ ಬೈಕ್ ಕಳ್ಳರು..! ಸೈಲೆಂಟಾಗಿ ಬರ್ತಾರೆ ಸದ್ದಿಲ್ಲದೆ ಬೈಕ್ ಹೊತ್ತೊಯ್ತಾರೆ..!

ಬೆಂಗಳೂರು: ಬೆಂಗಳೂರಲ್ಲಿ ದಿನೇ ದಿನೇ ಬೈಕ್​ ಕಳ್ಳರ ಹಾವಳಿ ಹೆಚ್ಚಾಗುತ್ತಿದ್ದು, ಸೈಲೆಂಟಾಗಿ ಬಂದು ಸದ್ದಿಲ್ಲದೆ ಬೈಕ್​ ನಾಪತ್ತೆ ಮಾಡುತ್ತಾರೆ. ಬೆಂಗಳೂರಿನ ಸಂಜಯ್​​ ನಗರದ ಭೂಪಸಂದ್ರ ಬಳಿ ಕಳ್ಳರು ಕೈಚಳಕ ತೋರಿದ್ದು, ಸೈಲೆಂಟಾಗಿ ಬಂದು ಬೈಕ್​ನ ಸೈಡ್​ ಲಾಕ್​ ಮುರಿದು ಬೈಕನ್ನ ತಳ್ಳಿಕೊಂಡೇ...

Read more

ಕೊರೋನಾ ಮತ್ತೆ ಕಾಟ ಶುರು ಮಾಡ್ತಾ..? ಕೋವಿಡ್ ಹೊಸ ವೈರಸ್​ ಪತ್ತೆಯಿಂದ ಹೆಚ್ಚಿದ ಆತಂಕ…!

ಬೆಂಗಳೂರು: ಕೋರೋನಾ ಮಹಾಮಾರಿ ಕ್ರಮೇಣ ಕಡಿಮೆಯಾಗಿದ್ದು, ಜನ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಇದೀಗ ಮತ್ತೆ ಕೊರೋನ ತನ್ನ ಆಟ ಶುರುಮಾಡಿರುವಂತಿದ್ದು, ಕೋವಿಡ್ ಹೊಸ ವೈರಸ್​ ಪತ್ತೆಯಿಂದಾಗಿ ಆತಂಕ ಹೆಚ್ಚಾಗಿದೆ. ಕೊರೋನಾ ಮತ್ತೆ ಕಾಟ ಶುರು ಮಾಡಿದ್ದು, ಕೋವಿಡ್ ಹೊಸ ವೈರಸ್​ ಪತ್ತೆಯಿಂದ ...

Read more

ಮಹಿಳಾ ಸಿಬ್ಬಂದಿ ಜೊತೆ ಡಾಕ್ಟರ್ ರಂಗಿನಾಟ…! ಮಂಗಳೂರಿನಲ್ಲಿ ಸರ್ಕಾರಿ ಡಾಕ್ಟರ್ ನ ಕಾಮದಾಟದ ವಿಡಿಯೋ ಬಹಿರಂಗ…!

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ಪ್ರತಿಷ್ಟಿತ ವೈದ್ಯ ಮಹಿಳಾ ಸಿಬ್ಬಂದಿ ಜೊತೆ ಸರಸ ಸಲ್ಲಾಪ ಆಟವಾಡಿದ್ದಾನೆ. ವೆನ್ಲಾಕ್ ಆಸ್ಪತ್ರೆಯ ಕುಷ್ಠರೋಗ ವಿಭಾಗದ ವೈದ್ಯಾಧಿಕಾರಿ, ಆಸ್ಪತ್ರೆಯ 9 ಮಂದಿ ಸಿಬ್ಬಂದಿ ಜೊತೆ ಈ ರೀತಿ ಅಸಭ್ಯವಾಗಿ ನಡೆದುಕೊಂಡಿದ್ದು, ಮಹಿಳಾ ಸಿಬ್ಬಂದಿಯನ್ನ  ತೊಡೆಮೇಲೆ ಕೂರಿಸಿಕೊಂಡು...

Read more

ದೈನಂದಿನ ರಾಶಿ ಭವಿಷ್ಯ..! 26/11/21

ದಕ್ಷಿಣಾಯನ ಶರದ್  ಋತು ಆಶ್ವೀಜ ಮಾಸ ಕೃಷ್ಣ ಪಕ್ಷ ಸಪ್ತಮಿ ಶುಕ್ರವಾರ ಸೂರ್ಯೋದಯ ಬೆಳಗ್ಗೆ : 06:52 AM ಸೂರ್ಯಾಸ್ತ ಸಂಜೆ :05:24 PM ಚಂದ್ರೋದಯ : 11:16 PM ಚಂದ್ರಾಸ್ತ : 12:21 PM ರಾಹುಕಾಲ : 01:27 PM to 02:46 PM ಗುಳಿಕಕಾಲ: 08:11 AM to 09:30 AM ಯಮಗಂಡಕಾಲ :...

Read more

ಪೈಪ್​​ನಲ್ಲಿ ಕಂತೆ-ಕಂತೆ ಹಣ ಬಚ್ಚಿಟ್ಟಿದ್ದ ಶಾಂತಗೌಡ… ಪೈಪ್​ ಒಳಗಿದ್ದ ನೋಟಿನ ಸೀಕ್ರೆಟ್ ACB ಟೀಂಗೆ ಗೊತ್ತಾಗಿದ್ಹೇಗೆ..?

ಕಲಬುರಗಿ:  ನಿನ್ನೆ ನಡೆದ ಎಸಿಬಿ ದಾಳಿಯಲ್ಲಿ ಕಲಬುರಗಿಯ PWD ಜೆಇ ಶಾಂತಗೌಡ ಬಿರಾದಾರ್​​​​​ ಮನೆಯ ಪೈಪ್​ನಲ್ಲಿ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಇದನ್ನೂ ನೋಡಿದ ಎಸಿಬಿ ಅಧಿಕಾರಿಗಳೇ ಶಾಕ್​ಗೆ ಒಳಗಾಗಿದ್ದರು. ಅಷ್ಟಕ್ಕೂ ಬಿರಾದಾರ್​​​​​ ಮನೆಯ ​ ಪೈಪ್​​ನಲ್ಲಿ ಕಂತೆ-ಕಂತೆ ಹಣ ಸಿಕ್ಕಿದ್ದು...

Read more

#Flashnews ವಿಚಾರಣೆ ಮುಗಿಸಿ ಠಾಣೆಯಿಂದ ಹೊರಟ ಹಂಸಲೇಖ… ಬಸವನಗುಡಿ ಠಾಣೆ ಎದುರೇ ನಟ ಚೇತನ್ ಧರಣಿ…

ಬೆಂಗಳೂರು: ಬಸವನಗುಡಿ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ ನಡೆಯುತ್ತಿದ್ದು, ವಿಚಾರಣೆ ಮುಗಿಸಿ ಠಾಣೆಯಿಂದ  ಹಂಸಲೇಖ ಹೊರಟಿದ್ದಾರೆ. ಹಂಸಲೇಖ ಅವರು ತಮ್ಮ ಪತ್ನಿ ಲತಾ, ಲಾಯರ್​​​​ ಸಮೇತ ಬಂದು ನೋಟಿಸ್​ಗೆ ಉತ್ತರ ನೀಡಿದ್ದಾರೆ. ಸಂಗೀತ ನಿರ್ದೇಶಕ ಹಂಸಲೇಖ ಬೆಂಬಲಕ್ಕೆ ನಟ ಚೇತನ್​​​​ ಬಂದಿದ್ದರು....

Read more

ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ… ಬರೋಬ್ಬರಿ 850 ಕ್ಕೂ ಹೆಚ್ಚು ಮೊಬೈಲ್ ವಶಕ್ಕೆ …

ನೆಲಮಂಗಲ:  ಮಾದನಾಯಕನಹಳ್ಳಿ ಪೊಲೀಸರ ಭರ್ಜರಿ ಕಾರ್ಯಚರಣೆ ನಡೆಸಿದ್ದು, ಹಳೆಯ ಪ್ರಕರಣ ಭೇದಿಸಿ ಬರೋಬ್ಬರಿ 850 ಕ್ಕೂ ಹೆಚ್ಚು ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. 60 ಲಕ್ಷ ಮೌಲ್ಯದ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದ್ದು,  ಆರು ಮಂದಿ ಆರೋಪಿಗಳನ್ನ ಬಂಧಿಸಲಾಗಿದೆ. ಯೋಗೇಶ್, ಸಂದೀಪ್,...

Read more

ನಾಳೆ ಬೆಂಗಳೂರಿನಲ್ಲಿ RRR ಸಿನಿಮಾ ಸುದ್ದಿಗೋಷ್ಠಿ… ಸಿಲಿಕಾನ್ ಸಿಟಿಗೆ ಬರಲಿದ್ದಾರೆ ಟಾಲಿವುಡ್ ನಿರ್ದೇಶಕ ಎಸ್.ಎಸ್ ರಾಜಮೌಳಿ….

ಬೆಂಗಳೂರು: ನಾಳೆ ಬೆಂಗಳೂರಿಗೆ ಟಾಲಿವುಡ್ ನಿರ್ದೇಶಕ ಎಸ್.ಎಸ್ ರಾಜಮೌಳಿ ಆಗಮಿಸಲಿದ್ದಾರೆ. 5 ಭಾಷೆಗಳಲ್ಲಿ ನಿರ್ಮಾಣ ಆಗಿರುವ ಬಹುಕೋಟಿ ವೆಚ್ಚದ RRR ಸಿನಿಮಾದ  ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ. RRR ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ಜ್ಯೂ.‌ಎನ್ ಟಿಆರ್, ರಾಮ್...

Read more

ಜೈಲು ಸೇರುತ್ತಿದ್ದಂತೆ ಶಾಂತಗೌಡ ಬಿರಾದಾರ್​ಗೆ ಅನಾರೋಗ್ಯ… ಕಲಬುರಗಿ PWD ಜೆಇ ಶಾಂತಗೌಡ ಆಸ್ಪತ್ರೆಗೆ ದಾಖಲು…

ಕಲಬುರಗಿ: ಕಲಬುರಗಿಯ ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಶಾಂತಗೌಡ ಬಿರಾದರ್ ಮನೆಯ ಮೇಲೆ ಎಸಿಬಿ ದಾಳಿ ನಡೆಸಿದ್ದು, ಮನೆಯ ಬಾತ್ ರೂಂ ಪೈಪ್ ನಲ್ಲೂ ಕಂತೆ ಕಂತೆ ಹಣ ಪತ್ತೆಯಾಗಿತ್ತು. ಈ ಹಿನ್ನೆಲೆ ಶಾಂತಗೌಡರನ್ನ ಎಸಿಬಿ ಅಧಿಕಾರಿಗಳು ಬಂಧಿಸಿದ್ದು, ಜೈಲು ಸೇರುತ್ತಿದ್ದಂತೆ...

Read more

ಸಿಲಿಕಾನ್​ ಸಿಟಿ ಈಗ ಲೋನ್​ ಸಿಟಿ… ಸಾಲದಲ್ಲೂ ನಂಬರ್​​​​ ಒನ್​​ ನಮ್ಮ ಬೆಂಗಳೂರು…

ಬೆಂಗಳೂರು: ಸಿಲಿಕಾನ್​ ಸಿಟಿ ಈಗ ಲೋನ್​ ಸಿಟಿಯಾಗಿದೆ. ಸಾಲ ಪಡೆಯುವವರ ಪ್ರಮಾಣದಲ್ಲಿ ಬೆಂಗಳೂರು ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಈ ಬಗ್ಗೆ ಹೋಮ್‌ ಕ್ರೆಡಿಟ್‌‍ನ ಹೌ ಇಂಡಿಯಾ ಬಾರೋಸ್‌ 2021 ಸಮೀಕ್ಷೆಯಲ್ಲಿ ತಿಳಿಸಿದ್ದಾರೆ.  ಕೋವಿಡ್‌ 2ನೇ ಅಲೆ ನಂತರ...

Read more

#Flshnews ಬಸವನಗುಡಿ ಪೊಲೀಸ್ ಠಾಣೆಗೆ ಆಗಮಿಸಿದ ಹಂಸಲೇಖ, ಚೇತನ್…

ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ಧ ಸಂಗೀತ ನಿರ್ದೇಶಕ ಹಂಸಲೇಖ ಅವಹೇಳನಕಾರಿ ಹೇಳಿಕೆ ನೀಡಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ, ಹಂಸಲೇಖ ವಿರುದ್ಧ FIR ದಾಖಲಿಸಲಾಗಿತ್ತು. ಈ ಹಿನ್ನೆಲೆ ಇಂದು ಹಂಸಲೇಖ ಪೊಲೀಸ್​ ವಿಚಾರಣೆಗೆ ಹಾಜರಾಗಲು ಹಂಸಲೇಖ ಅವರು ಬಸವನಗುಡಿ ಪೊಲೀಸ್​​ ಠಾಣೆಗೆ ಆಗಮಿಸಿದ್ದಾರೆ....

Read more

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ​​… ಗೆಲುವಿಗಾಗಿ ಕೆಂಚಪ್ಪಗೌಡ ಮತ್ತು ಟೀಂನಿಂದ ರಣತಂತ್ರ…

ಬೆಂಗಳೂರು:  ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಡಿಸೆಂಬರ್​​ 12ರಂದು ಎಲೆಕ್ಷನ್​​ ಫಿಕ್ಸ್ ಆಗಿದೆ. ಸಂಘದ 35 ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಅಂದು ಚುನಾವಣೆ ನಡೆಯಲಿದೆ. ಒಕ್ಕಲಿಗ ಸಂಘದ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ​​ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕೆಂಚಪ್ಪಗೌಡ ಮತ್ತು...

Read more

ಬಸವನಗುಡಿ ಠಾಣೆಗೆ ಹಾಜರಾಗಲಿರೋ ಹಂಸಲೇಖ… ಠಾಣೆ ಬಳಿ ಯಾವುದೇ ಗದ್ದಲಗಳು ಆಗದಂತೆ ಪೊಲೀಸರಿಂದ ಬಿಗಿ ಭದ್ರತೆ…

ಬೆಂಗಳೂರು: ಬಸವನಗುಡಿ ಠಾಣೆ ಮುಂದೆ ಫುಲ್ ಟೆನ್ಷನ್ ಶುರುವಾಗಿದ್ದು, ಇಂದು ವಿಚಾರಣೆಗಾಗಿ ಸಂಗೀತ ನಿರ್ದೇಶಕ ಹಂಸಲೇಖ ಹಾಜರಾಗಲಿದ್ದಾರೆ. ಈ ಹಿನ್ನೆಲೆ ಈಗಾಗಲೇ ಪೊಲೀಸ್​ ಠಾಣೆ ಮುಂದೆ ಭಜರಂಗದಳ ಹಾಗೂ ಹಿಂದೂಪರ ಸಂಘಟನೆಯ ಸದಸ್ಯರು ಜಮಾಯಿಸುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್​...

Read more

‘ಪ್ರಧಾನ ಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ್‌’ ಯೋಜನೆ… 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ…!

ಬೆಂಗಳೂರು: ರಾಜ್ಯದ ಏಳು ಜಿಲ್ಲೆಗಳ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳ ಮಕ್ಕಳಿಗೆ ಮೊಟ್ಟೆ ನೀಡಲು ಸರ್ಕಾರ ಆದೇಶ ನೀಡಿದೆ. 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆ ಬೇಯಿಸಿದ ಮೊಟ್ಟೆ ನೀಡಲಾಗುತ್ತದೆ. ಮೊಟ್ಟೆ ತಿನ್ನದವರಿಗೆ...

Read more

ಮನೆಯಲ್ಲೇ ಚಿನ್ನದ ಅಂಗಡಿ ಇಟ್ಟ ಕೃಷಿ ಅಧಿಕಾರಿ..ಇಂದು ರುದ್ರೇಶಪ್ಪನ ಸೀಕ್ರೆಟ್ ಲಾಕರ್ ಓಪನ್…!

ಶಿವಮೊಗ್ಗ: ನಿನ್ನೆ ನಡೆದ ಕೃಷಿ ಇಲಾಖೆಯ ಜೆಡಿ ರುದ್ರೇಶಪ್ಪನವರ ಮೇಲೆ ಎಸಿಬಿ ದಾಳಿಯಾಗಿದ್ದು ಈ ಹಿನ್ನೆಲೆ, ಇಂದು ರುದ್ರೇಶಪ್ಪ ನ್ನವರ ಸೀಕ್ರೆಟ್ ಲಾಕರನ್ನ ಎಸಿಬಿ ಓಪನ್ ಮಾಡಲಿದ್ದಾರೆ.  ರುದ್ರೇಶಪ್ಪ ನವರ SBI ಬ್ಯಾಂಕ್ ನಲ್ಲಿ 2 ಸೀಕ್ರೆಟ್ ಲಾಕರ್ ಇದ್ದು, ಚನ್ನಗಿರಿಯಲ್ಲಿ ಸುಮಾರು...

Read more

ACB ದಾಳಿ ಅಭಿಯಾನದ ರೀತಿ ನಡೆಯುತ್ತಿಲ್ಲ… ಭ್ರಷ್ಟರ ವಿರುದ್ಧ ದೂರು ಬಂದ ಹಿನ್ನೆಲೆ ದಾಳಿಯಾಗ್ತಿದೆ: ಆರಗ ಜ್ಞಾನೇಂದ್ರ…!

ಬೆಂಗಳೂರು: ನೆನ್ನೆಯಿಂದ ರಾಜ್ಯದಲ್ಲಿ ಎಸಿಬಿ ದಾಳಿ ನಡೆಯುತ್ತಿದ್ದು, ಈ ದಾಳಿ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಭ್ರಷ್ಟಾಚಾರ ಮುಕ್ತ ಆಡಳಿತಕ್ಕೆ ನಮ್ಮ ಸರ್ಕಾರ ಬದ್ಧ, ACB ಈ ನಿಟ್ಟಿನಲ್ಲಿ ಭ್ರಷ್ಟರ ಮೇಲೆ ದಾಳಿ‌ ಮಾಡ್ತಿದೆ ಎಂದು ಹೇಳಿದ್ದಾರೆ. ಈ...

Read more

ಹಂಸಲೇಖ ವಿವಾದಾತ್ಮಕ ಹೇಳಿಕೆ …! ವಿಚಾರಣೆಗೆ ಇಂದು ಹಂಸಲೇಖ ಹಾಜರ್​…! ನಾನು‌ ನಿಮ್ಮ ಜೊತೆ ಬರುತ್ತೇನೆ ಎಂದ ನಟ ಚೇತನ್…!

ಬೆಂಗಳೂರು: ಪೇಜಾವರ ಶ್ರೀಗಳ ವಿರುದ್ಧ ಸಂಗೀತ ನಿರ್ದೇಶಕ ನಾದ ಬ್ರಹ್ಮ ಹಂಸಲೇಕ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಹೇಳಿಕೆ ಸಂಬಂಧ ಹಂಸಲೇಖ ಮೇಲೆ FIR ದಾಖಲಿಸಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್​ ನೀಡಿದ್ದರು, ಈ ಹಿನ್ನೆಲೆ ಹಂಸಲೇಖ ಇಂದು ಪೊಲೀಸ್​ ವಿಚಾರಣೆಗೆ ಹಾಜಾರಾಲಿದ್ದು,...

Read more
Page 1 of 53 1 2 53

FOLLOW ME

INSTAGRAM PHOTOS